ಭಾಯ್ಸ್ ನೆವರ್ ಕಾಂಪ್ರಮೈಸ್ ” ಚಿತ್ರದ ಟೀಸರ್ ಬಿಡುಗಡೆ
ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ‘ಬಾಯ್ಸ್ ನೆವರ್ ಕಾಂಪ್ರಮೈಸ್’ಎಂಬ ಚಿತ್ರಕ್ಕೆ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಹರೀಶ್ ಜಲಗೆರೆ ಅವರ ಹಿಂದಿನ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಕೋಲಾರ ಸೀನು, ಹೊಸ ಸಾಹಸಕ್ಕೆ ಜತೆಯಾಗಿದ್ದಾರೆ.

ಹಾರರ್ ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದ ಟೀಸರ್ ಹಾಗೂ ಬಾಯ್ಸ್ ಆಂಥೆಮ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಮುಖಗಳೇ ಬಣ್ಣ ಹಚ್ಚಿದ್ದಾರೆ. ಉಜ್ವಲ ನಾಗರಾಜ ಜಲಗೆರೆ ಚಿತ್ರವನ್ನು ನಿರ್ಮಿಸಿದ್ದಾರೆ.
ನಿರ್ದೇಶಕ ಹರೀಶ್ ಜಲಗೆರೆ ಮಾತನಾಡಿ ಇದೊಂದು ಹಾರರ್ ಕಾಮಿಡಿ ಜಾನರ್ ಚಿತ್ರ. ಜತೆಗೊಂದು ಮೆಸೇಜ್ ಕೂಡ ಇದೆ. ಒಂದಷ್ಟು ಹುಡುಗರು ತರ್ಲೆ ತುಂಟಾಟ ಮಾಡಲು ಹೋಗಿ ದೆವ್ವದ ಜತೆ ಹೇಗೆ ಕನೆಕ್ಟ್ ಆಗ್ತಾರೆ ಎಂಬುದೇ ಈ ಚಿತ್ರದ ಕಾನ್ಸೆಪ್ಟ್. ಕಾಮಿಡಿ ಜತೆಗೊಂದು ಮೆಸೇಜ್ ಕೂಡ ಚಿತ್ರದಲ್ಲಿದೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ. ನನ್ನ ಪ್ರಯತ್ನಕ್ಕೆ ಸ್ನೇಹಿತ ಕೋಲಾರ ಸೀನು ಕೈಜೋಡಿಸಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಈಗ ಟೀಸರ್ ಹೊರಬಂದಿದ್ದು ಜುಲೈ 10ಕ್ಕೆ ನಮ್ಮ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎಂದರು
15 ರಿಂದ 20 ದಿನದಲ್ಲಿ ಐಟಂ ಸಾಂಗ್ ರಿಲೀಸ್ ಮಾಡಿ, ಜುಲೈ ಮೊದಲವಾರ ಕಿಚ್ಚ ಸುದೀಪ್ ಅವರ ಕೈಲಿ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಸುತ್ತಿದ್ದೇವೆ. ಹುಡುಗರಲ್ಲೂ ಕೆಲವು ರಿಕ್ವೈರ್ ಮೆಂಟ್ ಗಳಿರುತ್ತವೆ. ಅದರಲ್ಲಿ ಕೆಲವರು ಕಾಂಪ್ರಮೈಸ್ ಆದರೆ, ಕೆಲವರು ಆಗಲ್ಲ, ಆಗದಿದ್ದರೆ ಏನಾಗುತ್ತದೆ ಎಂಬುದನ್ನು ಒಂದು ಹಾರರ್ ಎಲಿಮೆಂಟ್ ಇಟ್ಟುಕೊಂಡು ಕಾಮಿಡಿಯಾಗಿ ಹೇಳಿದ್ದೇವೆ. ಎಲ್ಲರೂ ಒಟ್ಟಾಗಿ ಸೇರಿ ಮಾಡಿರುವ ಚಿತ್ರ, ನಾನೇನು ನಿರೀಕ್ಷೆ ಮಾಡಿದ್ದೆನೋ ಅದೇರೀತಿ ಸಿನಿಮಾ ಬಂದಿದೆ. ಚಿತ್ರವನ್ನು ಈಗಾಗಲೇ ಸೆನ್ಸಾರ್ ಗೆ ಕಳಿಸಿದ್ದೇವೆ ಎಂದು ಹೇಳಿದರು.

ಸಹ ನಿರ್ದೇಶಕ ಕೋಲಾರ ಸೀನು ಮಾತನಾಡಿ ಹರೀಶ್ ಅವರ ಜತೆ 2 ಸಿನಿಮಾ ಮಾಡಿದ್ದೇನೆ.20 ವರ್ಷಗಳಿಂದ ನಮಗಮ ಸ್ನೇಹ ಹಾಗೇ ಇದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದರು.
ಲೋಕಿ ತವಸ್ಯ ಮಾತನಾಡಿ ಹಾಡುಗಳು ಇಷ್ಟು ಚೆನ್ನಾಗಿ ಬರಲು ನಿರ್ದೇಶಕರ ಎಫರ್ಟ್ ಕಾರಣ. ಮ್ಯೂಸಿಕ್ ಗೆ ತಕ್ಕಂತೆ ಮೇಕಿಂಗ್ ಮಾಡಿದ್ದಾರೆ. ಆಂಟನಿದಾಸನ್,ಐಶ್ವರ್ಯ ರಂಗರಾಜನ್ ಹಾಡಿರುವ ಸಾಂಗ್ ಸದ್ಯದಲ್ಲೇ ರಿಲೀಸಾಗಲಿದೆ ಎಂದರು. ನಟ ರಾಜೀವ್ ರೆಡ್ಡಿ ಅವರು ಈ ಚಿತ್ರದಲ್ಲಿ ಪೆÇಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಾಡೆಲಿಂಗ್ ಜತೆಗೆ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ನಟಿ ನಕ್ಷತ್ರ ಇದರಲ್ಲಿ ಲೀಡ್ ರೋಲ್ ಮಾಡಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಅಭಿನಯಿಸಿದ ಯುವ ಕಲಾವಿದರೆಲ್ಲ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.

ಲೋಕಿ ತವಸ್ಯ ಸಂಗೀತ, ಎಂ.ಎಸ್. ತ್ಯಾಗರಾಜ್ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಕಾರ್ತೀಕ್ ಈಶ್ವರಚಾರಿ ಅವರ ಸಂಕಲನ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರಕ್ಕಿದೆ.

