ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ನಿರ್ಮಾಣ: ಡಿಸಿಎಂ ಪವನ್ ಕಲ್ಯಾಣ್ ಹಾರೈಕೆ
ದಕ್ಷಿಣ ಚಿತ್ರರಂಗದಲ್ಲಿ ಕೆವಿಎನ್ ಸಂಸ್ಥೆ ಹೊಸ ಕ್ರಾಂತಿ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ ಹಾಗೂ ವಿಜಯ್ ಜೊತೆ ಜನನಾಯಗನ್ ಸಿನಿಮಾ ಮಾಡಿರುವ ಈ ನಿರ್ಮಾಣ ಸಂಸ್ಥೆ ಈಗ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೈ ಜೋಡಿಸಿದೆ.

ಚಿರಂಜೀವಿ 158ನೇ ಸಿನಿಮಾಗೆ ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಹಣ ಹಾಕ್ತಿದ್ದಾರೆ. ಹೈದ್ರಾಬಾದ್ನಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿರು ಸಹೋದರರು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕ್ಲ್ಯಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮೆಗಾಸ್ಟಾರ್ ಗೆ ಈ ಹಿಂದೆ `ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್ನ ಎರಡನೇ ಸಿನಿಮಾ ಇದಾಗಿದೆ. ಬಹುಕೋಟೆ ಬಜೆಟ್ ನಲ್ಲಿ ಕೆವಿಎನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಅಂದಹಾಗೇ ಇದೊಂದು ಹೈ-ವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಸಿನಿಮಾ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಅಭಿಮಾನಿಗಳು ಈ ವಿಡಿಯೋ ಸಾಕಷ್ಟು ಸಂತಸಪಟ್ಟಿದ್ದರು.


