Abhidas- Sharanya starrer "Naguvini Hoogala mele " film will hit the screens on February 9

ಅಭಿದಾಸ್- ಶರಣ್ಯ ಜೋಡಿಯ “ನಗುವಿನ ಹೂಗಳ ಮೇಲೆ” ಫೆಬ್ರವರಿ 9ಕ್ಕೆ ತೆರೆಗೆ - CineNewsKannada.com

ಅಭಿದಾಸ್- ಶರಣ್ಯ ಜೋಡಿಯ “ನಗುವಿನ ಹೂಗಳ ಮೇಲೆ” ಫೆಬ್ರವರಿ 9ಕ್ಕೆ ತೆರೆಗೆ

ಶ್ರೀಸತ್ಯಸಾಯಿ ಆಟ್ರ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ನಿರ್ಮಿಸಿರುವ, “ಕೆಂಪಿರ್ವೆ” ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನದ ಹಾಗೂ ಅಭಿ ದಾಸ್ – ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ “ನಗುವಿನ ಹೂಗಳ ಮೇಲೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ.

ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಮನೆಮಾತಾಗಿರುವ ಈ “ಕನ್ನಡ ಮಣ್ಣಿನ ನಿಜ ಪ್ರೇಮ ಕಥೆ” ಫೆಬ್ರವರಿ 9 ರಂದು ತೆರೆಗೆ ಬರುತ್ತಿದೆ.

ನಿರ್ದೇಶಕ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ, ಚದಂಬರ ನರೇಂದ್ರ, ಕಬ್ಬಡಿ ನರೇಂದ್ರಬಾಬು ಹಾಗೂ ಕಿರಣ್ ನಾಗರಾಜ್ ಅವರು ರಚಿಸಿರುವ ಹಾಡುಗಳಿಗೆ ಲವ್ ಪ್ರಾಣ್ ಮೆಹ್ತಾ ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಲರ್ವಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅಭಿದಾಸ್, ಶರಣ್ಯ ಶೆಟ್ಟಿ, ಗಿರೀಶ್ ಬೆಟ್ಟಪ್ಪ, ಹರ್ಷ ಗೋ ಭಟ್, ಬಾಲ ರಾಜವಾಡಿ, ಬೆನಕ ನಂಜಪ್ಪ, ಜ್ಯೋತಿ ಮರೂರ್, ಆಶಾ ಸುಜಯ್ ಮುಂತಾದವರು “ನಗುವಿನ ಹೂಗಳ ಮೇಲೆ” ಚಿತ್ರದಲ್ಲಿ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin