Boss Movie Review: “Boss” is about friendship, admiration, murder and hardships

Boss Movie Review : ಸ್ನೆಹಿತೆ, ಅಭಿಮಾನ, ಕೊಲೆ ಮತ್ತು ಸಂಕಷ್ಠಗಳ ಸುತ್ತಾ “ಬಾಸ್” - CineNewsKannada.com

Boss Movie Review : ಸ್ನೆಹಿತೆ, ಅಭಿಮಾನ, ಕೊಲೆ ಮತ್ತು ಸಂಕಷ್ಠಗಳ ಸುತ್ತಾ “ಬಾಸ್”

ಚಿತ್ರ : ಬಾಸ್
ನಿರ್ದೇಶನ: ವಿ ಲವ
ತಾರಾಗಣ: ತನುಶ್ ಶಿವಣ್ಣ, ವಂದಿತಾಗೌಡ, ಪಾಯಲ್ ಚೆಂಗಪ್ಪ, ಸಂದೀಪ್ ನೀನಾಸಂ, ಲಕ್ಷಣ್ ಪೂಜಾರಿ, ಸುಜನೀತ್ ಶೆಟ್ಟ, ವಿಜೇಶ್ ಲೀ, ಭೀಷ್ಮ ರಾಮಯ್ಯ ಮತ್ತಿತರರು
ರೇಟಿಂಗ್: *** 3.5 /5

ಕೊಲೆಯ ಸುತ್ತ ನಡೆಯುವ ರೋಚಕ ಘಟನೆಗಳನ್ನು ಮುಂದಿಟ್ಟುಕೊಂಡು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ ಬಾಸ್”. ಆರಂಭದಿಂದ ಕೊನೆಯತನಕ ಹೀಗೆ ಆಗಬಹುದೆಲ್ಲಾ ಎನ್ನುವ ಕುತೂಹಲ ಕಾಪಾಡಿಕೊಂಡಿದೆ.

ಸ್ನೇಹಿತೆ, ಅಭಿಮಾನ, ಕೊಲೆ ಮತ್ತು ಅದರಿಂದ ಎದುರಾಗುವ ಸಂಕಷ್ಠಗಳ ಸುತ್ತ ಸಾಗುವ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ವಿ. ಲವ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಬಾಸ್ ಎಂದಾಕ್ಷಣ ಅಭಿಮಾನಿಗಳಲಿ ಕುತೂಹಲ ಜಾಸ್ತಿ, ಸಿನಿಮಾ ಅವರಿಗೆ ಸಂಬಂಧಿಸಿದ್ದಾ ಎನ್ನುವ ಪ್ರಶ್ನೆ ಕಾಡುವುದು ಸಹಜ ಅದು, ಹೌದ ಅಥವಾ ಇಲ್ಲವೆ ಎನ್ನುವುದನ್ನು ತಿಳಿಯಬೇಕಾದರೆ ಸಿನಿಮಾ ನೋಡಬೇಕು. ಸಿನಿಮಾ ನೋಡಿದ ಮೇಲೆ ಆ ಬಗ್ಗೆ ತೀರ್ಮಾನ ಸಿನಿಮಾ ವೀಕ್ಷಿಸಿದ ಮಂದಿಯದ್ದು.

ಬಿಸಿಬಿ ತಂಡದಲ್ಲಿ ಕ್ರಿಕೆಟ್ ಆಟಗಾರ ತನುಶ್ ಅಲಿಯಾಸ್ ಬಾಸ್ ( ತನುಶ್ ಶಿವಣ್ಣ) ಕ್ರಿಕೆಟ್ ಆಯಿತು ಅವರ ಲೋಕವಾಯಿತು ಎಂದು ಅದರಲ್ಲಿ ತೊಡಗಿಸಿಕೊಂಡವರು. ಅವರ ಗೆಳತಿ ಶೀಲಾಗೌಡ ( ವಂದಿತಾ ಗೌಡ)ಗೆ ಬರುವ ಸಂದೇಶಗಳಿಂದ ಆಕೆಯ ಮನೆಯಲ್ಲಿರುವ ಕೆಲಸದಾಳು ( ಲಕ್ಷಣ್ ಪೂಜಾರಿ) ಮತ್ತು ಬಾಸ್ ಅಭಿಮಾನಿಗಳು ಮಾಡುವ ಆ ಒಂದು ಕೆಲಸ ಸಂಕಷ್ಠದಲ್ಲಿ ಸಿಲುಕುವಂತೆ ಮಾಡುತ್ತಿದೆ.

ಇಷ್ಟಕ್ಕೂ ಅಭಿಮಾನದ ಪರಕಾಷ್ಠತೆಯಲ್ಲಿ ಮಾಡಿದ ಕೆಲಸವಾದರೂ ಏನು, ಇದಕ್ಕೂ ಬಾಸ್‍ಗೂ ಏನು ಸಂಬಂಧ, ಗೆಳತಿ, ಹೆಂಡತಿಯ ಪಾತ್ರ ಏನು ಅಥವಾ ಇದೆಯಾ ಎನ್ನುವುದು ಕುತೂಹಲಕಾರಿ ಅದನ್ನು ತಿಳಿಯಲು ಸಿನಿಮಾ ನೋಡಿದರೆ ಚೆನ್ನ.

ನಿರ್ದೇಶಕ ವಿ. ಲವ, ವೃತ್ತಿಯಲ್ಲಿ ವಕೀಲರು ಎಂದು ಹೇಳಿಕೊಳ್ಳುತ್ತಾರೆ, ಸೂಕ್ಷ್ಮ ವಿಷಯವನ್ನು ತೆರೆಗೆ ತರಬೇಕಾದಾಗ ಅದರಿಂದ ಎದುರಾಗುವ ಸಮಸ್ಯೆಗಳು ಮತ್ತು ಸಂಕಷ್ಠಗಳನ್ನು ಅರಿತೇ ಇಂತಹ ವಿಷಯಕ್ಕೆ ಕೈ ಹಾಕಿದ್ದಿರಬಹುದು, ಏನೇ ಆದರೂ ಸೂಕ್ಷ್ಮ ವಿಷಯಗಳನ್ನು ತೆರೆಗೆ ತರುವಾದ ಅತಿಯಾದ ಜಾಗೃತೆ ವಹಿಸುವುದು ತುಂಬಾ ಅಗತ್ಯ ಮತ್ತು ಅನಿವಾರ್ಯವೂ ಕೂಡ

ನಟ ತನುಶ್ ಶಿವಣ್ಣ, ಈವರೆಗಿನ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಗಮನ ಸೆಳೆದಿದ್ದಾರೆ ಕೂಡ,ನಟಿ ವಂದಿತಾ ಗೌಡ, ಪಾಯಲ್ ಚೆಂಗಪ್ಪ, ಸಂದೀಪ್ ನೀನಾಸಂ, ಲಕ್ಷಣ್ ಪೂಜಾರಿ, ಸುಜನೀತ್ ಶೆಟ್ಟ, ವಿಜೇಶ್ ಲೀ, ಭೀಷ್ಮ ರಾಮಯ್ಯ ಸೇರಿದಂತೆ ಮತ್ತಿತರರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

ಬಾಸ್ ಸಿನಿಮಾ ಅಂದಾಕ್ಷಣ ಎದುರಾಗುವ ಕುತೂಹಲಕ್ಕಾಗಿಯಾದರೂ ಜನ ಸಿನಿಮಾ ನೋಡಬಹುದು, ಈ ಎಲ್ಲಾ ಘಟನೆಗಳಾ ಟಿವಿ ನೋಡಿದವರಿಗೆಲ್ಲಾ ತಿಳಿದಿದೆ ಅಂದುಕೊಂಡಿದ್ದಾರೆ ಎನ್ನುವುದು ಕೂಡ ಕುತೂಹಲಕಾರಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin