“ಕ್ಯಾಲೆಂಡರ್” ಬಿಡುಗಡೆ ದಿನಾಂಕ ಬದಲು
“ಸ್ವಾರ್ಥ ರತ್ನ” ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ “ಕ್ಯಾಲೆಂಡರ್” ಚಿತ್ರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿದೆ. ಮಹಿಳಾ ಪ್ರಧಾನ ಚಿತ್ರ ಏಪ್ರಿಲ್ 3 ರಂದು ಬಿಡುಗಡೆಯಾಗಬೇಕಾಗಿತ್ತು, ಇದೀಗ ಒಂದು ವಾರ ಮುಂದೂಡಿದೆ

“ಕ್ಯಾಲೆಂಡರ್” ಚಿತ್ರಕ್ಕೆ ಚಿತ್ರಮಂದಿರಗಳ ಸಮಸ್ಯೆ ಎದುರಾಗಿದೆ. ಕಾರಣದಿಂದ “ಕ್ಯಾಲೆಂಡರ್” ಚಿತ್ರ ಬಿಡುಗಡೆಯನ್ನು ಒಂದು ವಾರ ತಡವಾಗಿ ಏಪ್ರಿಲ್ 10ರಂದು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರದ ನಿರ್ಮಾಪಕರೂ ಆಗಿರುವ ನಾಯಕ ಆದರ್ಶ ಗುಂಡುರಾಜ್ ತಿಳಿಸಿದ್ದಾರೆ.
ಈ ಚಿತ್ರದ ನಾಯಕಿಯರಾಗಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಟಿಸಿದ್ದಾರೆ.ಕನಸಿನ ರಾಣಿ ಮಾಲಾಶ್ರೀ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ.
ರಮೇಶ್ ಕೊಯಿರಾ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಮಹಾಂತೇಶ್ ಆರ್ ಸಹ ನಿರ್ದೇಶನವಿರುವ ಈ ಚಿತ್ರವನ್ನು ನವೀನ್ ಶಕ್ತಿ ನಿರ್ದೇಶಿಸಿದ್ದಾರೆ.

