ಸಲಾರ್-1ಕ್ಕೆ ಎರಡು ವರ್ಷ: ಎರಡನೇ ಭಾಗಕ್ಕೆ ಶೇಕಡಾ 20 ರಷ್ಟು ಚಿತ್ರೀಕರಣ
ಸಲಾರ್: ಭಾಗ 1 ಚಿತ್ರ 2 ನೇ ವರ್ಷ ಪೂರ್ಣಗೊಳಿಸಿದೆ.ಭಾರತೀಯ ಚಿತ್ರರಂಗದಲ್ಲಿ ಪ್ಯಾನ್-ಇಂಡಿಯಾ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡಿದೆ.

ಈ ನಡುವೆಸಲಾರ್: ಭಾಗ 2 ಚಿತ್ರೀಕರಣದ ಸರಿಸುಮಾರು ಶೇಕಡಾ 20 ಪೂರ್ಣಗೊಂಡಿದೆ, ಉಳಿದ ಭಾಗಗಳು 2026 ರಲ್ಲಿ ಪ್ರಾರಂಭವಾಗಲಿವೆ. ನಿರೀಕ್ಷೆ ಹೆಚ್ಚಾದಂತೆ, ಸಲಾರ್: ಭಾಗ 2 ಬಿಡುಗಡೆಯು 2027 ರ ಅಂತ್ಯದ ವೇಳೆಗೆ ಅಥವಾ 2028 ರ ಆರಂಭದಲ್ಲಿ ನಿರೀಕ್ಷಿಸಲಾಗಿದೆ.
ಪ್ರಶಾಂತ್ ನೀಲ್ ನಿರ್ದೇಶಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಹಲವು ಕಲಾವಿದರ ದಂಡೇ ಚಿತ್ರದಲ್ಲಿದೆ
ಚಿತ್ರ ಬಿಡುಗಡೆಯಾದ ನಂತರ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಲಾರ್: ಭಾಗ 1 – ಕದನ ವಿರಾಮ ದೊಡ್ಡ ಪ್ರಮಾಣದ ಯಶಸ್ಸು ಕಂಡಿತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ತನ್ನ ಛಾಪು ಮೂಡಿಸಿದೆಎರಡು ವರ್ಷಗಳ ನಂತರವೂ, ಚಿತ್ರ ಪುನರಾವರ್ತಿತ ವೀಕ್ಷಕರು ಚಿತ್ರ ನೋಡಲು ಹಾತೊರೆಯುತ್ತಿದ್ದಾರೆ
ದೇಶಾದ್ಯಂತ ಪ್ರೇಕ್ಷಕರು ಸಲಾರ್-2 ಚಿತ್ರ ವೀಕ್ಷಿಸಲು ಜನರ ಕಾತುರದಿಂದ ಕಾಯುತ್ತಿದ್ದಾರೆ

