“ಲವ್ ಒನ್ ಮೋರ್” ಶೀರ್ಷಿಕೆ ಅನಾವರಣ ಮಾಡಿದ ಹಿರಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿರುವ ಕನ್ನಡಿಗ ಡಾ ಕಿರಣ್ ಶೇಖರ್ ಅವರ ಮಿರಾನ ಪಿಕ್ಚರ್ಸ್ ವತಿಯಿಂದ ನಿರ್ಮಾಣ ಮಾಡುತ್ತಿರುವ “ ಲವ್ ಒನ್ ಮೋರ್” ಚಿತ್ರದ ಶೀರ್ಷಿಕೆಯನ್ನು ಹಿರಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ
ವೃತ್ತಿಯಲ್ಲಿ ಹೃದಯ ತಜ್ಞರಾಗಿ ಹೃದಯ ಕಸಿ ಮಾಡಿರುವ ಡಾ. ಕಿರಣ್ ಶೇಖರ್, ಸಿನಿಮಾ ಮೂಲಕ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಈಗಿನ ಕಾಲದ ಯುವ ಜನರನ್ನು ಮುಂದಿಟ್ಟಿಕೊಂಡು ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ.
ಬೆಂಗಳೂರು, ಆಸ್ಟ್ರೇಲಿಯಾ ಸೇರಿದಂತೆ ಮತ್ತಿತರ ಕಡೆ ಶೀಘ್ರದಲ್ಲಿ ಚಿತ್ರೀಕರಣ ಮಾಡುವ ಉದ್ದೇಶವನ್ನು ಡಾ. ಕಿರಣ್ ಶೇಖರ್ ಮತ್ತವರ ತಂಡ ಹಾಕಿಕೊಂಡಿದೆ. ಡಾ.ಕಿರಣ್ ಅವರಿಗೆ ಯುವ ಪ್ರತಿಭಾನ್ವಿತರ ತಂಡ ಕೈಜೋಡಿಸಿದೆ.ಹೀಗಾಗಿ ಈಗಿನ ಕಾಲಕ್ಕೆ ಹೊಂದಿಕೆಯಾಗುವ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಡಲು ಸಜ್ಜಾಗಿದ್ದಾರೆ
ನಿರ್ಮಾಪಕ ಡಾ ಕಿರಣ್ ಶೇಖರ್ ಮಾತನಾಡಿ ಪ್ರತಿ ಮನುಷ್ಯನಲ್ಲಿಯೂ ಕಥೆಗಳಿವೆ. ಅದನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರಗಳು, ಕಥೆ ಹೇಳುವ ರೀತಿ ಬದಲಾಗಬೇಕು. ಯುವ ಜನಾಂಗಕ್ಕೆ ಅರ್ಥವಾಗುವ ರೀತಿಯಲ್ಲಿ ಚಿತ್ರ ಮಾಡಲಾಗುತ್ತಿದೆ. ಮೊದಲ ನಿರ್ಮಾಣದ ಚಿತ್ರ. ಆಸ್ಟ್ರೇಲಿಯಾದಲ್ಲಿ ಮಂದಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಸಿಭಾರತೀಯ ಚಿತ್ರ ಎಂದು ನೋಡುತ್ತೇವೆ. ಆಸ್ಟ್ರೇಲಿಯಾದಲ್ಲಿ ಕನ್ನಡಿಗರು ಹೆಚ್ಚಾಗಿದ್ದಾರೆ ಎಂದರು
ಆಧುನಿಕ ಕಾಲದಲ್ಲಿ ತಾಂತ್ರಿಕ ಸರೋವರದ ಮುಳುಗಿಹೋಗಿರುವ ಯುವಜನ ನಡುವೆ ಮಾನವೀಯ ಸಂಬಂಧ, ಆರೋಗ್ಯ, ಪ್ರೀತಿ, ಸಂಬಂಧ .ಪ್ರೀತಿ, ಪ್ರೇಮ ಸಂಬಂಧ ಸೇರಿದಂತೆ ಮತ್ತಿತರ ವಿಷಯವನ್ನು ಮುಂದಿಟ್ಟಿಕೊಂಡು ಸಿನಿಮಾ ಮಾಡಲಾಗುತ್ತಿದೆ, ಪ್ರೀತಿ, ಸಂಬಂಧಕ್ಕೆ ಬೆಲೆ ಇಲ್ಲದೆ ನೂರಾರು ವರ್ಷ ಬಾಳಿದರೂ ಅದಕ್ಕೆ ಅರ್ಥವಿಲ್ಲ ಎನ್ನುವ ಜೊತೆಗೆ ಮನಸ್ಸುಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು
ನಟ ಆರ್ ಕೆ ಚಂದನ್ ಮಾತನಾಡಿ , ಒಡೆದು ಹೋಗಿರುವ ಹೃದಯ. ಜೋಡಿಸುವ ಕೆಲಸ ಮಾಡಿದ್ದೇವೆ. ಇಂಡೋ ಆಸ್ಟ್ರೇಲಿಯಾ ಸಂಸ್ಕೃತಿಗಳ ಕಥೆ. ಜೆನ್‍ಜಿ ಕಾಲಘಟ್ಟದ ಕಥೆ, ಬೆಂಗಳೂರು ಮತ್ತು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. . ಬಿಂಗೋ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಿನಿಮಾ ಸಿಕ್ಕಿದೆ ಎಂದರು.
ನಟಿ ವಿದ್ಯಾ ಪ್ರಭು ಮಾತನಾಡಿ ಹೊಸತನದ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ. ಇದು ನನ್ನ ಐದನೇ ಚಿತ್ರ. ಚಿತ್ರೀಕರಣದಲ್ಲಿ ಭಾಗಿಯಾಗಲು ಎದುರು ನೋಡುತ್ತಿರುವುದಾಗಿ ಮಾಹಿತಿ ನೀಡಿದರು
ಕಲಾವಿದರಾದ ಸಾಗರ್,ನಟಿ ಖುಷಿ ಪ್ರಸಾದ್, ಪೂರ್ಣ ಕೆಎಸ್. ಆಸ್ಟ್ರೇಲಿಯಾ ನಟಿ ಲೀಚಲ್ಲೆ ಸೇರಿದಂತೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರು, ಮಂಜುನಾಥ್ ದೈವಜ್ಞ ಸೇರಿದಂತೆ ಹಲವರಿದ್ದರು.

