Rajinikanth and Kamal Haasan to act together after 47 years

47 ವರ್ಷಗಳ ನಂತರ ರಜನೀಕಾಂತ್ – ಕಮಲ್ ಹಾಸನ್ ಜೋಡಿ ಜೊತೆಯಾಗಿ ನಟನೆ - CineNewsKannada.com

47 ವರ್ಷಗಳ ನಂತರ ರಜನೀಕಾಂತ್ – ಕಮಲ್ ಹಾಸನ್ ಜೋಡಿ ಜೊತೆಯಾಗಿ ನಟನೆ

ಭಾರತೀಯ ಚಿತ್ರರಂಗ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ತಮಿಳು ಚಿತ್ರರಂಗದ ಇಬ್ಬರು ದಂತಕಥೆಗಳಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಸುಮಾರು 47 ವರ್ಷಗಳ ನಂತರ ಜೊತೆಯಾಗಿ ನಟಿಸಲು ಸಜ್ಜಾಗಿದ್ದಾರೆ‌

ಎಚ್ ಕೆ – ಆರ್ ಕೆ ತಾತ್ಕಾಲಿಕ‌ ಹೆಸರಿನ ಚಿತ್ರದ ಮೂಲಕ ಮಹಾನ್ ನಟರು ಜೊತೆಯಾಗುತ್ತಿದ್ದಾರೆ. ಇದು ತಮಿಳು ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚು ಮಾಡಿದೆ.

ಖ್ಯಾತ ನಟರು ಕೊನೆಯದಾಗಿ 1970ರ ದಶಕದ ಉತ್ತರಾರ್ಧದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ದಶಕಗಳ ನಂತರ ಜೊತೆಯಾಗುತ್ತಿದ್ದಾರೆ. ಸಮಕಾಲೀನ ಭಾರತೀಯ ಚಿತ್ರ ಇತಿಹಾಸದ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದಾಗಿದೆ. ತಲೆಮಾರುಗಳ ಪ್ರೇಕ್ಷಕರನ್ನು ರಂಜಿಸಿದ ಮತ್ತು ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಇಬ್ಬರು ದಿಗ್ಗಜರ ಪರಂಪರೆಯ ಸಂಗಮ ಇದಾಗಿದೆ.

ರೆಡ್ ಜೈಂಟ್ ಮೂವೀಸ್ ಸಂಸ್ಥೆ ಈ ಐತಿಹಾಸಿಕ ಸಾಹಸಕ್ಕೆ ಕೈಹಾಕಿದ್ದು, ಇಬ್ಬರು ಸಿನಿಮಾ ದೈತ್ಯರನ್ನು ಒಂದೇ ಪರದೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನು ಅದ್ಧೂರಿತನ, ಪರಂಪರೆ ಮತ್ತು ಅತ್ಯುತ್ತಮ ಕಥೆ ಹೇಳುವಿಕೆಯ ಸಂಭ್ರಮವಾಗಿ ನಿರ್ಮಾಣ ಮಾಡಲು ಸಂಸ್ಥೆ ಯೋಜಿಸಿದೆ.

ಈ ಕುರಿತು ರೆ ಡ್ ಜೈಂಟ್ ಮೂವೀಸ್‌ನ ವಕ್ತಾರರು ಪ್ರತಿಕ್ರಿಯಿಸಿ “ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಈ ಚಿತ್ರಕ್ಕಾಗಿ ಒಂದೆಡೆ ಸೇರಿಸಿರುವುದು ರೆಡ್ ಜೈಂಟ್ ಮೂವೀಸ್‌ನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ಕನಸು ನನಸಾದ ಕ್ಷಣ. 47 ವರ್ಷಗಳ ನಂತರ ಈ ಪುನರ್ಮಿಲನಕ್ಕೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ನಮಗೆ ಹೆಮ್ಮೆ, ಕೃತಜ್ಞತೆ ಮತ್ತು ಅಪಾರ ಉತ್ಸಾಹವಿದೆ. . ಭಾರತೀಯ ಚಿತ್ರರಂಗಕ್ಕೆ ಒಂದು ಐತಿಹಾಸಿಕ ಮತ್ತು ಭಾವುಕ ಕ್ಷಣವಾಗಿದ್ದು, ನಾವು ಈ ಪ್ರಯಾಣವನ್ನು ಜವಾಬ್ದಾರಿಯಿಂದ ಪ್ರಾರಂಭಿಸುತ್ತಿದ್ದೇವೆ. ಅವರ ಪರಂಪರೆಯನ್ನು ಅತ್ಯಂತ ಶಕ್ತಿಯುತವಾಗಿ ಬಿಂಬಿಸುವ ಸಿನಿಮಾ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ‌

‘ಜೈಲರ್’ ನಂತಹ ಬ್ಲಾಕ್‌ಬಸ್ಟರ್ ಯಶಸ್ಸನ್ನು ನೀಡಿದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬೃಹತ್ ಪ್ರಮಾಣದ ಚಿತ್ರಗಳಿಗೆ ತಮ್ಮ ಅದ್ಭುತ ಸಂಗೀತದ ಮೂಲಕ ಜೀವ ತುಂಬುವ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin