ಅಪ್ಪ-ಮಗನ ಬಾಂಧವ್ಯದ “ಫಾದರ್ಸ್ ಡೇ” ಜುಲೈ 17ಕ್ಕೆ ಬಿಡುಗಡೆ
ತಂದೆ – ಮಗನ ಬಾಂಧವ್ಯ ಸಾರುವ “ಫಾದರ್ಸ್ ಡೇ”. ಚಿತ್ರ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜೊತೆಗೆ ಕನ್ನಡದ ಮೊದಲ ಬೈಕ್ ರೈಡರ್ ಚಿತ್ರವಾಗಿದೆ. ಬಿಡುಗಡೆಗೆ ಮುನ್ನ ಹಾಡಿನ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು

ಒಂದು ದಿನದಲ್ಲಿ ನಡೆಯುವ ಕಥೆ. ಅಪ್ಪ – ಮಗನ ಬಾಂಧವ್ಯದ ಕಥೆಯೂ ಹೌದು. ಸಹ ಪಯಣಿಗರು ಅಪ್ಪ – ಮಗ ಎಂದು ನೋಡುಗರಿಗೆ ತಿಳಿದಿರುತ್ತದೆ. ಆದರೆ ಅವರಿಗೆ ಅದು ಗೊತ್ತಿರುವುದಿಲ್ಲ. ಜೊತೆಗೆ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ ಈ ಚಿತ್ರದಲ್ಲಿದೆ. ಅದೇ ಚಿತ್ರದ ವಿಶೇಷ. ಇನ್ನೂ ಈ ಚಿತ್ರಕ್ಕೆ ಡಬ್ಬಿಂಗ್ ಮಾಡಿಲ್ಲ. ಚಿತ್ರೀಕರಣ ನಡೆಯುವಾಗ ಆಡಿದ ನೈಜ ಸಂಭಾಷಣೆಯನ್ನೇ ಬಳಸಿಕೊಂಡಿರುವುದು ವಿಶೇಷ
ನಿರ್ದೇಶಕ. ರಾಜಾರಾಮ್ ರಾಜೇಂದ್ರನ್ ಮಾತನಾಡಿ ಕಿರುತೆರೆ ನಟ ಅಜಿತ್ ಹಂಡೆ ಹಾಗೂ ಹರ್ಷಿಲ್ ಕೌಶಿಕ್ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮ್ರಾಗ್ನಿ ರಾಜನ್, ಆಲ್ ಓಕೆ, ಕ್ಷೇಮ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಟಿ ಸಾಮ್ರಾಗ್ನಿ ಅವರು ಸಹ ಬೈಕ್ ರೈಡಿಂಗ್ ಮಾಡಿದ್ದಾರೆ. ‘ಫಾದರ್ಸ್ ಡೇ’ ದಿನ ಬಿಡುಗಡೆಯಾಗಿದ್ದ ಟ್ರೇಲರ್ ಗೆ ಪ್ರಶಂಸೆ ದೊರಕಿದೆ. ಚಿತ್ರ ಬಿಡುಗಡೆಗೂ ಮುಂಚೆ ಪ್ರಮೋಷನ್ ಸಾಂಗ್ ಅನಾವರಣವಾಗಿದೆ. ಮಕ್ಕಳಿಂದ ಹಿರಿಯರ ತನಕ ನೋಡಬಹುದಾದ ಮನೋರಂಜನೆಯ ಚಿತ್ರ ಇದಾಗಿದೆ ಎಂದರು.

ನಟ ಅಜಿತ್ ಹಂಡೆ ಮಾತನಾಡಿ ಇದೊಂದು ಕನ್ನಡಕ್ಕೆ ಹೊಸತರಹದ ಸಿನಿಮಾ.ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಅಪ್ಪನನ್ನು ಹುಡುಕಿ ಬರುವ ಮಗನ ಕಥೆಯೂ ಹೌದು. ಈ ಚಿತ್ರದಲ್ಲಿ 1200 ಸಿಸಿ ಬೈಕ್ ಓಡಿಸಿದ್ದು ಒಳ್ಳೆಯ ಅನುಭವ. ಬೈಕ್ ಓಡಿಸಲು ಶುರು ಮಾಡಿದಾಗ ನನಗೆ ಹೇಳಿ ಮಾಡಿಸಿದ ಬೈಕ್ ಅನಿಸಿತು. ಬೈಕ್ ಕೂಡ ಚಿತ್ರದ ಪ್ರಮುಖ ಪಾತ್ರಧಾರಿ ಎನ್ನಬಹುದು ಎಂದರು.
ನಾಯಕ ಹರ್ಷಿಲ್ ಕೌಶಿಕ್ ಮಾತನಾಡಿ “ಆಚಾರ್ ಅಂಡ್ ಕೋ”, ” ಅನಾಮಧೇಯ ಅಶೋಕ್” ಕುಮಾರ್” ಚಿತ್ರಕ್ಕೆ ನೀಡಿದ ಪೆÇ್ರೀತ್ಸಾಹಕ್ಕೆ ಚಿರಋಣಿ “ಫಾದರ್ಸ್ ಡೇ” ಎಲ್ಲಾ ವಯಸ್ಸಿನವರು ಮುಜುಗರವಿಲ್ಲದೆ ನೋಡಬಹುದಾದ ತಿಳಿಹಾಸ್ಯ ಹಾಗೂ ಶುದ್ದ ಮನೋರಂಜನೆಯ ಚಿತ್ರ. ಮ್ಯೂಸಿಕ್ ಸಹ ತುಂಬಾ ಚೆನ್ನಾಗಿದೆ ಎಂದು ಹೇಳಿದರು

ಆಲ್ ಓಕೆ ಮಾತನಾಡಿ ಪ್ರಮೋಷನ್ ಹಾಡಿಗೆ ಮಾತ್ರ ಸಂಗೀತ ನಿರ್ದೇಶನ ಮಾಡಿದ್ದೇನೆ. ಉಳಿದ ಹಾಡುಗಳಿಗೆ ಜೋ ಪ್ಯಾನಿಕರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ “ಬ್ಲೂಸ್” ಶೈಲಿಯ ಸಂಗೀತವಿದೆ ಎಂದರು.
ನಟಿ ಸಮ್ರಾಗ್ನಿ ರಾಜನ್ ಮಾತನಾಡಿ ನನ್ನ ತಂದೆ ಹಾಗೂ ತಾಯಿ ಬೈಕ್ ರೈಡರ್ಸ್. ನನಗೂ ಚಿಕ್ಕಂದಿನಿಂದಲೂ ಬೈಕ್ ಓಡಿಸುವುದರಲ್ಲಿ ಆಸಕ್ತಿ. ಈ ಚಿತ್ರದಲ್ಲೂ ಬೈಕ್ ರೈಡರ್ ಪಾತ್ರದಲ್ಲೇ ಅಭಿನಯಿಸಿದ್ದೇನೆ ಎಂದು ತಿಳಿಸಿದರು.
ನಟಿ ಕ್ಷೇಮ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕಿ ಜೋ ಪ್ಯಾನಿಕರ್ ಪತ್ರಿಕಾಗೋಷ್ಠಿಯಲ್ಲಿದ್ದರು. ಪಿ.ವಿ.ಆರ್ – ಐನಾಕ್ಸ್ ಪಿಕ್ಚರ್ಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಜ್ಯೋಲ್ಸ್ನಾ ಪ್ಯಾನಿಕರ್ ಈ ಚಿತ್ರಕ್ಕೆ ಸಂಕಲನ ಕಾರ್ಯ ಮಾಡಿದ್ದಾರೆ.


