“ನಾನ್ ಬರ್ತಾ ಇದ್ದೇನೆ ಚಿನ್ನಾ …. “ದಿ ಡೆವಿಲ್” ಚಿತ್ರ ಆಗಮನಕ್ಕೆ ದಿನಗಣನೆ
“ನಾನ್ ಬರ್ತಾ ಇದ್ದೇನೆ ಚಿನ್ನ….”
ಈ ಮಾತು ಕೇಳಿದ ಅಸಂಖ್ಯಾತ ಸೆಲೆಬ್ರಿಟಿಗಳ ನರ- ನಾಡಿಗಳಲ್ಲಿ ರೋಮಾಂಚನವಾಗಿದ್ದರೆ ಅಚ್ಚರಿ ಇಲ್ಲ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹೃದಯದಲ್ಲಿಟ್ಟು ಪೂಜಿಸುವ ಆರಾಧಿಸುವ ಸೆಲೆಬ್ರಿಟಿಗಳ ಪಾಲಿಗೆ ವರ್ಷಾಂತ್ಯದಲ್ಲಿ ಹಬ್ಬದ ವಾತಾವರಣ ಸೃಷ್ಡಿಯಾಗಿದೆ..

ಅದಕ್ಕೆ ಕಾರಣ ಇಷ್ಟೆ.. “ಕಾಟೇರ” ಚಿತ್ರದ ಯಶಸ್ಸಿನ ನಂತರ ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ” ದಿ ಡೆವಿಲ್” ಚಿತ್ರ ಡಿಸೆಂಬರ್ 11ರಂದು ರಾಜ್ಯದ ಗರಿಷ್ಠ ಚಿತ್ರಮಂದಿರಗಲ್ಲಿ ತೆರೆಗೆ ಬರಲಿದೆ. ಇದು ಅಭಿಮಾನಿಗಳ ಸಂತಸ ಹಿಮ್ಮಡಿಗೊಳಿಸಿದೆ. ತಮ್ಮ ನೆಚ್ಚಿನ ನಟನನ್ನು ತೆರೆಯ ಕಣ್ತುಂಬಿಕೊಂಡು ತಲೆಯ ಮೇಲೆ ಹೊತ್ತು ಮೆರೆಸಲು ಲಕ್ಷಾಂತರ ಅಭಿಮಾನಿಗಳು ಟೊಂಕ ಕಟ್ಟಿ ನಿಂತಿದ್ದಾರೆ.

ಎದುರಾದ ಅಡೆ- ತಡೆ, ನೋವು- ನಲಿವು, ನಮಸ್ಯೆ- ಸಂಕಷ್ಟಗಳ ಸರಮಾಲೆಯನ್ನು ಮೆಟ್ಟಿನಿಂತು ನಿರ್ದೇಶಕ ಪ್ರಕಾಶ್ ವೀರ್ ಮತ್ತು ಕಾರ್ಯಕಾರಿ ನಿರ್ಮಾಪಕಿ ತಶ್ವಿನಿ ” ದಿ ಡೆವಿಲ್ ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದಕ್ಕೆ ನಟ ದರ್ಶನ್ ಸಹಕಾರವೂ ಅಪಾರ. ಚಿತ್ರ ಬಿಡುಗಡೆಯ ನಿಗಧಿತ ದಿನಕ್ಕೆ ಒಂದು ದಿನ ಮುಂಚಿತವಾಗಿ ಇದೇ ಡಿಸೆಂಬರ್ 11 ರಂದು ಚಿತ್ರ ತೆರೆಗೆ ಬರಲಿದೆ.
ಚಿತ್ರದ ಆರಂಭವಾಗಿ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಮಾದ್ಯಮದೊಂದಿಗೆ ಚಿತ್ರತಂಡ ಮುಖಾಮುಖಿಯಾಗಿತ್ತು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅನುಪಸ್ಥಿತಿ ಚಿತ್ರತಂಡದ ಪ್ರತಿಯೊಬ್ಬರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.
ನಟ ದರ್ಶನ್ ಅಭಿನಯದ “ದಿ ಡೆವಿಲ್” ಚಿತ್ರ ಇದೇ 12 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ಈ ವೇಳೆ ಚಿತ್ರದ ತುಣುಕು ಹಾಗು ಹಾಡು ಪ್ರದರ್ಶಿಸಲಾಯಿತು

ಈ ವೇಳೆ ಮಾತಿಗಿಳಿದ ನಿರ್ದೇಶಕ ಪ್ರಕಾಶ್ ವೀರ್, ನಟ ದರ್ಶನ್ ಹೇಳಿದ ಹಾಗೆ “ತಾರಕ್ ” ಸಿನಿಮಾ ಮಾಡಿಕೊಟ್ಟಿದ್ದೆ. ಈಗ ನಾನು ಹೇಳಿದ ಹಾಗೆ ಕೇಳಿ ಎಂದು “ದಿ ಡೆವಿಲ್” ಸಿನಿಮಾ ಮಾಡಿದ್ದೇನೆ. ದರ್ಶನ್ ಅವರನ್ನು ಬೇರೆಯೇ ರೀತಿ ತೋರಿಸಬೇಕು ಎನ್ನುವ ಆಸೆ ನಮಗೂ ಇರುತ್ತೆ ಅಲ್ಲವೇ. ಅದರಂತೆ ತೆರೆಯ ಮೇಲೆ ತೋರಿಸಿದ್ದೇನೆ. ದರ್ಶನ್ ಎಷ್ಟು ಪಾತ್ರದಲ್ಲಿ ಕಾಣಿಕೊಂಡಿದ್ದಾರೆ ಎನ್ನುವುದನ್ನು ಡಿಸೆಂಬರ್ 11 ರ ತನಕ ಕಾಯಬೇಕು ಎಂದರು.
2018ರಲ್ಲಿ ಚಿತ್ರದ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಬೇರೊಬ್ಬರ ಬಳಿ ಇದ್ದ ಚಿತ್ರದ ಶೀರ್ಷಿಕೆ ಪಡೆಯಲಾಗಿತ್ತು. ಈ ಮುಂಚೆ “ಡೆವಿಲ್ ಹೀರೋ” ಎನ್ನುವ ಶಿರ್ಷಿಕೆ ಇಡಲಾಗಿತ್ತು.. ಬಳಿಕ “ದಿ ಡೆವಿಲ್” ಎನ್ನುವುದು ಸೂಕ್ತ ಎನ್ನುವ ಕಾರಣದಿಂದ ಶೀರ್ಷಿಕೆ ಇಡಲಾಗಿದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.

ಸಿನಿಮಾ ಮುಗಿಸಿ ಎನ್ನುತ್ತಿದ್ದರು
ಚಿತ್ರೀಕರಣದ ಸಮಯದಲ್ಲಿ ನಟ ದರ್ಶನ್ ಅವರಿಗೆ ಬೆನ್ನು ನೋವು ಇದ್ದರೂ ಅದನ್ನೂ ಯಾವತ್ತೂ ತೋರಿಸೀಕೊಂಡಿಲ್ಲ. ಚಿತ್ರೀಕರಣದ ಸಮಯದಲ್ಲಿ ಎಷ್ಟು ಔಷಧಿ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಕಣ್ಣಾರೆ ಕಂಡಿದ್ದೇವೆ. ಸಿನಿಮಾ ಮುಗಿಸಿ ಚೆನ್ನಾಗಿ ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಅವರನ್ನು ಭೇಟಿ ಮಾಡುವ ಸಮಯ ಸಿಕ್ಕಾಗಲೆಲ್ಲಾ ಚಿತ್ರದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಜೊತೆಗೆ ಡಿಸೆಂಬರ್ 11 ಅವರೆ ನಿಗಧಿ ಪಡಿಸಿದ ದಿನಾಂಕ ಎಂದು ಹೇಳಿದರು.
ಚಿತ್ರೀಕರಣದ ಸಮಯದಲ್ಲಿ ಎಂದೂ ವಯಕ್ತಿಕ ವಿಚಾರವನ್ನು ದರ್ಶನ್ ಪ್ರಸ್ತಾಪ ಮಾಡುತ್ತಿರಲಿಲ್ಲ. ಅವರೊಬ್ಬ ವೃತ್ತಿಪರ ನಟ, ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಪುಣ್ಯ. ಚಿತ್ರ ವಿಳಂಬವಾದ ಹಿನ್ನೆಲೆಯಲ್ಲಿ ಬಜೆಟ್ ಹೆಚ್ಚಾಗಿದೆಯಾ ಅಥವಾ ಇಲ್ಲ ಎಂದು ಹೇಳಿದರೆ ಅದು ಕುಟುಂಬದ ವಿಷಯವನ್ನು ಎಲ್ಲರೆದು ಹೇಳಿಕೊಂಡಂತಾಗಲಿದೆ. ನಮ್ಮ ಪಾಲಿಗೆ ಬಂದದನ್ನು ನಾವು ಎದುರಿಸಬೇಕಾಗಿದೆ ಎಂದರು.

ಇದ್ರೆ ನೆಮ್ದಿಯಾಗಿರಬೇಕು ಕಥೆ ಗೊತ್ತಿರಲಿಲ್ಲ:
ಚಿತ್ರಕ್ಕಾಗಿ ಅನಿರುದ್ದ್ ಶಾಸ್ತಿ ಇದ್ರೆ ನಮ್ದಿಯಾಗಿರಬೇಕು ಹಾಗು ಮತ್ತೊಂದು ಶಿವನ ಕುರಿತ ಸಾಲು ಬರೆದು ಕಳುಹಿಸಿದ್ದರು. ಅದರಲ್ಲಿ ಕೆಡಿ ಚಿತ್ರದಲ್ಲಿ ಶಿವನ ಕುರಿತ ಸಾಲು ಬಂದ ಹಿನ್ನೆಲೆಯಲ್ಲಿ “ಇದ್ರೆ ನೆಮ್ದಿಯಾಗಿರಬೇಕು” ಸಾಲು ಬಳಸಿಕೊಂಡೆವು. ಹಾಡು ಬಿಡುಗಡೆಯಾದ ಮೇಲೆ ಗೊತ್ತಾಯ್ತು. ಅದರ ಹಿಂದೆ ಕಥೆ ಇದೆ ಎಂದು. ಇದು ಸತ್ಯ ಎಂದರು
ಟೀಸರ್‍ನಲ್ಲಿ ತೋರಿಸಲಾದ ನಟ ದರ್ಶನ್ ಅವರು ಹೇಳಲಾದ ” ನಾನ್ ಬರ್ತಾ ಇದ್ದೇನೆ.. ಚಿನ್ನಾ. ಸಾಲು ಸಿನಿಮಾದಲ್ಲಿದೆ. ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.. ಸಾದ್ಯವಾದಷ್ಟು ಗರಿಷ್ಠ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ನಾವೇ ಚಿತ್ರ ಬಿಡುಗಡೆ:
“ದಿ ಡೆವಿಲ್” ಚಿತ್ರವನ್ನು ಸುಪ್ರೀತ್ ಮತ್ತು ಗಂಗಾಧರ್ ಅವರ ಸಹಕಾರದೊಂದಿಗೆ ನಾವೇ ವಿತರಣೆ ಮಾಡುತ್ತಿದ್ದೇವೆ. ಇದರ ಹಿಂದೆ ಯಾವುದೇ ಅಮ್ಯ ಉದ್ದೇಶವೂ ಇಲ್ಲ . ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಯಾವುದೇ ಉದ್ದೇಶ ಮನಸ್ಸಿಗೆ ಬಂದಿಲ್ಲ ಎಂದರು

ಸಹ ನಿರ್ಮಾಪಕಿ ತಶ್ವಿನಿ ಮಾತನಾಡಿ ಕಿರುತೆರೆಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೆ. ಜೊತೆಗೆ ವಸ್ತ್ರವಿನ್ಯಾಸಕಿಯೂ ಕೂಡ. ಇದೇ ಮೊದಲ ಬಾರಿಗೆ ಸಿನಿಮಾಗೆ ವಸ್ರ್ತವಿನ್ಯಾಸ ಮಾಡಿದ್ದೇನೆ. ಅಲ್ಲದೆ ಪತಿಯ ಕೆಲಸದಲ್ಲಿ ಭಾಗಿಯಾಗಿದ್ದೇನೆ. “ದಿ ಡೆವಿಲ್” ಚಿತ್ರಕ್ಕೆ ಕನ್ನಡಿಗರೆಲ್ಲರ ಸಹಕಾರ ಬೆಂಬಲ ಬೇಕು ಎಂದು ಕೇಳಿಕೊಂಡರು
ವಿತರಕ ಸುಪ್ರೀತ್ ಮಾತನಾಡಿ ದರ್ಶನ್ ಅಭಿಮಾನಿಗಳಿಗೆ ಬೆಳಗ್ಗೆಯಿಂದ ಪ್ರರ್ದಶನ. ಆಯೋಜಿಸಲಾಗಿದೆ. ಈಗಾಗಲೇ ಮಧ್ಯರಾತ್ರಿ ಶೋ ನಡೆಸಲು ಬೇಡಿಕೆ ಬಂದಿದೆ. ಚಿತ್ರ ಅಭಿಮಾನಿಗಳಿಗೆ ಹಬ್ಬ ಎಂದರು
.
ಚಿತ್ರದ ನಾಯಕಿ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್,ಶೋಭರಾಜ್, ಹುಲಿ ಕಾರ್ತಿಕ್ ,ಸೋನಿಯಾ, ಯುವರಾಜ್, ಹಾಡು ಹಾಡಿರುವ ಅನಿರುದ್ದ್ ಶಾಸ್ತ್ರಿ, ಗೀತ ರಚನೆಕಾರ. ಪ್ರಮೋದ್ ಮರವಂತೆ, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ , ಸಂಭಾಷಣೆ ಬರೆದಿರುವ ಕಾಂತರಾಜ್ ಸೇರಿದಂತೆ ,ಸಂಕಲನಕಾರ ಹರೀಶ್ ಕೊಮ್ಮೆ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

