Kiccha Sudeep supports the film “Marnami”: The film will be released on February 20th

“ಮಾರ್ನಮಿ” ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ: ಫೆಬ್ರವರಿ 20ಕ್ಕೆ ಸಿನಿಮಾ ಬಿಡುಗಡೆ - CineNewsKannada.com

“ಮಾರ್ನಮಿ” ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ: ಫೆಬ್ರವರಿ 20ಕ್ಕೆ ಸಿನಿಮಾ ಬಿಡುಗಡೆ

ಹೊಸಬರ ಹೊಸತನದ ಕಂಟೆಂಟು ಇರುವ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಹೆಚ್ಚು ತೆರೆಗೆ ಬರುತ್ತಿವೆ, ಅದರ ಸಾಲಿಗೆ ಮತ್ತೊಂದು ಸೇರ್ಪಡೆ “ಮಾರ್ನಮಿ” ಚಿತ್ರ. ಇದೇ 20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದ್ದು ನಟ ಕಿಚ್ಚ ಸುದೀಪ್ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ತಂಡಕ್ಕೆ ಆನೆಬಲ ಬಂದಂತಾಗಿದೆ

ಕಿರುತೆರೆಯಲ್ಲಿ ಹೆಸರು ಮಾಡಿರುವ ರಿತ್ವಿಕ್ ಮಠದ್ ಹಾಗು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಆಚಾರ್ ನಟನೆಯ ಚಿತ್ರ ಇದು. ಚಿತ್ರದ ಮೂಲಕ ಕರಾವಳಿ ಸಂಸ್ಕøತಿ,ಆಚರಣೆ ಭಾಷೆ, ಸಂಸ್ಕøತಿ ಹುಲಿವೇಷ ಹೀಗೆ ಹಲವು ವಿಷಗಳನ್ನು ಕಟ್ಟಿಕೊಡಲಾಗಿದೆ.

ಎರಡು ಬಾರಿ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಿ ಮುಂದೂಡಿದ್ದ ಚಿತ್ರ ತಂಡ ಈ ಬಾರಿ ಅಂದುಕೊಂಡ ದಿನದಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಚಿತ್ರವನ್ನು ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ್ದು ರಿತೀಶ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ರಿತೀಶ್ ಶೆಟ್ಟಿ, ಇದೇ 20 ರಂದು ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದ್ದೇವೆ. ಈ ಮುಂಚೆ ಎರಡು ಬಾರಿ ದಿನಾಂಕ ಪ್ರಕಟಿಸಿದ್ದ ವೇಳೆ ಪ್ರಚಾರಕ್ಕೆ ಸಮಯ ಸಿಕ್ಕಿರಲಿಲ್ಲ, ಚಿತ್ರ ಮಾಡಿ ಜನರಿಗೆ ತಲುಪಲು ಸಾಧ್ಯವಾಗಲಿಲ್ಲ ಎನ್ನುವ ಕಾರಣದಿಂದ ಮುಂದೂಡಿದ್ದೆವು, ಈಗ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎಂದರು

ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಹುಲಿ ವೇಷ ,ಕರಾವಳಿ ಭಾಗದ ಪ್ರೇಮಕಥೆ, ಆಕ್ಷನ್, ಎಮೋಷನ್ , ಸಂಬಂಧಗಳ ಬೆಲೆ ಕಟ್ಟಿಕೊಡಲಾಗಿದೆ. ಕರಾವಳಿ ಭಾಗದಲ್ಲಿ ಮಾರ್ನಾಮಿ ಮಂಗಳೂರಿನ ದಸಾರಾ. ಚೇತು, ದೀಕ್ಷಾ ಪಾತ್ರಗಳು ಇಷ್ಟವಾಗಲಿದೆ ಜನರ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು,

ನಟ ರಿತ್ವಿಕ್ ಮಠದ್ ಮಾತನಾಡಿ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ, ಹುಲಿ ವೇಷ ಸೇರಿದಂತೆ ವಿವಿಧ ವಿಷಯಗಳಿವೆ, ಮನುಷ್ಯ ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಆಗಲಿದೆ ಎನ್ನುವ ಹಲವು ಮುಖಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಕಿಚ್ಚ ಸುದೀಪ್ ಅವರು ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ಮತ್ತಷ್ಟು ಶಕ್ತಿ ಬಂದಿದೆ. ಕಿರಿತೆರೆಯಲ್ಲಿ ಸಿಕ್ಕ ಜನಪ್ರಿಯತೆ ಮತ್ತು ಟಿವಿ ರೇಟಿಂಗ್ ಸಿನಿಮಾಗೂ ಸಿಕ್ಕರೆ ಚಿತ್ರ ಸೂಪರ್ ಡೂಪರ್ ಹಿಟ್ ಆಗಲಿದೆ ಎಂದರು

ನಟಿ ಚೈತ್ರಾ ಆಚಾರ್ ಮಾತನಾಡಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ , ಜನರು ನಟ ರಿತ್ವಿಕ್ ಅವರನ್ನು ಹೆಚ್ಚಾಗಿ ಇಷ್ಟಪಡ್ತಾರೆ, ಅದೇ ಪ್ರೀತಿ ಸಿನಿಮಾಗೆ ತೋರಿಸಿದರೆ ಸಿನಿಮಾ ಯಶಸ್ಸು ಕಟ್ಟಿಟ್ಟ ಬುತ್ತಿ. ಬೇಡ ಅಂದು ಬಿಟ್ಟ ಸಿನಿಮಾ ಮತ್ತೆ ನನಗೆ ಬಂದಿದೆ, ಶೆಟ್ಟರ ಬಳಗವನ್ನು ಚಿತ್ರ ವೀಕ್ಷಿಸಲು ಆಹ್ವಾನಿಸುತ್ತೇನೆ ಹಾಗಂತ ಸಿನಿಮಾ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯಲು ಮುಜುಗರ, ಅವರಾಗಿಯೇ ಕೇಳಿದರೆ ಸಿನಿಮಾ ಬಗ್ಗೆ ಹೇಳಬಹುದು ಎಂದು ಮಾಹಿತಿ ಹಂಚಿಕೊಂಡರು

ನಿರ್ಮಾಪಕ ನಿಶಾಂತ್ ಮಾತನಾಡಿ ಸಿನಿಮಾವನ್ನು ಜನರಿಗೆ ತಲುಪಿಸಬೇಕು ಎನ್ನುವ ಕಾರಣಕ್ಕೆ ಎರಡು ಬಾರಿ ಮುಂದೂಡಿದ್ದೆವು. ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಭಾಷೆಗೆ ಡಬ್ ಮಾಡುವ ಯೋಚನೆ ಇದೆ ಎಂದರು

ಛಾಯಾಗ್ರಾಹಕ ಶಿವಸೇನಾ, ಪೈಟ್ ಮಾಸ್ಟರ್, ಅರ್ಜುನ್ ರಾಜ್, ಕಲಾ ನಿರ್ದೇಶಕ ವರದರಾಜ್ ಕಾಮತ್ ಚಿತ್ರದಲ್ಲಿ ತಮ್ಮ ತಮ್ಮ ಕೆಲಸದ ಕುರಿತು ಮಾಹಿತಿ ನೀಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin