ಕಾಂತಾರ ಚಾಪ್ಟರ್ -1 ಯಶಸ್ಸು: ವಿದೇಶದಲ್ಲಿ ಗಾಯಕ ಸಂಚಿತಚ ಶೆಟ್ಟಿ ಮೋಡಿಗೆ ಸಜ್ಜು
‘ಕಾಂತಾರ: ಎ ಲೆಜೆಂಡ್ ಚಾಪ್ಟರ್ 1’ ಜಾಗತಿಕವಾಗಿ ಅಭೂತಪೂರ್ವ ಯಶಸ್ಸು ಕಂಡ ಬೆನ್ನಲ್ಲೇ, ಯುನೈಟೆಡ್ ಕಿಂಗ್‍ಡಮ್ ನಲ್ಲಿ ಬಿಡುಗಡೆಯಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಬರೋಬ್ಬರಿ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ, ನಮ್ಮ ಮಣ್ಣಿನ ಕಥೆಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಹೇಗೆ ಸೆಳೆಯಬಲ್ಲವು ಎಂಬುದನ್ನು ಇದು ಸಾಬೀತುಪಡಿಸಿದೆ.

ಈ ಸಾಂಸ್ಕೃತಿಕ ಕೊಂಡಿಯನ್ನು ಬೆಸೆಯುವಲ್ಲಿ ಬ್ರಿಟನ್ ಮೂಲದ ‘ಲಾಫಿಂಗ್ ವಾಟರ್ ಎಂಟರ್ಟೈನ್‍ಮೆಂಟ್’ ಸಂಸ್ಥೆಯ ಪಾತ್ರ ಬಹಳ ದೊಡ್ಡದಿದೆ. ಭಾರತೀಯ ಕಲೆ, ಸಿನಿಮಾ ಮತ್ತು ಸಂಗೀತವನ್ನು ವಿಶ್ವದಾದ್ಯಂತ ಪಸರಿಸುವ ಗುರಿ ಹೊಂದಿರುವ ಈ ಸಂಸ್ಥೆಯು ಈಗ ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ.
ಸಂಜಿತ್ ಹೆಗ್ಡೆ ಲೈವ್ ಇನ್ ಯುಕೆ ಮತ್ತು ಐರ್ಲೆಂಡ್
ಸಿನಿಮಾದ ಯಶಸ್ಸಿನ ನಂತರ, ಈಗ ಕನ್ನಡದ ಖ್ಯಾತ ಗಾಯಕ ಸಂಜಿತ್ ಹೆಗ್ಡೆ ತಮ್ಮ ಸುಂದರ ಧ್ವನಿಯ ಮೂಲಕ ವಿದೇಶಿ ಕನ್ನಡಿಗರನ್ನು ಹಾಗೂ ಸಂಗೀತ ಪ್ರೇಮಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಗಾಯನದಿಂದ ಹೆಸರುವಾಸಿಯಾಗಿರುವ ಸಂಜಿತ್, ಈ ಪ್ರವಾಸದ ಮೂಲಕ ಭಾರತೀಯ ಸಮಕಾಲೀನ ಸಂಗೀತದ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ.

ಕಾರ್ಯಕ್ರಮದ ವೇಳಾಪಟ್ಟಿ:
- ಮಾರ್ಚ್ 19: ಡಬ್ಲಿನ್ (ಸೈಂಟಾಲಜಿ ಆಡಿಟೋರಿಯಂ)
- ಮಾರ್ಚ್ 20: ಮ್ಯಾಂಚೆಸ್ಟರ್ (ಮ್ಯಾಂಚೆಸ್ಟರ್ ಅಕಾಡೆಮಿ 1)
- ಮಾರ್ಚ್ 21: ಲಂಡನ್ (ಸ್ಥಳ ಶೀಘ್ರದಲ್ಲೇ ಪ್ರಕಟವಾಗಲಿದೆ)
- ಮಾರ್ಚ್ 22: ಲೀಸೆಸ್ಟರ್ ( o2 ಅಕಾಡೆಮಿ ಲೀಸೆಸ್ಟರ್)
ಹೊಂಬಾಳೆ ಫಿಲ್ಮ್ಸ್‍ನಂತಹ ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಲಾವಿಂಗ್ ವಾಟರ್ ಎಂಟರ್ಟೈನ್‍ಮೆಂಟ್‍ನಂತಹ ಸಾಂಸ್ಕೃತಿಕ ಸಂಘಟಕರು ಕೈಜೋಡಿಸಿರುವುದು ಕನ್ನಡದ ಸೃಜನಶೀಲತೆಯನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುತ್ತಿದೆ. ಇದು ಕೇವಲ ಮನೋರಂಜನೆಯಲ್ಲ, ಬದಲಾಗಿ ನಮ್ಮ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಸಂಭ್ರಮಿಸುವ ಒಂದು ಅದ್ಭುತ ಪ್ರಯತ್ನವಾಗಿದೆ.

