‘ಹೌದಾ ಹುಲಿಯಾ’ ಎಂದು ಹೆಜ್ಜೆ ಹಾಕಿದ ನಟ ಅಂಜನ್ ನಾಗೇಂದ್ರ

‘ಕಂಬ್ಲಿಹುಳ’ ಸಿನಿಮಾ ಮೂಲಕ ಮೆಚ್ಚುಗೆ ಗಳಿಸಿದ್ದ ಅಂಜನ್ ನಾಗೇಂದ್ರ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ “ಎಲ್ಲೋ ಜೋಗಪ್ಪ ನಿನ್ನರಮನೆ”. ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

ಹೌದ ಹುಲಿಯಾ” ಎಂಬ ಮಾಸ್ ಹಾಡು ಬಿಡುಗಡೆ ಆಗಿದ್ದು,
ರವೀಂದ್ರ ಮುದ್ದಿ ಸಾಹಿತ್ಯ ಒದಗಿಸಿದ್ದಾರೆ.ಶಿವೋo ಸಂಗೀತ ನೀಡಿದ್ದು ಹ , ರವೀಂದ್ರ ಸೊರಗ್ವಿ, ವಿಶಾಕ್ ನಾಗಲಾಪುರ, ಶಿವೋಮ್ ಧ್ವನಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬಂದಿರುವ ಹಾಡಿಗೆ ನಾಯಕ ಅಂಜನ್ ನಾಗೇಂದ್ರ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ.
ಕಿರುತೆರೆಯಲ್ಲಿ ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹಯವದನ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಎಲ್ಲೋ ಜೋಗಪ್ಪ ನಿನ್ನರಮನೆ’ ಅಂತಿದ್ದಾರೆ.

ಅಂಜನ್ ನಾಗೇಂದ್ರಗೆ ಕಂಬ್ಳಿ ಹುಳ ಬಳಿಕ ಮತ್ತೊಂದು ಜರ್ನಿ ಕಮ್ ಎಮೋಷನಲ್ ಸಿನಿಮಾ ಸಿಕ್ಕಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಸಿನಿಮಾಗಾಗಿ ಅಂಜನ್ ನಾಗೇಂದ್ರ ಇಡೀ ಇಂಡಿಯಾ ಸುತ್ತಿದ್ದಾರೆ. ಇದೊಂದು ಜರ್ನಿ, ಪ್ರೇಮ ಕಥೆಯ ಜೊತೆಗೆ ಅಪ್ಪ-ಮಗನ ಬಾಂಧವ್ಯವನ್ನು ಹೇಳುತ್ತದೆ. ಬೆಂಗಳೂರಿನಿಂದ ಶುರುವಾದ ಈ ಜರ್ನಿ ಹಿಮಾಲಯದವರೆಗೂ ಸಾಗುತ್ತೆ. ಹಾಗಾಗಿ ಇದೊಂದು ಯೂತ್‌ಫುಲ್ ಸಿನಿಮಾ ಎನ್ನಬಹುದು.
ಅಂಜನ್ ನಾಗೇಂದ್ರಗೆ ನಾಯಕಿಯಾಗಿ ಯುವ ನಟಿ ವೆನ್ಯ ರೈ ನಟಿಸಿದ್ದಾರೆ. ವೆನ್ಯ ರೈ ಈಗಾಗಲೇ ಭಾವಪೂರ್ಣ ಮತ್ತು ಆರಾಟ ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಸಂಜನಾ ದಾಸ್ ಅಮೋಘ ಅಭಿನಯ ನೀಡಿದ್ದಾರೆ. ಇವರು ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ನಿರ್ಮಾಣ ಮಾಡುತ್ತಿದ್ದಾರೆ.

ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು,ಬಿರಾದರ್ ಈ ಸಿನಿಮಾದಲ್ಲಿದ್ದಾರೆ.