ಹೊಸ ಅವತಾರದಲ್ಲಿ
ಕೆಡಿಯಲ್ಲಿ ಕ್ರೇಜಿಸ್ಟಾರ್
ಧೃವ ಸರ್ಜಾ ಅಭಿನಯದ ಹೊಸ ಚಿತ್ರ ” ಕೆ.ಡಿ” ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸವರ್ಷದಂದು ಕ್ರೇಜಿಸ್ಟಾರ್ ಅವರ ರವಿಚಂದ್ರನ್ ಪೆÇೀಸ್ಟರ್ ಬಿಡುಗಡೆ ಮಾಡಿದ್ದು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶಕ ಪ್ರೇಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ರವಿಚಂದ್ರನ್ ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಬಾಲಿವಿಡ್ ನಟ ಸಂಜಯ್ ದತ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದರ ಸಾಲಿಗೆ ಇದೀಗ ರವಿಚಂದ್ರನ್ ಸೇರ್ಪಡೆಯಾಗಿರುವುದು ಚಿತ್ರತಂಡಕ್ಕೆ ಮತ್ತಷ್ಟು ತೂಕ ಹೆಚ್ಚಾಗಿದೆ.
ಕೆಡಿ ಚಿತ್ರ ಕನ್ನಡದ ಜೊತೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಯ ಮೇಲೆ ಬರಲಿದ್ದು ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.
1970ರ ನೈಜ ಘಟನೆಯ ಸ್ಪೂರ್ತಿ ಪಡೆದು ನಿರ್ದೇಶಕ ಪ್ರೇಮ್ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಕೆವಿಎನ್ ಪೆÇ್ರಡಕ್ಷನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಕ್ಯಾಮರಾ ಚಿತ್ರಕ್ಕಿದೆ.