Come with love, trust me, then have fun.. Actor Dolly Dhananjaya wrote a heartfelt letter to his fans

ಪ್ರೀತಿಯಿಂದ ನಂಬಿ ಬನ್ನಿ.,, ಆಮೇಲೆ ಮಜಾ ನೋಡಿ.. ಅಭಿಮಾನಿಗಳಿಗೆ ಅಕ್ಕರೆಯ ಪತ್ರ ನಟ ಬರೆದ ಡಾಲಿ ಧನಂಜಯ - CineNewsKannada.com

ಪ್ರೀತಿಯಿಂದ ನಂಬಿ ಬನ್ನಿ.,, ಆಮೇಲೆ ಮಜಾ ನೋಡಿ.. ಅಭಿಮಾನಿಗಳಿಗೆ ಅಕ್ಕರೆಯ ಪತ್ರ ನಟ ಬರೆದ ಡಾಲಿ ಧನಂಜಯ

“ಬಡವ ರಾಸ್ಕಲ್, ಹೆಡ್‍ಬುಷ್, ಟಗರು ಪಲ್ಯ, ವಿದ್ಯಾಪತಿ, ಜೆಸಿಬಿ ದಿ ಯೂನಿವರ್ಸಿಟಿ, ಜೀ ವಾಹಿನಿಗಾಗಿ ನಿರ್ಮಾಣ ಮಾಡಿದ “ಜೆರಾಕ್ಸ್ “ ವೆಬ್ ಸರಣಿ ನಂತರ ಡಾಲಿ ಧನಂಜಯ ನಟನೆ ಹಾಗು ನಿರ್ಮಾಣದ “ಮದರ್ ಪ್ರಾಮಿಸ್” ಚಿತ್ರ ಜುಲೈ 10ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಡಾಲಿ ಧನಂಜಯ ಅಕ್ಕರೆ, ಅಭಿಮಾನದ ಪತ್ರ ಬರೆದಿದ್ದಾರೆ.

ಮದರ್ ಪ್ರಾಮಿಸ್ ಚಿತ್ರದ ಬಗ್ಗೆ ಸಿನಿಮಾ ಕಥೆಯೇ ಗೊತ್ತಿಲ್ಲದ ಮಂದಿ ನಕ್ಕು ನಲಿದ ಸಂತಸ ಹಂಚಿಕೊಂಡಿರುವ ಡಾಲಿ ಧನಂಜಯ ಚಿತ್ರ ಪ್ರೇಕ್ಷಕರಿಗೂ ಕೂಡ ಇಷ್ಟವಾಗಲಿದೆ, ನಗುವಿನ ಹಬ್ಬದೂಡ ನೀಡಲಿದೆ ಇದು ಮದರ್ ಪ್ರಾಮಸ್ ಎಂದಿದ್ಧಾರೆ
ಅಭಿಮಾನಿಗಳಿಗೆ ಪತ್ರದ ವಿವರ ಇಂತಿದೆ.

ಕನ್ನಡದ ಪ್ರೇಕ್ಷಕ ಪ್ರಭುಗಳಿಗೆ ನಿಮ್ಮ ಪ್ರೀತಿಯ ಡಾಲಿ ಮಾಡುವ ನಮಸ್ಕಾರಗಳು..

“ಮದರ್ ಪ್ರಾಮಿಸ್” ಸಿನಿಮಾಕ್ಕೆ ಸಂಬಂಧವಿಲ್ಲ ಸಿನಿಮಾ ಕಥೆಯೇ ಗೊತ್ತಿಲ್ಲದ ಐದಾರು ತಂಡಗಳಿಗೆ ಸಿನಿಮಾ ತೋರಿಸಿದ್ವಿ, ಹೊಟ್ಟೆ ತುಂಬಾ ನಕ್ಕು ಹೊರಳಾಗಿ ಅಷ್ಟು ಜನ ಹೇಳಿದ್ದು ಒಂದೇ ಮತ್ತೆ ನೋಡ್ತೀವಿ, ಸಕತ್ ಎಂಟಟೈನ್‍ಮೆಂಟ್ ಸಿನಿಮಾ. ಜೊತೆಗೆ ಒಟಿಟಿ ಹಾಗು ಟಿವಿ ವಾಹಿನಿಗಳ ತಂಡ,ವಿತರಕರಾದ ಕೆವಿಎನ್ ಪ್ರೊಡಕ್ಷನ್ ಸುಪ್ರೀತ್, ದೊಡ್ಡ ವಿಶ್ವಾಸ ತುಂಬಿದ್ದಾರೆ..ನೀವು ನೋಡಿದ ಮೇಲೆ ಕೂಡ 100 ಪರ್ಸೆಂಟ್ ಒಂದೇ ಪ್ರತಿಕ್ರಿಯೆ ಬರುತ್ತೆ, ಅನ್ನೋ ನಿರೀಕ್ಷೆ ಇದೆ, ಬಂದೇ ಬರುತ್ತೇ ಕೂಡ..

ಇನ್ನು ಸಿನಿಮಾ ಟ್ರೈಲರ್ ಇಷ್ಟ ಪಟ್ಟಿದ್ದೀರಾ ಬಹಳ ಖುಷಿ ಅಗಿದೆ. ನಿಜ ಹೇಳಬೇಕು ಅಂದರೆ ಅದು ಸಣ್ಣ ಝಲಕ್, ಅಷ್ಟೇ, ಕಥೆ ಶುರುವಾಗಿ ಪಾತ್ರಗಳ ಜೊತೆ ಕನೆಕ್ಟ್ ಆಗಿ ಜರ್ನಿ ಶುರು ಆದ ಮೇಲೆ ಮಜಾ , ಥಿಯೇಟರ್ ಅಲ್ಲಿ ಸಿನಿಮಾ ನೋಡ್ತಾನೆ ಸಿಗೋದು.
ಏನಪ್ಪ ಡಾಲಿ.. ಮತ್ತೆ ಅದೇ ಆಕ್ಷನ್, ಅದೇ ರೌಡಿಸಂ, ಅದೇ ಮದರ್ ಸೆಂಟಿಮೆಂಟ್ ಜೊತೆ ಬಂದಿದ್ದಾನೆ. ಅಂತ ಟ್ರೈಲರ್ ನೋಡಿ ಮೂಗು ಮುರಿದು ಪಿಕ್ಚರ್ ಮಿಸ್ ಮಾಡ್ಕೋ ಬೇಡಿ , ಪ್ರೀತಿಯಿಂದ ನಂಬಿ ಬನ್ನಿ ಆ ಮೇಲೇ ನೋಡಿ ಮಜಾ.. ಮಾಸ್ ಆಡಿಯೆನ್ಸ್ ಕ್ಲಾಸ್ ಆಡಿಯೆನ್ಸ್, ಕಾಲೇಜ್ ಹೈಕ್ಲು, ಪ್ಯಾಮಿಲಿ, ಮಕ್ಕಳು ಸೇರಿ ಎಲ್ಲರಿಗೂ ನಗುವಿನ ಹಬ್ಬದೂಟ.

ನನ್ನ ನಿರ್ಮಾಣ ಸಂಸ್ಥೆಯಿಂದ ಸತತವಾಗಿ ಹೊಸಬರ ಜೊತೆ ಹೊಸ ಪ್ರಯತ್ನಗಳು ನಡೀತಾ ಇವೆ. ಎಲ್ಲಿ ಹರಿವಿಲ್ಲವೊ. ಹೊಸದಿಲ್ಲವೋ ಅಲ್ಲಿ ಕೊಳೆಯುವುದು ಸಹಜ, ಹಾಗಾಗಿ ನಿರಂತರ ಹೊಸ ಹರಿವಿನೊಂದಿಗೆ ಪ್ರಯಾಣಿಸುವ ತುಡಿತ.

ನಮ್ಮ ನಿರ್ಮಾಣ ಸಂಸ್ಥೆಯ ಸಿನಿಮಾಗಳ ಪಟ್ಟಿ ತೆಗೆದುಕೊಂಡು ನೋಡಿದರೆ “ಬಡವ ರಾಸ್ಕಲ್, ಹೆಡ್ ಬುಷ್, ಟಗರು ಪಲ್ಯ, ವಿದ್ಯಾಪತಿ ಜೆಸಿಬಿ ದಿ ಯೂನಿವರ್ಸಿಟಿ, ಜೀ-5 ವಾಹಿನಿಯಲ್ಲಿ ತೆರೆಗೆ ಬಂದ ಜೆರಾಕ್ಸ್ ವೆಬ್ ಸರಣಿ,” ಇದರ ಜೊತೆಗೆ ಸಂಸ್ಥೆ ಅರ್ಪಿಸಿದ ಡೇರ್ ಡೆವಿಲ್ ಮುಸ್ತಫಾ, ಆಕ್ರೆಸ್ಟಾ ಮೈಸೂರು ಹೀಗೆ ಸಾಕಷ್ಟು ಸಿನಿಮಾಗಳು..

ಬಹುತೇಕ ಸಿನಿಮಾ ಚಿತ್ರಮಂದಿರದಲ್ಲಿ ಬಂದು ಕೈ ಹಿಡಿದಿದ್ದೀರಾ, ನೋಡಿದ್ದೀರಾ, ಪ್ರಾಮಾಣಿಕ ಚಿತ್ರಗಳು ಯಾವತ್ತೂ ಸೋಲೋದಿಲ್ಲ ಕಳೆದು ಹೋಗೋದಿಲ್ಲ ಎನ್ನುವ ನಂಬಿಕೆ. ಒಳ್ಳೆ ಕೆಲಸದ ಜೊತೆ ಯಾವತ್ತೂ ನಿಲ್ತೀರಾ ಅನ್ನೋ ನಂಬಿಕೆ ಇದೆ, ಲವ್ ಯೂ ಆಲ್..

ಜುಲೈ 10ಕ್ಕೆ ಮದರ್ ಪ್ರಾಮಿಸ್ ಅನ್ನು ಚಿತ್ರಮಂದಿರಲ್ಲಿ ಸೆಲೆಬ್ರೇಟ್ ಮಾಡೋಣ, ಮಜಾ ಮಾಡೋಣ, ನಗು ನಮ್ಮ ಪ್ರಾಮಿಸ್… ಎಂದಿದ್ದಾರೆ ಡಾಲಿ ಧನಂಜಯ.

ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಇದ್ದಾರೆ

‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಮದರ್ ಪ್ರಾಮಿಸ್’ ಚಿತ್ರದಲ್ಲಿ ಸ್ಯಾಂಡಲ್‍ವುಡ್‍ನ ಪ್ರಮುಖ ಕಲಾವಿದರ ದಂಡೇ ಇದೆ. ಮುಖ್ಯಪಾತ್ರದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ಧಾರೆ. ಸ್ನೇಹಿತ ಪೂರ್ಣಚಂದ್ರ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ

ಉಳಿದಂತೆ ವಿನಯಾ ಪ್ರಸಾದ್,ಗೀತಾ, ಚಿ. ಗುರುದತ್, ನಾಗಭೂಷಣ ಎನ್. ಎಸ್. ಮಹದೇವ್ ಪ್ರಸಾದ್,ನರೇಶ್ ಡಿಂಗ್ರಿ ,ಶ್ರೀವತ್ಸ ಶ್ಯಾಮ್ ಸೇರಿದಂತೆ ಒಂದಷ್ಟು ಕಲಾವಿದರ ದಂಡು ಚಿತ್ರದಲ್ಲಿ ನಟಿಸಿದ್ದಾರೆ.ನಟ ಪೂರ್ಣಚಂದ್ರ ಮೈಸೂರು ಅವರು ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin