ಭಾರತೀಯ ಅನಿಮೇಷನ್ ಹೆಗ್ಗುರುತು ಮಿಷನ್ ಸಾಂಟಾ ಕ್ರಿಸ್ಮಸ್ ಗೆ ಬಿಡುಗಡೆ
ಹಾಲಿವುಡ್ ಸಿನಿಮಾ ಮಿಷನ್ ಸಾಂಟಾ ಇದೇ ಕ್ರಿಸ್ಮಸ್ ಗೆ ತೆರೆಗೆ ಬರಲಿದೆ. ಸಂಪೂರ್ಣ ಅನಿಮೇಷನ್ ನಿಂದ ಕೂಡಿರುವ ಚಿತ್ರದ ಬಗ್ಗೆ ಇದೀಗ ಇಂಟ್ರೆಸ್ಟಿಂಗ್ ವಿಷಯವೊಂದು ರಿವೀಲ್ ಆಗಿದೆ. ಮಿಷನ್ ಸಾಂಟಾ ಚಿತ್ರ ಕರ್ನಾಟಕ ಮತ್ತು ಭಾರತೀಯ ಅನಿಮೇಷನ್ ಮೈಲಿಗಲ್ಲು ಎಂದರೆ ತಪ್ಪಾಗಲಾರದು.

ಮಿಷನ್ ಸಾಂಟಾ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಅನಿಮೇಷನ್ ಕೆಲಸವನ್ನು ಭಾರತದಲ್ಲಿ ಭಾರತೀಯ ಅನಿಮೇಷನ್ ಕಲಾವಿದರು ನಿರ್ವಹಿಸಿದ್ದಾರೆ.
ಮಿಷನ್ ಸಾಂಟಾ ಚಿತ್ರವನ್ನು ಜರ್ಮನಿಯ ಟೂನ್2ಟ್ಯಾಂಗೊ ಜೊತೆ ಸಹ-ನಿರ್ಮಾಣ ಮಾಡಲಾಗಿದೆ. ಜರ್ಮನಿಯಲ್ಲಿ ಮಾರ್ಕ್13 ಮತ್ತು ಆಸ್ಟ್ರೇಲಿಯಾದಲ್ಲಿ ಕಾಸ್ಮಿಕ್ ಡಿನೋ ಪೆÇೀಸ್ಟ್-ಪೆÇ್ರಡಕ್ಷನ್ನೊಂದಿಗೆ, ಅಂತರರಾಷ್ಟ್ರೀಯ ಸಹಯೋಗದ ಮೂಲಕ ಜಾಗತಿಕ ಅನಿಮೇಷನ್ ಪವರ್ಹೌಸ್ ಆಗಿ ಕರ್ನಾಟಕದ ಸ್ಥಾನ ಬಲಪಡಿಸುತ್ತದೆ
ಭಾರತದ ಕರ್ನಾಟಕದ ಅನಿಮೇಷನ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಸ್ಟುಡಿಯೋ 56 ಅನಿಮೇಷನ್ ನ 150ಕ್ಕೂ ಹೆಚ್ಚು ಉನ್ನತ ಮಟ್ಟದ ಅನಿಮೇಷನ್ ಕಲಾವಿದರು ಬೆಂಗಳೂರಿನಿಂದ 20 ತಿಂಗಳ ಕಾಲ ಮಿಷನ್ ಸಾಂಟಾ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.ಹರೀಶ್ ಕೃಷ್ಣಮೂರ್ತಿ, ಅಶ್ವಿನ್ ನಾರಾಯಣ್, ಸಿ ಕಾರ್ತಿಕೇಯನ್, ರೋಷನ್ ಇಂಗೋಲ್, ಮನರಾಜ್ ಸಿಂಗ್, ಕುನಾಲ್ ದೀಪ್ ಮತ್ತು ಅಖಿಲ್ ಮಾಗೋತ್ರ ಸೇರಿದಂತೆ ಹಲವಾರು ಕನ್ನಡ ಪ್ರತಿಭೆಗಳು ಈ ಚಿತ್ರಕ್ಕೆ ದುಡಿದಿದ್ದಾರೆ.
ಬ್ರಾಡ್ ವಿಷನ್ ಇಂಡಿಯಾದ ನಿರ್ಮಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಗೌರಿ ಶ್ರೀರಾಮ್ ಮಾತನಾಡಿ “ಈ ಚಿತ್ರ ಭಾರತೀಯ ಅನಿಮೇಷನ್ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ. ಹಾಗೂ ಕರ್ನಾಟಕದ ಹೆಮ್ಮೆಯಾಗಿದೆ. ಮಿಷನ್ ಸಾಂಟಾ ಈ ಕ್ರಿಸ್ಮಸ್ನಲ್ಲಿ ತಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುವ ಭಾರತೀಯ ಕುಟುಂಬಗಳಿಗೆ ಡಿಸ್ನಿ ಮಟ್ಟದ ಕಥೆ ಹೇಳುವಿಕೆ ಅನುಭವ ನೀಡುತ್ತದೆ ” ಎಂದರು.

