ಎರಡು ಊರುಗಳ ಮದ್ಯೆ ನಡೆಯುವ ಕಥೆ ” ದೇವಸ್ಯ” ಚಿತ್ರೀಕರಣ ಪೂರ್ಣ
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತ ” ದೇವಸ್ಯ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.ಕಾರ್ತೀಕ್ ಭಟ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅಪರೂಪದ ಗಿಡವೊಂದರ ಸುತ್ತ ಚಿತ್ರಕಥೆ ಎಣೆದಿದ್ದಾರೆ

ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅನಂತಮೂರ್ತಿ ಎಂ.ಹೆಗಡೆ ನಿರ್ಮಿಸಿದ್ದಾರೆ.ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಿತು.
ಈ ವೇಳೆ ಪತ್ರಕರ್ತರಿಗೆ ಮಾಹಿತಿ ನೀಡಿದ ನಿರ್ದೇಶಕ ಕಾರ್ತಿಕ್ ಭಟ್, 1995ರ ಕಾಲಘಟ್ಟದಲ್ಲಿ ನಡೆಯುವ ಮಣ್ಣಿನ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಸಿದ್ಧಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಚಿತ್ರದ ಪ್ರಮುಖ ಪಾತ್ರಧಾರಿ. 2 ವರ್ಷಗಳ ತರಬೇತಿ ನೀಡಲಾಗಿದೆ.ರಂಗಪ್ರತಿಭೆ ಆಹಾನ್‌ಗೌಡ ಮತ್ತು ಬಿಂಬಿಕಾ ಜೆ.ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಚಿತ್ರಕ್ಕಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ ಅಲ್ಲಿ, 93 ದಿನಗಳ ಕಾಲ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ, ಇದು ಕಥೆಯಲ್ಲ, ಹೊಸ ಜಗತ್ತು, ಉತ್ತರ ಕನ್ನಡದಲ್ಲಿ ಮಲೆನಾಡು, ಬಯಲುಸೀಮೆ ಎರಡೂ ಇದೆ. ಅದರಲ್ಲಿ ಸಾಕಷ್ಟು ಕಥೆಗಳಿದ್ದು, ಅದರಲ್ಲಿ ಇದೂ ಒಂದು, 46 ರಿಂದ 47 ವರ್ಷನ್ ಕಥೆ ಬರೆದು ಫೈನಲ್ ಮಾಡಿದ್ದೇವೆ
ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ ಎಂದರು.
ನಿರ್ಮಾಪಕ ಅನಂತಮೂರ್ತಿ ಹೆಗಡೆ ಮಾತನಾಡಿ . ಕಳೆದ ಮಾರ್ಚ್ ನಲ್ಲಿ ಶೂಟಿಂಗ್ ಆರಂಭಿಸಿ, ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ, ಸುಮಾರು 150ರಂದ 200 ಜನ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸಂಜೀವಿನಿ ಗಿಡವೇ ದೇವಸಸ್ಯ. ಚಿತ್ರಕ್ಕಾಗಿ 3 ವರ್ಷ ಹಗಲಿರುಳು ಕಷ್ಟಪಟ್ಟಿದ್ದಾರೆ. ಚಿತ್ರಕ್ಕಾಗಿಯೇ 30ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಠಿ ಮಾಡಿದ್ದೇವೆ. ಸಸ್ಯವೊಂದರ ಕುರಿತಂತೆ ಮಾಡಿರುವ ಕಥೆಯಾಗಿದ್ದರಿಂದ 5 ಭಾಷೆಗಳಲ್ಲಿ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ನಟ ಸೆಲ್ವಿನ್ ಮಾತನಾಡಿ ನಊರಲ್ಲಿ ಟ್ರ‍್ಯಾಕ್ಟರ್ ಓಡಿಸಿಕೊಂಡಿದ್ದೆ. ಕನ್ನಡ ಚೆನ್ನಾಗಿ ಬರುತ್ತೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂದ್ರು, ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ, ಆಕ್ಷನ್ ಕಲಿಸಿದರು ಎಂದು ವಿವರಿಸಿದರು.

ಮತ್ತೊಬ್ಬನಟ ಅಹಾನ್ ಮಾತನಾಡಿ ಕುರ್ಮುಷ್ಠ ಎಂಬ ಪಾತ್ರ ಮಾಡಿದ್ದೇನೆ ಎಂದರು.
ನಾಯಕಿ ಬಿಂಬಿಕಾ ಮಾತನಾಡಿ ಚಿತ್ರದಲ್ಲಿ ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇದು 5 ನೇ ಚಿತ್ರ ಎಂದರು.
ಯಶವಂತ್ ಛಾಯಾಗ್ರಹಣ, ಹರಿ ಅಜಯ್ ಸಂಗೀತ ಸಂಯೋಜನೆ, ಕೆಜಿಎಫ್. ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ಅದ್ಭುತ ಪ್ರಾಕೃತಿಕ ಸೊಬಗಲ್ಲಿ ರಾಜೇಶ್ ಕೃಷ್ಣನ್, ಆಂಥೋನಿದಾಸ್, ಇಂದು ನಾಗರಾಜ್, ರವಿ ಮೂರೂರು ಹಾಡಿರುವ ವಿಭಿನ್ನ ಶೈಲಿಯ 7 ಹಾಡುಗಳನ್ನ ಸೆರೆಹಿಡಿಯಲಾಗಿದೆ.
ಕಾಂತಾರ ಖ್ಯಾತಿಯ ಮಿಥುನ್‌ಸಿಂಗ್ ಸಾಹಸ ನಿರ್ದೇಶನ, ಯಶವಂತ ಕ್ಯಾಮೆರಾ ಕೈಚಳಕ, ಹರಿಅಜಯ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಸೆಲ್ವಿನ್ ದೇಸಾಯಿ, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಸಲಗ ಖ್ಯಾತಿಯ ಗೀತಾ ಸಿದ್ಧಿ ಹಾಗೂ ಇತರರು ನಟಿಸಿದ್ದಾರೆ.

