Actor Dhruva Sarja releases the song "Husharu Le.. Husharu" from the movie "Firefly

“ಫೈರ್‌ ಫ್ಲೈ” ಚಿತ್ರದ ಹುಷಾರು ಲೇ.. ಹುಷಾರು” ಹಾಡು ಬಿಡುಗಡೆ ಮಾಡಿದ ನಟ ಧೃವ ಸರ್ಜಾ - CineNewsKannada.com

“ಫೈರ್‌ ಫ್ಲೈ” ಚಿತ್ರದ ಹುಷಾರು ಲೇ.. ಹುಷಾರು” ಹಾಡು ಬಿಡುಗಡೆ ಮಾಡಿದ ನಟ ಧೃವ ಸರ್ಜಾ

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದೆ. ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು,ಪ್ರಚಾರ ಬಿರುಸಿನಿಂದ ಸಾಗಿದೆ. ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಅವರು ಚಿತ್ರದ “ಹುಷಾರು ಲೇ ಹುಷಾರು” ಎಂಬ ಹಾಡನ್ನು ರಿಲೀಸ್‌ ಮಾಡಿ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.

ನಾಯಕ ವಿಕ್ಕಿಯನ್ನು ಗುಣಗಾನ ಮಾಡುವ ಹಾಡು ಇದಾಗಿದೆ. ಈ ಗೀತೆಯಲ್ಲಿ ಅಣ್ಣಾವ್ರ ಸಿನಿಮಾಗಳ ಡೈಲಾಗ್‌ ಗಳನ್ನು ಬಳಸಿರುವುದು ಮತ್ತೊಂದು ವಿಶೇಷ. ಧನಂಜಯ್‌ ರಂಜನ್‌ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ದೀಪಕ್ ಬ್ಲೂ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಹಾಡಿಗೆ ಧ್ವನಿಯಾಗಿದ್ದು, ಚರಣ್‌ ರಾಜ್‌ ಮಸ್ತ್‌ ಟ್ಯೂನ್‌ ಹಾಕಿದ್ದಾರೆ.

ತಾರಾಬಳಗದ ಮೂಲಕ ಗಮನ ಸೆಳೆದಿರುವ ಫೈರ್‌ ಫ್ಲೈ ಸಿನಿಮಾವನ್ನು ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಒಂದೊಳ್ಳೆ ಕಾಡುವ ಕಥೆಯೊಂದಿಗೆ ಫೈರ್‌ ಫ್ಲೈ ಸಿನಿಮಾ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ.

ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನ, ವರದರಾಜ್ ಕಾಮತ್ ಕಲೆ, ಅರ್ಜುನ್ ರಾಜ್ ಸಾಹಸ, ರಾಹುಲ್ ಮಾಸ್ಟರ್ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin