ಜೂನ್ 12 ರಂದು ಮಹಿಳಾ ಪ್ರಧಾನ ಚಿತ್ರ “ಪೊಲೀಸ್ ಕಂಪ್ಲೈಂಟ್” ಬಿಡುಗಡೆ
ಕನ್ನಡದಲ್ಲಿ ಬಹಳ ದಿನಗಳ ನಂತರ
ಮ್ಯಾಕ್ಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ“ಪೊಲೀಸ್ ಕಂಪ್ಲೈಂಟ್” ಚಿತ್ರ ಜೂನ್ 12 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

ಕನ್ನಡದಲ್ಲಿ ಈ ಹಿಂದೆ ಪೂಜಾಗಾಂಧಿ ಅಭಿನಯದ ಅನು',ದಂಡು’, `ಆಪ್ತ’, ‘ಆದಿ ಪರ್ವ’ ಮೊದಲಾದ ಚಿತ್ರ ನಿರ್ದೇಶಿಸಿದ್ದ ಸಂಜೀವ ಮೆಗೋಟಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಮಹಿಳಾ ಪ್ರಧಾನ ಆಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ, ಅದರ ಸಾಲಿಗೆ ಸೇರುವ ಚಿತ್ರ ಇದು, ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಚಿತ್ರದಲ್ಲಿದೆ.
ನಿರ್ದೇಶಕ ಸಂಜೀವ ಮೆಗೋಟಿ ಮಾತನಾಡಿ ಸುಮಾರು ಹತ್ತು ವರ್ಷದ ನಂತರ ಕನ್ನಡದಲ್ಲಿಪೆÇಲೀಸ್ ಕಂಪ್ಲೈಂಟ್’ ಚಿತ್ರವನ್ನು ನಿರ್ದೇಶಿಸಿ, ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆಕ್ಷನ್ ಕಮ್ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಮಾಡಿದ ಕರ್ಮ ಹೇಗೆ ಕಾಡುತ್ತದೆ ಎಂಬ ಒಂದು ಎಳೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದರು.

ನಟಿ ರಾಗಿಣಿ ದ್ವಿವೇದಿ ಮಾತನಾಡಿ ಸಿನಿಮಾ ಕೆರಿಯರ್ ನಲ್ಲಿ ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಕೂಡ ಸಿನಿಮಾದಲ್ಲಿದೆ. ಎಲ್ಲಾ ಥರದ ಆಡಿಯನ್ಸ್ ಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಯಕಿ ವರಲಕ್ಷ್ಮೀ ಶರತ್ ಕುಮಾರ್ ಮಾಹಿತಿ ನೀಡಿ, ಇಂದಿನ ಜನರೇಶನ್ ಆಡಿಯನ್ಸ್ ಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಇದರಲ್ಲಿ ಮನಮುಟ್ಟುವ ಕಥೆಯ ಜೊತೆಗೆ, ಸಮಾಜಕ್ಕೊಂದು ಸಂದೇಶವಿದೆ.ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲಾ ಥರದ ಎಂಟರ್ಟೈನ್ಮೆಂಟ್ ಎಲಿಮೆಂಟ್ಸ್ `“ಪೊಲೀಸ್ ಕಂಪ್ಲೈಂಟ್” ಸಿನಿಮಾದಲ್ಲಿದೆ. ಖಂಡಿತಾ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದಿದ್ದಾರೆ.
ನಾಯಕ ನಟರಲ್ಲಿ ಒಬ್ಬರಾದ ಕೃಷ್ಣಸಾಯಿ ಮಾತನಾಡಿ ಇಲ್ಲಿಯವರೆಗೆ ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ನಾಯಕ ನಟನಾಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾಕ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ' ಎಂದಿದ್ದಾರೆ“ಪೊಲೀಸ್ ಕಂಪ್ಲೈಂಟ್” ಚಿತ್ರದ ಮೊದಲ ಗೀತೆಗೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣವಿದೆ.


