71st National Film Awards announced: Kannada film Kandeelu wins Best Film award

71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಕಂದೀಲುಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ - CineNewsKannada.com

71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಕಂದೀಲುಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

2023ನೇ ಸಾಲಿನ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದ್ದು ಕನ್ನಡದ ಕಂದೀಲು ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾಗಿದೆ. ನಾನ್ ಪ್ಯೂಚರ್ ವಿಭಾಗದಲ್ಲಿ ಅತ್ಯುತ್ತಮ ಕಥೆ ವಿಭಾಗದಲ್ಲಿ ಚಿದಾನಂದ್ ನಾಯ್ಕ ಅವರ ” ಸನ್ ಫ್ಲವರ್ ವರ್ ದಿ ಫಸ್ಟ್ ಒನ್ಸ್ ಟು ನೋ” ಗೆ ಪ್ರಶಸ್ತಿ ದೊರೆತಿದೆ

2023ರ ಜನವರಿ 1 ರಿಂದ 2023 ರ ಡಿಸೆಂಬರ್ 31 ರೊಳಗೆ ಸೆನ್ಸಾರ್ ನಿಂದ ಪ್ರಾಮಾಣ ಪತ್ರ ಪಡೆದ ಚಿತ್ರಗಳನ್ನು ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಮತ್ತು ನಾನ್ ಪ್ಯೂಚರ್ ವಿಭಾಗದ ಅಧ್ಯಕ್ಷ ಕನ್ನಡದ ನಿರ್ದೇಶಕ ಪಿ ಶೇಷಾದ್ರಿ ಅವರ ಸಮಿತಿ ಪ್ರಶಸ್ತಿ ವಿಜೇತರನ್ಮು ಆಯ್ಕೆ ಮಾಡಿದೆ.

ಹಿಂದಿ ಚಿತ್ರ “ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ” ಚಿತ್ರದ ಅಭಿನಯಕ್ಕಾಗಿ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ನಟ ಪ್ರಶಸ್ತಿ ಇಬ್ಬರ ಪಾಲಾಗಿದೆ. ಜವಾನ್ ಚಿತ್ರಕ್ಕಾಗಿ ಶಾರೂಕ್ ಖಾನ್ ಹಾಗೂ 12th Fail ಚಿತ್ರಕ್ಕಾಗಿ ವಿಕ್ರಾಂತ್ ಮೆಸ್ಸಿಗೆ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಸುದೀಪ್ಲೊ ಸೇನ್ ನಿರ್ದೇಶನದ ಹಿಂದಿಯ The Kerala Story ಆಯ್ಕೆಯಾಗಿದೆ..

ಯಾರಿಗೆಲ್ಲಾ ಪ್ರಶಸ್ತಿ

* ಅತ್ಯುತ್ತಮ ನಟ : ಶಾರುಖ್ ಖಾನ್ ( ಜವಾನ್ ) ಹಾಗು ವಿಕ್ರಾಂತ್ ಮೆಸ್ಸೆ ( 12th ಫೇಲ್ )

  • ಅತ್ಯುತ್ತಮ ನಟಿ ; ರಾಣಿ ಮುಖರ್ಜಿ -ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ”
  • ಅತ್ಯುತ್ತಮ ನಿರ್ದೇಶಕ : ಸುದೀಪ್ತೋ ಸೇನ್ ( ದಿ ಕೇರಳ ಸ್ಟೋರಿ)
  • ಅತ್ಯುತ್ತಮ ಪೋಷಕ ಕಲಾವಿದೆಯರು : ಮಲೆಯಾಳಂ ನ ಚಿತ್ರ ಉಲೋಝೂಕು ಚಿತ್ರಕ್ಕಾಗಿ ಊರ್ವಶಿ
    ಹಾಗು ವರ್ಷ್ ಚಿತ್ರಕ್ಕಾಗಿ ಜಾನಕಿ ಬೋಡಿವಾಲ

  • ಅತ್ಯುತ್ತಮ ಪೋಷಕ ಕಲಾವಿದರು : ಮಲೆಯಾಳಂನ ಪೂಕಲಾಂ ಚಿತ್ರಕ್ಕಾಗಿ ವಿಜಯ ರಾಘವನ್ ಹಾಗು ತಮಿಳು ಚಿತ್ರ ಪಾರ್ಕಿಂಗ್ ಗಾಗಿ ಎಂ.ಎಸ್ ಭಾಸ್ಕರ್

  • ಅತ್ಯುತ್ತಮ ಚೊಚ್ಚಲ ಚಿತ್ರ : ಆತ್ಮ ಪಾಂಪ್ಲೆಟ್

  • ಅತ್ಯುತ್ತಮ ತೆಲುಗು ಚಿತ್ರ: ಭಗವಂತ ಕೇಸರಿ
  • ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್ ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ ಬೆಸ್ಟ್ಮಲಯಾಳಂ ಚಲನಚಿತ್ರ: ಉಲ್ಲೋಝೋಕು ಬೆಸ್ಟ್
  • ಕನ್ನಡ ಚಿತ್ರ: ಕಂದೀಲು
  • ಅತ್ಯುತ್ತಮ ಹಿಂದಿ ಚಿತ್ರ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ
  • ಗುಜರಾತಿ ಚಲನಚಿತ್ರ: ವಾಶ್
  • ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
  • ಅತ್ಯುತ್ತಮ ಅಸ್ಸಾಮಿ ಚಿತ್ರ: ರಂಗತಪು 1982ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
  • ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಓರ್ ರಾಣಿ ಕಿ ಪ್ರೇಮ್ ಕಹಾನಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin