“31 ಡೇಸ್ ಚಿತ್ರದ ಗೆಲುವು” ಚಿತ್ರತಂಡದ ಮುಖದಲ್ಲಿ ಮಂದಹಾಸ
“ಜಾಲಿಡೇಸ್” ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ “31 ಡೇಸ್ ಬಿಡುಗಡೆಯಾದ ಎಲ್ಲಾ ಕಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ
ನಟ ನಿರಂಜನ ಶೆಟ್ಟಿ ಮಾತನಾಡಿ ನನ್ನ ಅಭಿನಯದ 8ನೇ ಚಿತ್ರ. ನಮ್ಮ ನಿರೀಕ್ಷೆಗೂ ಮೀರಿ ಜನ ಚಿತ್ರ ಒಪ್ಪಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. 1884 ರಲ್ಲಿ ಅಮೋಲ್ ಪಾಲೇಕರ್ ಅಭಿನಯಿಸಿದ್ದ ” ವಸಂತ ಮಾಸ” ಎಂಬ ಸಿನಿಮಾದಲ್ಲಿ ಕೇವಲ ಎರಡೇ ಪಾತ್ರಗಳಿದ್ದವು. £ಚಿತ್ರಕ್ಕೆ ಆ ಚಿತ್ರವೂ ಸ್ಪೂರ್ತಿ ಎನ್ನಬಹುದು. ಪ್ರೇಕ್ಷಕರು ಹಾಗೂ ಚಿತ್ರ ಆರಂಭದ ದಿನದಿಂದಲೂ ಪತ್ರಕರ್ತರು ನೀಡುತ್ತಿರುವ ಪೆÇ್ರೀತ್ಸಾಹವೇ ಚಿತ್ರದ ಗೆಲುವಿಗೆ ಕಾರಣ ಎಂದರು

ಬಿಡುಗಡೆಗೆ ಪೂರ್ವದಲ್ಲೇ ಬಹುತೇಕ ಸೇಫ್ ಆಗಿದ್ದೀನಿ. ಅದಕ್ಕೆ ರೂಪಿಸಿದ ಹಲವು ಯೋಜನೆಗಳೆ ಕಾರಣ. ಇನ್ನೂ ಈ ಚಿತ್ರದ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಸಹಕಾರದಿಂದ ಚಿತ್ರಮಂದಿರಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ ಸೀಮಿತ ಬಜೆಟ್ ನ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಕಥೆ ಸಿದ್ದವಾಗಿದೆ. ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ಹೇಳಿದರು
ಚಿತ್ರದ ನಿರ್ದೇಶಕ ರಾಜ ರವಿಶಂಕರ್, ನಾಯಕಿ ಪ್ರಜ್ವಲಿ ಸುವರ್ಣ, ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ, ನಟ ಚಿಲ್ಲರ್ ಮಂಜು ಹಾಗೂ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

