Vijay Raghavendra, the hero of the film “Mahaan”, first look unveiled for Sankranti festival

ಸಂಕ್ರಾಂತಿ ಹಬ್ಬಕ್ಕೆ “ಮಹಾನ್” ಚಿತ್ರದ ನಾಯಕ ವಿಜಯ್ ರಾಘವೇಂದ್ರ ಫಸ್ಟ್ ಲುಕ್ ಅನಾವರಣ - CineNewsKannada.com

ಸಂಕ್ರಾಂತಿ ಹಬ್ಬಕ್ಕೆ “ಮಹಾನ್” ಚಿತ್ರದ ನಾಯಕ ವಿಜಯ್ ರಾಘವೇಂದ್ರ ಫಸ್ಟ್ ಲುಕ್ ಅನಾವರಣ

ಕನ್ನಡದಲ್ಲಿ ಸದಭಿರುಚಿ ಚಿತ್ರ ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ “ ಮಹಾನ್” ಚಿತ್ರದಲ್ಲಿ ನಾಯಕನಾಗಿ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸಂಕ್ರಾಂತಿ ಹಬ್ಬಕ್ಕೆ ವಿಜಯ ರಾಘವೇಂದ್ರ ಫಸ್ಟ್ ಲುಕ್ ” ಬಿಡುಗಡೆ ಮಾಡಿದೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಕಾಶ್ ಬುದ್ದೂರು ನಿರ್ಮಿಸುತ್ತಿದ್ದಾರೆ. ಸಂಕ್ರಾಂತಿಗೂ ರೈತರಿಗೂ ಅವಿನಾಭಾವ ಸಂಬಂಧ. ಈ ಹಬ್ಬವನ್ನು ಕೃಷಿಕರು ಸುಗ್ಗಿ ಹಬ್ಬ ಎಂದೇ ಆಚರಿಸುತ್ತಾರೆ. ಅಂತಹ ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ “ಮಹಾನ್”.

ನಿರ್ದೇಶಕ ಪಿ.ಸಿ ಶೇಖರ್ ಮಾಹಿತಿ ನೀಡಿ ವೃತ್ತಿ ಜೀವನದಲ್ಲೇ “ಮಹಾನ್” ಒಂದು “ಮಹಾನ್” ಚಿತ್ರವಾಗಲಿದೆ ಇದೊಂದು ರೈತರ ಬದುಕಿನ ಬವಣೆಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರ. ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೊ, ಅದೇ ರೀತಿ ರೈತರು ಕೂಡ ಬಹುಮುಖ್ಯ. ಇಂತಹ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಅವರ ಪರ ಧ್ವನಿ ಎತ್ತುವ ಪಾತ್ರದಲ್ಲಿ ವಿಜಯ ರಾಘವೇಂದ್ರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೂಡ “ಮಹಾನ್” ರೈತನಾಗಿ ತೆರೆಯ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ

ಸಂಕ್ರಾಂತಿ ರೈತರಿಗೆ ಪ್ರಿಯವಾದ ಹಬ್ಬ. ಹಾಗಾಗಿ ಹಬ್ಬದ ಸಂದರ್ಭದಲ್ಲೇ ವಿಜಯ ರಾಘವೇಂದ್ರ ಫಸ್ಟ್ ಲುಕ್ ಅನಾವರಣ ಮಾಡಿದ್ದೇವೆ. ಕಥೆ ಬರೆಯಬೇಕಾದರೆ ವಿಜಯ ರಾಘವೇಂದ್ರ ಅವರೆ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಅಂದು ಕೊಂಡೆ ಬರೆದೆ. ನಂತರ ಅವರ ಹತ್ತಿರ ಕಥೆ ಹೇಳಿದಾಗ ಅವರು ಸಂತೋಷದಿಂದ ನಟಿಸಲು ಒಪ್ಪಿಕೊಂಡರು. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ನೋಡಿ ಹೊರಬಂದ ಮೇಲೂ ಈ ಪಾತ್ರ ಎಲ್ಲರ ಮನದಲ್ಲೂ ಉಳಿಯುತ್ತದೆ ಎಂದಿದ್ದಾರೆ

.ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಪ್ರಕಾಶ್ ಬುದ್ದೂರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin