'Karikada' to release on February 6: Rugged trailer raises curiosity

‘ಕರಿಕಾಡ’ ಫೆಬ್ರವರಿ 6ಕ್ಕೆ ಬಿಡುಗಡೆ: ಕುತೂಹಲ ಹೆಚ್ಚಿಸಿದ ರಗಡ್ ಟ್ರೇಲರ್ - CineNewsKannada.com

‘ಕರಿಕಾಡ’ ಫೆಬ್ರವರಿ 6ಕ್ಕೆ ಬಿಡುಗಡೆ: ಕುತೂಹಲ ಹೆಚ್ಚಿಸಿದ ರಗಡ್ ಟ್ರೇಲರ್

ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ’ಕರಿಕಾಡ’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಕುತೂಹಲ ಹೆಚ್ಚಿಸಿದೆ, ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ನಾಯಕ ಕಾಡ ನಟರಾಜ್ ಮಾತನಾಡಿ ಚಿತ್ರದ 7 ಹಾಡುಗಳೂ ಅದ್ಭುತವಾಗಿವೆ. ಪೈಕಿ ರತುನಿ ಸಾಂಗ್ ಬಿಟ್ಟು ಆರು ಹಾಡನ್ನೂ ನಿರ್ದೇಶಕರೇ ಬರೆದಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ಚಿತ್ರಕ್ಕೆ ಶಕ್ತಿ ತುಂಬಿದೆ. ಪ್ರೇಕ್ಷಕರನ್ನು ರಂಜಿಸಿ ಅಳಿಸುತ್ತದೆ ಎಂಬ ವಿಶ್ವಾಸವಿದೆ. ಐದು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡ, ತಮಿಳು, ಮಲಯಾಳಂ ರೆಡಿ ಇದೆ.ತೆಲುಗು ಮತ್ತು ಹಿಂದಿ ಬಾಷೆಯ ಚಿತ್ರ ಸೆನ್ಸಾರ್ ಆಗಬೇಕಿದ್ದು ವಾರದ ನಂತರ ರಿಲೀಸ್ ಮಾಡುತ್ತೇವೆ ಎಂದರು

ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಈಗಾಗಲೇ ಕರ್ನಾಟಕದಲ್ಲಿ 100 ಥಿಯೇಟರ್ ಕನ್ ಫರ್ಮ್ ಆಗಿದೆ. ಪ್ರೇಕ್ಷಕರೇ ಚಿತ್ರವನ್ನು ಗೆಲ್ಲಿಸಬೇಕು ಎಂದು ಹೇಳಿದರು.

ನಿರ್ಮಾಪಕಿ ದೀಪ್ತಿ ದಾಮೋದರ ಮಾತನಾಡಿ ಇನ್ನೂ ಸಿನಿಮಾ ನೋಡಿಲ್ಲ. ನಿಮ್ಮ ಜತೆ ನೋಡಲು ನಾನೂ ಕಾಯುತ್ತಿದ್ದೇನೆ ಎಂದರು.

ನಿರ್ದೇಶಕ ಕೆ. ವೆಂಕಟೇಶ್ ಮಾತನಾಡಿ, ಸಿನಿಮಾ ಹಬ್ಬದೂಟದ ತರ. ಈಗಾಗಲೇ ಸೆನ್ಸಾರ್ ಆಗಿದ್ದು ಯು/ಎ ಸಿಕ್ಕಿದೆ. ಸಿನಿಮಾ ಮೇಲೆ ನಮಗೆ ಪೂರ್ತಿ ನಂಬಿಕೆ ಇದೆ ಎಂದರು.

ನಾಯಕಿ ನಿರೀಕ್ಷಾ ಶೆಟ್ಟಿ ಮಾತನಾಡಿ ‘ನಾನಿಲ್ಲಿ ತಂಗಾಳಿ ಆಗಿ ಬರ್ತೀನಾ, ಬಿರುಗಾಳಿ ಆಗಿರುತ್ತೇನಾ ಎಂದು ಚಿತ್ರದಲ್ಲೇ ನೋಡಿ. ಹಳ್ಳಿ ಹುಡುಗಿಯ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ಹಳ್ಳಿ ಸೊಗಡಿಗೆ ಹೊಂದಿಕೊಳ್ಳಲು ಕಷ್ಟ ಆಯ್ತು’ ಎಂದರು.

ಕಾಡ ನಟರಾಜ್ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಹಾಗೂ ಅತಿಶಯ್ ಜೈನ್ ಸಂಗೀತವಿದೆ. ನಟರಾದ ಯಶ್ ಶೆಟ್ಟಿ, ವಿಜಯ್ ಚಂಡೂರ್, ಬೇಬಿ ರಿದ್ಧಿ, ರಶ್ಮಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin