ನಟ ನವೀನ್ ಸಜ್ಜು ಅಭಿನಯದ “ಲೋ ನವೀನ” ಚಿತ್ರದ ಹಾಡು ಬಿಡುಗಡೆ
ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಲೋ ನವೀನ”. ಈಗಾಗಲೇ ಈ ಚಿತ್ರದ ಜನಪದ ಶೈಲಿಯ “ಕೋಣಾಣೆ” ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ “ಲೋ ನವೀನ” ಚಿತ್ರದ “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಟಿ ಸೋನಾಲ್ ಮೊಂತೆರೊ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಸಂಸದರಾದ ಪುಟ್ಟರಾಜು, ರಾಮಮೂರ್ತಿ ಸೇರಿದಂತೆ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದರು
ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಮಾತನಾಡಿ ಮೂಲತಃ ಮಳವಳ್ಳಿಯ. ಹಳ್ಳಿ ಪರಿಸರದಲ್ಲೇ ಬೆಳೆದವನು. ಗಾಯಕನಾಗಿ ನಾಯಕನಾಗಿದ್ದೇನೆ. ನಿರ್ಮಾಪPಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ.ಕಾರ್ಯಕ್ರಮದ ನಿಮಿತ್ತ ಅಮೇರಿಕಾಗೆ ಹೋದಾಗ ಅವರನ್ನು ಮಾದೇಶ್ ಭೇಟಿ ಮಾಡಿಸಿದರು. ಗ್ರಾಮೀಣಾ ಸೊಗಡಿನ ಕಥೆ ಕೇಳಿ ಇಷ್ಟಪಟ್ಟ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ನಿರ್ಮಾಣಕ್ಕೆ ಮುಂದಾದರು ಚಿತ್ರಕ್ಕ ನಾನೇ ಸಂಗೀತ ನೀಡಿದ್ದೇನೆ. ಈಗಾಗಲೇ ಚಿತ್ರದ ಮೊದಲ ಹಾಡು “ಕೋಣಾಣೆ” ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಈಗ ಚಿತ್ರದ ಎರಡನೇ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಅನಾವರಣವಾಗಿದೆ ಎಂದರು
ನಾಯಕಿಯನ್ನು ಪರಿಚಯಿಸುವ ಗೀತೆ ಕೂಡ. ಈ ಹಾಡನ್ನು ನಾಯಕಿ ಸೋನಾಲ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅಂದಾನಿ ಹಾಡನ್ನು ಬರೆದಿದ್ದಾರೆ.. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು
ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಮಾತನಾಡಿ ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ನವೀನ್ ಸಜ್ಜು ಹೇಳಿದ ಗ್ರಾಮೀಣ ಸೊಗಡಿನ ಕಥೆ ಇಷ್ಚವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು ಎಂದು ಹೇಳಿದರು
ನಾಯಕಿ ವರ್ಷ ಮಾತನಾಡಿ ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಕನಸು. ಕನಸು ಈಗ ನನಸಾಗಿದೆ. ಅವಕಾಶ ನೀಡಿದ ನವೀನ್ ಸಜ್ಜು ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು.

ನಿರ್ದೇಶಕ ಧನುರ್ಧಾರಿ ಪವನ್ ಮಾತನಾಡಿ ಮೊದಲ ನಿರ್ದೇಶನದ ಚಿತ್ರ. “ಲೋ ನವೀನ” ಚಿತ್ರ ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಸಹಕಾರ ಅಪಾರ ಎಂದು ತಿಳಿಸಿದರು.
ಛಾಯಾಗ್ರಾಹಕ ರಿಷಿಕೇಶ್, ನೃತ್ಯ ನಿರ್ದೇಶಕ ವಿನಾಯಕ್ ಆಚಾರ್ಯ, ಗೀತರಚನೆಕಾರ ಅಂದಾನಿ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

