ಭರತ್- ಸಂಹಿತಾ ವಿನ್ಯಾ ನಟನೆಯ “ಮೆಜೆಸ್ಟಿಕ್-2” ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆ - CineNewsKannada.com

ಭರತ್- ಸಂಹಿತಾ ವಿನ್ಯಾ ನಟನೆಯ “ಮೆಜೆಸ್ಟಿಕ್-2” ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆ

ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ವ್ಯವಹಾರಗಳು, ದಂದೆಗಳು ನಡೆಯುತ್ತವೆ ಎಂಬುದನ್ನು ರಿಯಲ್ಲಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿರುವ ಮೆಜೆಸ್ಟಿಕ್- 2 ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ

ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಿಸಿರುವ ಚಿತ್ರದಲ್ಲಿ ನಟ ಭರತ್ ಹಾಗು ಸಂಹಿತಾ ವಿನ್ಯಾ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ಧಾರೆ. ಹಿರಿಯನಟಿ ಶೃತಿ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ನಟಿ ಮಾಲಾಶ್ರೀ ಅವರು ಕೂಡ ಚಿತ್ರದಲ್ಲಿದ್ದಾರೆ.

ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ,ಅಲ್ಲಿ ನಡೆಯುವ ವ್ಯವಹಾರಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶರು ಚಿತ್ರದಲ್ಲಿ ಹೇಳಿದ್ದಾರೆ. ಚಿತ್ರದ ಟ್ರೈಲರ್‍ನ್ನು ನಿರ್ಮಾಪಕರ ಪತ್ನಿ ನಿರ್ಮಲಮ್ಮ ಬಿಡುಗಡೆ ಮಾಡಿ ಹಾರೈಸಿದರು

ನಾಯಕ ಭರತ್‍ಕುಮಾರ್ ಮಾತನಾಡಿ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರಿಗೆ ಜೀವನ ಪೂರ್ತಿ ಅಭಾರಿ, ಇಷ್ಟು ದೊಡ್ಡ ಟೈಟಲ್ ಇರುವ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ತಂದೆಯ ಬೆಂಬಲ ಕೂಡ ದೊಡ್ಡದು. ಚಿತ್ರದ ಶೂಟಿಂಗ್ ತುಂಬಾ ಚೆನ್ನಾಗಿ ನಡೆಯಿತು, ಆನಂತರ ಸಾಕಷ್ಟು ತೊಂದ್ರೆ ಅನುಭವಿಸಬೇಕಾಯ್ತು. ನಮ್ಮನ್ನು ತುಳಿಯುವವರೇ ಜಾಸ್ತಿ. ಅವರನ್ನೆಲ್ಲ ಎದುರಿಸಿ ನಿಂತು ಗೆಲ್ಲಬೇಕು, ನಮ್ಮ ಸಿನಿಮಾದಿಂದ ಹೆಸರು ಮಾಡಬೇಕು, ಕೆಲಸದಿಂದ ಗುರುತಿಸಿಕೊಳ್ಳಬೇಕು ಎಂದರು

ನಾಯಕಿ ಸಂಹಿತಾ ವಿನ್ಯಾ ತುಂಬಾ ಹಾರ್ಡ್ ವರ್ಕರ್. ಶೃತಿ, ಮಾಲಾಶ್ರೀ ಅವರಂಥ ಹಿರಿಯ ಕಲಾವಿದೆಯರೊಂದಿಗೆ ನಟಿಸಿದ್ದು ನನ್ನ ಅದೃಷ್ಟ. ಮೆಜೆಸ್ಟಿಕ್ ಸುತ್ತಮುತ್ತಲಿನ ಜಗತ್ತು ಹೇಗಿರುತ್ತೆ ಅಂತ 10 ದಿನ ಸುತ್ತಾಡಿ ನೋಡಿದೆ, ಹಿಡನ್ ಕ್ಯಾಮೆರಾ ಇಟ್ಕೊಂಡು ಅಲ್ಲೆಲ್ಲ ನಡೆದಾಡಿದ್ದೇನೆ. ಬೆಳಗಿನ ಜಾವ, ರಾತ್ರಿ ವೇಳೆ ಓಡಾಡಿ ಅಲ್ಲಿ ಹೇಗೆಲ್ಲ, ಏನೆಲ್ಲ ನಡೆಯುತ್ತೆ ಎಂದು ಅರಿತಿದ್ದೇನೆ, ಎಲ್ಲಾ ರೀತಿಯ ಜನರನ್ನು ಅಲ್ಲಿ ಕಾಣಬಹುದು ಎಂದು ಹೇಳಿದರು,

ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ಸ್ಟ್ರಾಂಗ್ ಲೈನ್ ಈ ಚಿತ್ರದಲ್ಲಿದೆ, ಶೃತಿ, ಮಾಲಾಶ್ರೀ ಅಂಥವರ ಜತೆ ಆಕ್ಟ್ ಮಾಡಿದ್ದು ತುಂಬಾ ಖುಷಿಯಾಯ್ತು, ಸಾಕಷ್ಟು ಏಳು ಬೀಳುಗಳನ್ನು ಕಂಡಂಥ ಚಿತ್ರವಿದು, ಬಿಡುಗಡೆಗೆ ನಾನೂ ಸಹ ಕಾಯುತ್ತಿದ್ದೇನೆ ಎಂದು ಹೇಳಿದರು,

ನಿರ್ಮಾಪಕ ಆನಂದಪ್ಪ ಮಾತನಾಡಿ ಸಿನಿಮಾ ಅಂದ್ರೇನು ಅಂತ ಗೊತ್ತಿರಲಿಲ್ಲ,4 ಬಾರಿ ಎಂಎಲ್‍ಎ ಎಲೆಕ್ಷನ್‍ಗೆ ನಿಂತು ಸೋತೆ. 2 ಸಿನಿಮಾದಿಂದ ನೂರು ವರ್ಷಗಳಿಗಾಗುವಷ್ಟು ಅನುಭವ ಪಡೆದೆ. ಪೆÇ್ರಡ್ಯೂಸರ್ ಆಗಬೇಕು ಅನ್ನೋದು ನನ್ನ ಕನಸು. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ, ಹೀರೋ ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂದರು.

ವಿನು ಮನಸು ಸಂಗೀತ ನಿರ್ದೇಶನ ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ ಆಗಿ ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕೆಲಸ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin