“ನೆನಪುಗಳ ಮಾತು ಮಧುರ” ಚಿತ್ರ ಫೆಬ್ರವರಿ 6ಕ್ಕೆ ಬಿಡುಗಡೆ
ವಿಭಿನ್ನ ಕಥಾಹಂದರ ಹೊಂದಿರುವ “ನೆನಪುಗಳ ಮಾತು ಮಧುರ” ಚಿತ್ರ ಫೆಬ್ರವರಿ 6 ರಂದು ತೆರೆಗೆ ಬರಲಿದ್ದು ಆಫ್ಜಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ

“ನೆನಪುಗಳ ಮಾತು ಮಧುರ” ಚಿತ್ರದಲ್ಲಿ ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ. ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ, ಹಾರರ್ , ಹಾಸ್ಯ, ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳು ಇರಲಿದೆ ಎನ್ನುತ್ತಾರೆ ನಿರ್ದೇಶಕ ಅಫ್ಜಲ್.
ಅಫ್ಜಲ್(ಸೂಪರ್ ಸ್ಟಾರ್ಸ್) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಗ್ರಹಣ, ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ ದೇವರಾಜ ಕುಷ್ಟಗಿ ಹಿನ್ನೆಲೆ ಸಂಗೀತವಿದೆ
ನಿರ್ದೇಶಕ ಅಫ್ಜಲ್ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಸಹ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

