ನವಂಬರ್ 11 ರಂದು “ಕೊರಗಜ್ಜ” ಚಿತ್ರತಂಡದಿಂದ ಶ್ರೀದೈವದ ಕೋಲ ಸೇವೆ - CineNewsKannada.com

ನವಂಬರ್ 11 ರಂದು “ಕೊರಗಜ್ಜ” ಚಿತ್ರತಂಡದಿಂದ ಶ್ರೀದೈವದ ಕೋಲ ಸೇವೆ

ತುಳುನಾಡಿನ ನಂಬಿಕೆಯ ಪ್ರತೀಕವಾಗಿರುವ “ಕೊರಗಜ್ಜ” ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ನವಂಬರ್ 11ರಂದು ಮಂಗಳೂರಿನಲ್ಲಿ ಕೊರಗಜ್ಜ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿ ಮತ್ತು ಶ್ರೀದೇವದ ಕೋಲ ಸೇವೆ ನಡೆಯಲಿದೆ

ಸುಧೀರ್ ಅತ್ತಾವರ್ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮ “ಕೊರಗಜ್ಜ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

ದೆಹಲಿ,ಮುಂಬಾಯಿ, ಹೈದರಾಬಾದ್, ಕೊಚ್ಚಿ ಬೆಂಗಳೂರು, ಮಂಗಳೂರು ಹೀಗೆ ದೇಶದ ನಾನಾ ಭಾಗದ ಪ್ರತಿಷ್ಟಿತ ಮಾಧ್ಯಮ ಮಿತ್ರರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿ ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ನಡೆಸಲಿದೆ.

ಸುಧೀಂದ್ರ ವೆಂಕಟೇಶ್ ಚಿತ್ರದ ಅಧಿಕ್ರತ ಪಿ ಆರ್ ಒ

ಚಿತ್ರದ ಆರಂಭದಿಂದಲೂ ಸುಧೀಂದ್ರ ವೆಂಕಟೇಶ್ ಅವರೆ ಪಿ.ಆರ್.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಕುರಿತು ಎಲ್ಲಾ ಮಾಹಿತಿಗಳನ್ನು ಪತ್ರಿಕಾ, ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ಕಳುಹಿಸುತ್ತಾರೆ. ನಮ್ಮ ಚಿತ್ರಕ್ಕೆ ಬೇರೆ ಪಿ.ಆರ್.ಓ ಇರುವುದಿಲ್ಲ .

ಕಿಡಿಗೇಡಿಗಳು, ಪಿ ಆರ್ ಒ ಎಂದು ಹೇಳಿಕೊಂಡು ತಪ್ಪು ಮಾಹಿತಿಗಳನ್ನು ಮಾಧ್ಯಮದವರಿಗೆ ಹಂಚುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪಿ ಆರ್ ಒ ವೆಂಕಟೇಶ್ ಅಲ್ಲದೆ ಬೇರೆ ಯಾರ ಮಾಹಿತಿಗಳನ್ನು ಮಾಧ್ಯಮದವರು ಪರಿಗಣಿಸಬಾರದು ಎಂದು “ಕೊರಗಜ್ಜ” ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin