‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ಬಿಡುಗಡೆ
ಗೊಲ್ಮಾಲ್ ಗ್ಯಾಂಗ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಭರವಸೆ ಮೂಡಿಸಿದೆ. ಸತೀಶ್ ಚಂದ್ರ ಅವರು ನಿರ್ಮಾಣ ಮಾಡಿದ್ದು ಚಿತ್ರ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ

ನಿರ್ದೇಶಕ ಶಿವಕುಮಾರ್ ಮಾತನಾಡಿ ಈ ಸಿನಿಮಾಗೆ ನಿರ್ಮಾಪಕರು ಬಹಳಷ್ಟು ಸಹಾಯ ª ಮಾಡಿದ್ದಾರೆ. ಪ್ರತಿಯೊಂದಕ್ಕೂ ಬೆನ್ನೆಲುಬಾಗಿ ನಿಂತವರು, ಈ ಸಿನಿಮಾದಲ್ಲಿ ಏನಿಲ್ಲ ಅಂದ್ರು 16 ಜನ ಕಲಾವಿದರಿದ್ದಾರೆ. ಎಲ್ಲಾ ಪಾತ್ರಕ್ಕೂ ಜೀವವಿದೆ. ನಾವೆಷ್ಟೇ ಬಡಿದುಕೊಂಡರು ಕಲಾವಿದರಿಲ್ಲದೆ ಏನು ಮಾಡುವುದಕ್ಕೆ ಆಗಲ್ಲ. ಕಾರ್ತಿಕ್ ರುವಾರಿ ನನ್ನನ್ನ ಬ್ರದರ್ ಆಗಿನೇ ಟ್ರೀಟ್ ಮಾಡಿದ್ದಾರೆ ಎಂದರು
ನಿರ್ಮಾಪಕ ಕೆ ಸತೀಶ್ ಚಂದ್ರ ಎಲೆಕೆರೆ ಮಾತನಾಡಿ, ಶೂಟಿಂಗ್ ಸೆಟ್ ನಲ್ಲಿ ಕೆಲಸ ಮಾಡುವಾಗಲೂ ಎಲ್ಲರೂ ಒಟ್ಟಿಗೆ ಚರ್ಚೆ ಮಾಡ್ತಾ ಇದ್ವಿ. ಸಿನಿಮಾವನ್ನ ಗೆದ್ದೇ ಗೆಲ್ತೀವಿ ಅಂತ ಬಂದಿದ್ದೀವಿ. 26-27 ವರ್ಷದಿಂದ ಇಂಡಸ್ಟ್ರಿಗೆ ಲೇಬರ್ ಸಪ್ಲೈ ಮಾಡ್ತಾ ಇದ್ದೀವಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಬರಲಿಲ್ಲ. ನಿರುದ್ಯೋಗದ ಸಮಸ್ಯೆ ಕಂಡಾಗ ಏನಾದರೂ ಮಾಡಬೇಕು ಎನ್ನುವ ಉದ್ದೇಶ ನಮ್ಮದು ಎಂದಿದ್ಧಾರೆ

ನಟ ಕಾರ್ತಿಕ್ ಮಾತನಾಡಿ ನಿರ್ದೇಶಕ ಶಿವು ಕಡೆಯಿಂದ ನಿರ್ಮಾಪಕರ ಪರಿಚಯ ಆಯ್ತು. ಅವರಿಗೆ ಎಳೆ ಮಕ್ಕಳಿಗೆ ಇರುವ ಸ್ಪಿರಿಟ್ ಇದೆ. ಹೀರೋ ಅಂದಾಗ ಕೆಲವು ಹೀರೋಯಿನ್ ಗಳು ಒಪ್ಪಲಿಲ್ಲ. ಶಾರ್ಟ್ ಫಿಲ್ಮ್ ಅವರ ಜೊತೆಗೆ ಮಾಡಲ್ಲ ಅಂದವರೇ ಹೆಚ್ಚು ಎಂದರು
ನಟಿ ಆರಾಧನಾ ಭಟ್ ಮಾತನಾಡಿ ನಂಗೆ ಯಾರಾದ್ರೂ ಕೇಳಿದ್ರೆ ಹೀರೋಯಿನ್ ಆಗ್ಬೇಕು ಅಂತಿದ್ದೆ. ಇವತ್ತು ಗೋಲ್ಮಾಲ್ ಗ್ಯಾಂಗ್ ಸಿನಿಮಾ ಮೂಲಕ ಅದಾಗಿದ್ದೀನಿ ಅಂದ್ರೆ ನಮ್ಮ ನಿರ್ಮಾಪಕರೇ ಕಾರಣ ಎಂದು ಹೇಳಿದರು


