Life Today Movie Review : ಮಗಳ ಮೇಲಿನ ಅತಿಯಾದ ಮಮಕಾರದ ಸುತ್ತ ಸಾಗುವ ಕಥನ “ಲೈಫ್ ಟುಡೆ” - CineNewsKannada.com

Life Today Movie Review : ಮಗಳ ಮೇಲಿನ ಅತಿಯಾದ ಮಮಕಾರದ ಸುತ್ತ ಸಾಗುವ ಕಥನ “ಲೈಫ್ ಟುಡೆ”

ಚಿತ್ರ; ಲೈಫ್ ಟುಡೆ
ನಿರ್ದೇಶನ ; ಕಾಂತ ಕನ್ನಲ್ಲಿ
ತಾರಾಗಣ : ಕಿರಣ್ ಆದಿತ್ಯ, ಲೇಖಾಚಂದ್ರ, ತಬಲನಾಣಿ, ಅಪೂರ್ವಶ್ರೀ, ಸಂಗೀತ ಅನಿಲ್ ಕಾಕ್ರೋಚ್ ಸುಧೀ,ಜಗ್ಗಪ್ಪ, ಸಂದೀಪ್ ಮಲಾನಿ ಮತ್ತಿತರರು
ರೇಟಿಂಗ್ : *** 3.5/ 5

ಕನ್ನಡದಲ್ಲಿ ಇತ್ತೀಚೆಗೆ ತೀರಾ ವಿಭಿನ್ನ ಮತ್ತು ಹೊಸತನದ ಕಥೆಗಳ ಚಿತ್ರಗಳು ಸೆಟ್ಟೇರುತ್ತಿವೆ. ಜೊತೆಗೆ ಪ್ರೇಕ್ಷಕರ ಮುಂದೆ ಬರುತ್ತಿವೆ. ಇದೀಗ ಹೊಸ ತಂಡ ಮತ್ತೊಂದು ಹೊಸ ರೀತಿಯ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಅದುವೇ “ ಲೈಫ್ ಟುಡೆ’.

ಮಗಳ ಮೇಲೆ ತಂದೆಗಿರುವ ಅತಿಯಾದ ಪ್ರೀತಿ, ಮಮಕಾರ, ಶ್ರೀಮಂತಿಕೆ ಸುಪ್ಪತ್ತಿನಲ್ಲಿ ಮೆರದ ಮಂದಿಯ ಜೀವನ ಕ್ರಮ, ಮದ್ಯಮ ವರ್ಗದ ಜನರ ಬದುಕು ಬವಣೆ, ನೋವು, ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು “ಲೈಫ್ ಟುಡೆ” ಚಿತ್ರವನ್ನು ಜನರ ಮುಂದೆ ತರಲಾಗಿದೆ.

ಚಿತ್ರದ ಮೂಲಕ ಯುವ ನಟ ಕಿರಣ್ ಆದಿತ್ಯ ಬೆಳ್ಳಿ ಪರದೆಗೆ ಪರಿಚಯವಾಗಿದ್ದು ಇನ್ನೊಂದಿಷ್ಟು ತಯಾರಿ ಮಾಡಿಕೊಂಡರೆ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಉತ್ತಮ ನಟ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚಿಕ್ಕಮಗಳೂರಿನ ಹಳ್ಳಿಯೊಂದರಲ್ಲಿ ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ಶಿವು ( ಕಿರಣ್ ಆದಿತ್ಯ)ಗೆ ಅನ್ಯಾಯ ಕಂಡರೆ ಆಗದು, ಅದನ್ನು ನೋಡಿಕೊಂಡು ಸುಮ್ಮನಿರದವ. ಸಂಕಷ್ಟಕ್ಕೆ ಸಿಲುಕಿದ ಅಮೃತ ( ಲೇಖಾ ಚಂದ್ರ) ಮತ್ತು ಅವರ ಅಪ್ಪನನ್ನು ಸಂಕಷ್ಠದಿಂದ ಪಾರು ಮಾಡ್ತಾನೆ.

ಈತನ ಗುಣ ನೋಡಿ ಅಮೃತ ಪ್ರೀತಿಯಲ್ಲಿ ಬೀಳ್ತಾಳೆ. ಯಾರೂ ದಿಕ್ಕು ದೆಸೆ ಇಲ್ಲದ ಹುಡುಗ ಆಕೆಯ ಪ್ರೀತಿಯನ್ನು ನಿರಾಕರಿಸುತ್ತಾನೆ, ಆದರೆ ಅದು ಆಗುವುದೇ ಬೇರೆ. ಇಬ್ಬರು ಅತಿಯಾಗಿ ಪ್ರೀತಿ ಮಾಡಲು ಮುಂದಾಗುತ್ತಾರೆ. ಇದನ್ನು ಕಂಡ ಅಪ್ಪ (ತಬಲ ನಾಣಿ) ಅವರಿಬ್ಬರನ್ನು ದೂರ ಮಾಡಲು ಮುಂದಾಗುತ್ತಾನೆ, ಇದೇ ಸಮಯಕ್ಕೆ ಶ್ರೀಮಂತ ಯುವಕ ಸಿಕ್ಕಾಗ ಮಗಳಿಗೆ ಮದುವೆ ಮಾಡಿಬಿಡ್ತಾರೆ.

ಅಲ್ಲಿಂದ ಕತೆ ಮತ್ತೊಂದು ಮಗ್ಗಲು ಪಡೆದುಕೊಂಡಿದೆ. ಶ್ರೀಮಂತ ಹುಡುಗ ಮಗಳನ್ನು ಚೆನ್ನಾಗಿ ನೋಡಿಕೊಳ್ತಾನಾ, ಇತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟು ಬೇರೊಬ್ಬನ ಜೊತೆ ಮದುವೆಯಾಗಿ ಹೋದಾಗ ಒಡೆದ ಹೃದಯ ಏನು ಮಾಡುತ್ತದೆ, ಇತ್ತ ಅಪ್ಪ ಮಾಡಿದ ನಿರ್ಧಾರ ಸರಿಯೇ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.

ಮೊದಲ ಪ್ರಯತ್ನದಲ್ಲಿ ನಟ ಕಿರಣ್ ಆದಿತ್ಯ ಗಮನ ಸೆಳೆದಿದ್ದಾರೆ. ಹಾಡು, ಪೈಟ್‍ನಲ್ಲಿ ಮಿಂಚಿದ್ಧಾರೆ. ನಟನೆಯಲ್ಲಿ ಮತ್ತಷ್ಟು ಪಳಗಬೇಕಾಗಿದೆ.
ನಟಿ ಲೇಖಾಚಂದ್ರಗೆ ತಮ್ಮ ಅಭಿನಯ ಹೊರಹಾಕಲು ಅತ್ಯುತ್ತಮ ಅವಕಾಶ ಸಿಕ್ಕಿದೆ, ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಕೂಡ. ನಾಯಕ ಪ್ರಧಾನ ಚಿತ್ರದಲ್ಲಿ ಮಹಿಳಾ ಪ್ರಧಾನ ಚಿತ್ರ ಬಂದಿರುವುದು ಹೆಗ್ಗಳಿಕೆಯ ವಿಷಯವೇ ಸರಿ

ತಬಲ ನಾಣಿ, ಅಪೂರ್ವಶ್ರೀ, ಸಂಗೀತ ಅನಿಲ್, ಕಾಕ್ರೋಚ್ ಸುಧಿ, ಜಗ್ಗಪ್ಪ ತಮಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಚಿತ್ರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin