Actor Kiran Srinivas in the film "Mahaan" directed by PC Shekhar

ಪಿಸಿ ಶೇಖರ್ ನಿರ್ದೇಶನದ “ಮಹಾನ್” ಚಿತ್ರದಲ್ಲಿ ನಟ ಕಿರಣ್ ಶ್ರೀನಿವಾಸ್ - CineNewsKannada.com

ಪಿಸಿ ಶೇಖರ್ ನಿರ್ದೇಶನದ “ಮಹಾನ್” ಚಿತ್ರದಲ್ಲಿ ನಟ ಕಿರಣ್ ಶ್ರೀನಿವಾಸ್

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ಕಿರಣ್ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ. ಮಹಾನ್”

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ಕಿರಣ್ ಶ್ರೀನಿವಾಸ್, “ಮಹಾನ್” ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಅವರ ನಿರ್ದೇಶನದ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿತ್ತು. ನಿರ್ದೇಶನದ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ. “ಮಹಾನ್” ಚಿತ್ರದಲ್ಲಿ ನಾನು ಈವರೆಗೂ ಮಾಡಿರದ ಪಾತ್ರ ಮಾಡಿದ್ದೇನೆ. ಈ ಪಾತ್ರ ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರವಾಗುತ್ತದೆ ಎಂಬ ಭರವಸೆ ಇದೆ ಎಂದರು

ನಿರ್ದೇಶಕರು ಕಥೆ ಹೇಳಿದಾಗಲೇ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು. ಇನ್ನೂ, ಕೆಲವು ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋನಲ್ಲಿ ನಿರೂಪಕನಾಗಿದ್ದೆ.. ಆಗ ಅವರು ತೋರಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ಈಗ ಅವರ ಜೊತೆಗೆ ನಟಿಸಿರುವುದು ಬಹಳ ಖುಷಿಯಾಗಿದೆ. ರಂಗಾಯಣ ರಘು ಅವರಿಂದ ಅಭಿನಯದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ರಾಧಿಕಾ ನಾರಾಯಣ್ ಹಾಗೂ ವರ್ಷ ಬೊಳಮ್ಮ ಅವರ ಜೊತೆಗೆ ಅಭಿನಯಿಸಿದ್ದು ಹಾಗೂ ಪ್ರಕಾಶ್ ಬುದ್ದೂರು ಅವರ ನಿರ್ಮಾಣದಲ್ಲಿ ನಟಿಸುತ್ತಿರುವುದು ಸಂತೋಷವಾಗಿದೆ. ಈ ಚಿತ್ರದಲ್ಲಿ “ಮಹಾನ್” ಎಂದರೆ ರೈತ. ದೇಶದ ಬೆನ್ನೆಲುಬಾದ ರೈತನ ಕುರಿತಾದ ಚಿತ್ರದಲ್ಲಿ ನಾನು ಒಂದು ಭಾಗವಾಗಿರುವುಕ್ಕೆ ಹೆಮ್ಮೆ ಇದೆ ಎಂದರು

ಚಿತ್ರದಲ್ಲಿ ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಮುಂತಾದವರು “ಮಹಾನ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin