‘ಚಿತು’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ನಟ ಧೃವ ಸರ್ಜಾ

ಡಾ. ಕಿರಣ್ ತೋಟಂಬೈಲ್ ಸಂಗೀತ, ಅರಸು ಅಂತಾರೆ ಸಾಹಿತ್ಯವಿರೋ ಈ ಹಾಡನ್ನ ಅಂಟೋನಿ ದಾಸನ್ ಹಾಡಿದ್ದಾರೆ. ಕೇಳೋದಕ್ಕೆ ಕ್ಯಾಚಿಯಾಗಿರೋ ಈ ಹಾಡು ನೋಡದಕ್ಕೂ ಅಷ್ಟೇ ಕಲರ್ ಫುಲ್ಲಾಗಿ ಮೂಡಿ ಬಂದಿದೆ.. ಈ ಹಾಡು ಆಲಾಪನ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

ಚಿ.ತು ಯುವಕರ ಸಂಘ ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸಿದ್ದ ಅಧ್ಯಕ್ಷ ಚಿತ್ರದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಟ್ಟಿದ ಸಂಘದ ಹೆಸರು ಚಿ.ತು ಯುವಕರ ಸಂಘ. ಅದೇ ಟೈಟಲ್ ನ ಇಟ್ಕೊಂಡು, ಅದೇ ಥೀಮ್ ಅದೇ ಫೀಲಲ್ಲಿ ಮಾಡಿರುವ ಸಿನಿಮಾ ಚಿತು.

ಚಿತು ಸಿನಿಮಾವನ್ನ ಶಿವು ರಾಮನಗರ ನಿರ್ದೇಶಿಸಿದ್ದು, ಕಮರೊಟ್ಟುಚೆಕ್ ಪೋಸ್ಟ್ ಖ್ಯಾತಿಯ ಚೇತನ್ ರಾಜ್ ನಿರ್ಮಿಸಿದ್ದಾರೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಚಿತ್ರಕ್ಕಿದೆ.

ಸದ್ಯ ಮೊದಲ ಹಾಡು ಬಿಡುಗಡೆ ಮಾಡಿ ಪ್ರಚಾರ ಆರಂಭಿಸಿರೋ ಚಿತು ಚಿತ್ರತಂಡ.. ಇದೇ ವರ್ಷ ಥಿಯೇಟರಿಗೆ ಬರೋ ಯೋಜನೆಯಲ್ಲಿದೆ.

Related Posts

‘ನೆನಪಾದಳು ಶಾಕುಂತಲೆ’ ಚಿತ್ರೀಕರಣ ಮುಕ್ತಾಯ

ವಿಸ್ಮಯ ಕೆ. ನಿರ್ಮಾಣದ “’ನೆನಪಾದಳು ಶಾಕುಂತಲೆ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದ ಮುಂದೆ ಕುಂಬಳಕಾಯಿ ಒಡೆದಿದೆ. ವಿನಯ್ ಚಂದ್ರಹಾಸ- ವಿರಾಜ್ ಕೋಲಾಟ್ಲು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ ಹಾಗೂ ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ. ಪುರಾಣದ…

ತೆರೆಗೆ ಬರಲು ಸಜ್ಜಾದ ’18 ಎಕರೆ ಸಿನಿಮಾ ಲಕ್ಕಪ್ಪ’

ನಿರ್ದೇಶಕ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಬಿಡುಗಡೆಗೆ ಸಿದ್ದವಾಗಿರುವ ‘ಮಾರ್ಲಾಮಿ’, ಚಿತ್ರೀಕರಣ ಹಂತದಲ್ಲಿರುವ ‘ರುದ್ರ ಕಾಲಭೈರವ’, ‘ಲೋ ಬಜೆಟ್ ನೋ ಬಜೆಟ್’, ‘ಪವನಸುತ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ತಮಿಳಲ್ಲಿ ‘ಮರ್ಮಮುಟುಚಿ’, ‘ಕಾದಲ್ ವಾರ್’, ‘ಗಾಯತ್ರಿ ನಿಲಮ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581