Guntur Ammai song from the film 'Keke' starring Sonushrinivas Gowda released

ಸೋನುಶ್ರಿನಿವಾಸ್ ಗೌಡ ಹೆಜ್ಜೆ ಹಾಕಿರುವ ‘ಕೇಕೆ’ ಚಿತ್ರದ ಗುಂಟೂರು ಅಮ್ಮಾಯಿ ಹಾಡು ಬಿಡುಗಡೆ - CineNewsKannada.com

ಸೋನುಶ್ರಿನಿವಾಸ್ ಗೌಡ ಹೆಜ್ಜೆ ಹಾಕಿರುವ ‘ಕೇಕೆ’ ಚಿತ್ರದ ಗುಂಟೂರು ಅಮ್ಮಾಯಿ ಹಾಡು ಬಿಡುಗಡೆ

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಾಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ ಅವರು “ಕೇಕೆ” ಚಿತ್ರದಲ್ಲಿ ಗುಂಟೂರು ಅಮ್ಮಾಯಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಕುತೂಹಲ ಕೆರಳಿಸಿದೆ. ಈ ಮೂಲಕ ಸೋನು ಶ್ರೀನಿವಾಸಗೌಡ ಐಟಂ ಡ್ಯಾನ್ಸ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಕೇಕೆ ಚಿತ್ರದ ಸದ್ದಿಲ್ಲದೆ ಚಿತ್ರೀಕರನ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಐಟಂ ಹಾಡು ಬಿಡುಗಡೆ ಮಾಡಲಾಗಿದೆ, ಇದೇ ವೇಳೆ ಸೋನು ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಆಚರಿಸಿ ಸಂಭ್ರಮಿಸಿದೆ

ಕೇಕೆ.. ಚಿತ್ರಕ್ಕ ಸೋಮಶೇಖರ್ ಜಿ.ಕೆ ನಿರ್ದೇಶಿಸಿದ್ದು, ಬಹುತೇಖ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಭರತ್ ಇಂಡಿಯಾ ಛಾಯಾಗ್ರಹಣ ಚಿತ್ರಕ್ಕಿದೆ.

ಕೇಕೆ ಚಿತ್ರಕ್ಕೆ ಉಪೇಂದ್ರ ಐ ಲವ್ ಯೂ ಚಿತ್ರ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ.ಬಿಡುಗಡೆಯಾಗಿರೋ ಗುಂಟೂರು ಅಮ್ಮಾಯಿ ಹಾಡಿಗೆ ಸಂಗೀತದ ಜೊತೆ ಖುದ್ದು ಕಿರಣ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಧನಿಯಾಗಿದ್ದಾರೆ.

ಆಲಾಪಾನ ಆಡಿಯೋ ಮೂಲಕ ಹಾಡನ್ನ ರಿಲೀಸ್ ಮಾಡಲಾಗಿದೆ. ಆಲಾಪಾನ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ನೋಡಲು ಲಭ್ಯವಿದೆ. ಗುಂಟೂರು ಅಮ್ಮಾಯಿ… ಹಾಟು ಘಾಟು ಬೀಟ್ಸ್ ಇರೋ ತೆಲುಗು ಮಿಶ್ರೀತ ಕನ್ನಡ ಹಾಡು… ಕೇಳೋದಕ್ಕೆ ರಸವತ್ತಾಗಿರೋ ಈ ಹಾಡು ನೋಡದಕ್ಕೂ ಅಷ್ಟೇ ರಂಗಾಗಿ ಮೂಡಿ ಬಂದಿದೆ…

ಇದೇ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿರುವ ಸೋನುಶ್ರೀನಿವಾಸ್ ಗೌಡ ಮೊದಲ ಚಿತ್ರದ ಅನುಭವ ಬಿಚ್ಚಿಟ್ಟು , ಈ ಅವಕಾಶಕ್ಕೆ ಆಭಾರಿಯಾಗಿದ್ದು, ಪ್ರೇಕ್ಷಕರ ಆಶೀರ್ವಾದ ಬೇಕು ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin