Jolly' Movie Review: A blend of action, thriller, and sentiment—'Jolly' is a love story featuring the romance of Janu

Jolly Movie Review ; ಆಕ್ಷನ್,ಥ್ರಿಲ್ಲರ್ ಸೆಂಟಿಮೆಂಟ್ ಜೊತೆಗೆ ಜಾಲಿ.. ಜಾನು ಪ್ರೇಮಕಥೆಯ ಚಿತ್ರ “ಜಾಲಿ” - CineNewsKannada.com

ಚಿತ್ರ ; ಜಾಲಿ
ನಿರ್ದೇಶನ ; ತಾರುಷ್ ಕೃಷ್ಣ
ತಾರಾಗಣ : ತಾರುಷ್ ಕೃಷ್ಣ, ಪದ್ಮಶ್ರೀ, ಶೋಭರಾಜ್, ರೇಖಾದಾಸ್ , ಡಿ ಕೃಷ್ಣಪ್ಪ ವೇಣುಗೋಪಾಲ್, ಸುಶ್ಮಿತಾ ಜಗ್ಗಪ್ಪ, ಅಭಿ ಸಮರ್ಥ್, ಭರತ್ ಶಿವಣ್ಣ ಮತ್ತಿತರರು
ರೇಟಿಂಗ್: *** 3.5 / 5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಪ್ರತಿಭೆಗಳು ಚಿತ್ರರಂಗದಲ್ಲಿ ಅದೃಷ್ಟ ಹುಡುಕುತ್ತಿದ್ದಾರೆ. ಅದರಲ್ಲಿಯೂ ನವೀನ ಕಥೆಗಳು ಮತ್ತು ಕಂಟೆಂಟ್ ಮೂಲಕ ಜನರ ಮನಗೆಲ್ಲುತ್ತಿದ್ದಾರೆ. ಆ ಸಾಲಿಗೆ ಸೇರಬಹುದಾದ ಮತ್ತೊಂದು ಚಿತ್ರ ” ಜಾಲಿ”.

ಪ್ರೀತಿ, ಸ್ನೇಹ, ರೌಡಿಸಂ, ಅಪ್ಪ- ಮಗಳ ಭಾವನಾತ್ಮಕ ಸಂಬಂದ ಕಥೆ ಹೊಂದಿರುವ ವಿಭಿನ್ನ ಚಿತ್ರವನ್ನು ನಿರ್ದೇಶಕ ತಾರುಷ್ ಕೃಷ್ಣ , ಸಿನಿಮಾದ ಪರಿಭಾಷೆಗೆ ಹೊಂದಿಸಿ,ಒಗ್ಗಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಇತ್ತೀಚಿಗೆ ಬರುತ್ತಿರುವ ಸಿನಿಮಾಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಚ್ ಐವಿ ಪಾಸಿಟೀವ್ ಎಂದು ಗೊತ್ತಾದ ಬಳಿಕವೂ ಆ ಮಹಿಳೆಯನ್ನು ಅದರಿಂದ ಪಾರು ಮಾಡಲು ಮತ್ತು ಆಕೆಯನ್ನು ಆರೈಕೆ ಮಾಡುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಎಚ್. ಐ ವಿ ರೋಗ ಹೇಗೆ ಬಂತು.. ಯಾವೆಲ್ಲಾ ಕಾರಣದಿಂದ ಬರಬಹುದು ಎನ್ನುವ ಚರ್ಚೆಗೆ ನಾಂದಿ ಹಾಡಿದ್ದಾರೆ.

ಓದಿಕೊಂಡೇ ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಜಾಲಿ ( ತಾರುಷ್ ಕೃಷ್ಣ) ತನ್ನ ತಂಟೆಗೆ ಬಂದವರನ್ನು ಹೆಡೆ ಮುರಿ ಕಟ್ಟಿಬಿಡುವಷ್ಡು ಗಟ್ಟಿಗ, ಕಾಲೇಜಿನಲ್ಲಿ ಆಕಸ್ಮಿಕವಾಗಿ ಪರಿಚಿತವಾದ ಜಾನು ( ಪದ್ನಶ್ರೀ) ಗೆ ಮೊದಲ ನೋಟದಲ್ಲಿಯೇ ಪ್ರೀತಿ. ಆಕೆಯ ಅಪ್ಪ ದಾದ ( ಡಿ ಕೃಷ್ಣಪ್ಪ ವೇಣುಗೋಪಾಲ್) ಅಮ್ಮನಿಲ್ಲದ ಮಗಳನ್ನು ಕಣ್ಣ ರೆಪ್ಪೆಯಂತ‌ ಪ್ರೀತಿಯಿಂದ ಕಾಪಾಡಿಕೊಂಡು ಬಂದವ.

ಮಗಳನ್ನು ಮತ್ತೊಬ್ಬ ವಿಲನ್ ಶೋಭರಾಜ್ ಮಗನೊಂದಿಗೆ ಮದುವೆ ನಿಶ್ವಿತ ಮಾಡ್ತಾರೆ. ಆದರೆ ಜಾನುಗೆ ಜಾಲಿಯ ಮೇಲೆ ಪ್ರೀತಿ ಜಾಸ್ತಿ. ಅತಿಯಾಗಿ ಪ್ರೀತಿಸಿದ ಅಪ್ಪನಿಗೆ ಸೆಡ್ಡು ಹೊಡೆದು ಜಾಲಿ ಜೊತೆ ಒಂದು ತಿಂಗಳು ಲಿವಿಂಗ್ ರಿಲೇಶನ್ಸ್ ನಲ್ಲಿರುತ್ತಾಳೆ. ತಾಯಿ ಕಳೆದುಕೊಂಡ ಆತ ಈಕೆಯಲ್ಲಿಯೇ ತಾಯಿ ಕಂಡವ.

ತನ್ನಿಚ್ಚೆಗೆ ವಿರುದ್ದವಾಗಿ ಮನೆಯಿಂದ ಹೊರ ಹೋದ ಮಗಳನ್ನು ಅಪ್ಪ ಸುಮ್ಮನೆ ಕಳುಹಿಸುತ್ತಾನಾ.. ಅಥವಾ ಜಾಲಿ ಯಾರು.. ಅವರ ಅಪ್ಪ ಯಾರು.. ಎಚ್ ಐವಿ ವಿಷಯ ಯಾಕೆ ಪ್ರಸ್ತಾಪ ಆಯ್ತು ,ಇದರ ಹಿಂದೆ ಇರುವ ಉದ್ದೇಶವಾದರೂ ಏನು ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು.

ನಟನೆ ಜೊತೆಗೆ ನಿರ್ದೇಶನವನ್ನೂ ಮಾಡಿರುವ ನಟ ತಾರುಷ್ ಕೃಷ್ಣ ಮೊದಲ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ. ಹಾಡು, ಪೈಟ್, ಡ್ಯಾನ್ಸ್ ನಲ್ಲಿ ಗಮನ ಸೆಳೆದಿದ್ದಾರೆ. ನಟನೆಯಲ್ಲಿ ಇನ್ನಷ್ಟು ಪಳಗಿದರೆ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಟ ಸಿಗುವುದರದಲ್ಲಿ ಯಾವುದೇ ಅನುಮಾನವಿಲ್ಲ.

ನಾಯಕಿ ಪದ್ಮಶ್ರೀ ಅವರಿಗೆ ಹೆಚ್ಚು ಅವಕಾಶವಿಲ್ಲ. ಇರುವುದರೊಳಗೆ ಒಕೆ. ಇನ್ನು ಹಿರಿಯ ಕಲಾವಿದರಾದ
ಶೋಭರಾಜ್, ರೇಖಾದಾಸ್ , ಡಿ ಕೃಷ್ಣಪ್ಪ ವೇಣುಗೋಪಾಲ್, ಯುವ ಕಲಾವಿದರಾದ ಸುಶ್ಮಿತಾ ಜಗ್ಗಪ್ಪ, ಅಭಿ ಸಮರ್ಥ್, ಭರತ್ ಶಿವಣ್ಣ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಅಪ್ಪ- ಮಗಳ ಕರಿತಾದ ಹಾಗು ಕಿವಿಗೆ ಹಿಂಪೆನಿಸಲಿದೆ. ಕೊಟ್ಟ ಕಾಸಿಗೆ ಮೋಸ ಮಾಡದ ಕುತೂಹಲಭರಿತ ಚಿತ್ರ ಎನ್ನುವುದರಲ್ಲಿ ಅನುಮಾನವಿಲ್ಲ.

ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin