Actor Sreemuruli released the "Trailer" of "Raju James Bond

“ರಾಜು ಜೇಮ್ಸ್ ಬಾಂಡ್” ಚಿತ್ರದ “ಟ್ರೇಲರ್” : ನಟ ಶ್ರೀಮುರುಳಿ ಬಿಡುಗಡೆ - CineNewsKannada.com

“ರಾಜು ಜೇಮ್ಸ್ ಬಾಂಡ್” ಚಿತ್ರದ “ಟ್ರೇಲರ್” : ನಟ ಶ್ರೀಮುರುಳಿ ಬಿಡುಗಡೆ

ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ

ರೋರಿಂಗ್ ಸ್ಟಾರ್ ಶ್ರೀಮುರಳಿ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನಲ್ಲೇ ಮೋಡಿ ಮಾಡಿರುವ ಈ ಹಾಸ್ಯಪ್ರಧಾನ ಚಿತ್ರ ಫೆಬ್ರವರಿ 14ರಂದು ತೆರೆಗೆ ಬರಲಿದೆ.

ನಟ ಶ್ರೀಮುರುಳಿ ಮಾತನಾಡಿ ಗುರುನಂದನ್ ಕುಟುಂಬದ ಆತ್ಮೀಯರು. ನಾಯಕರಾಗಿ ನಟಿಸಿರುವ ಚಿತ್ರದ ಟ್ರೇಲರ್ ಹಾಗೂ ಹಾಡು ಚೆನ್ನಾಗಿ ಮೂಡಿಬಂದಿದೆ. ನಾಯಕ ಹಾಗೂ ನಾಯಕಿಯ ಅಭಿನಯ ಹಾಗೂ ನಿರ್ದೇಶನ ಚೆನ್ನಾಗಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವುದು ತೆರೆಯ ಮೇಲೆ ಗೊತ್ತಾಗುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಿರ್ದೆಶಕ ದೀಪಕ್ ಮಧುವನಹಳ್ಳಿ ಮಾತನಾಡಿ ಹದಿನೇಳು ವರ್ಷಗಳ ಹಿಂದೆ ಶ್ರೀಮುರಳಿ ಅವರ “ಮಿಂಚಿನ ಓಟ” ಚಿತ್ರದಲ್ಲಿ ಕೆಲಸ ಮಾಡಿದ್ದೆ. ಈಗ ಹದಿನೇಳು ವರ್ಷಗಳ ನಂತರ ಮತ್ತೆ ನಿರ್ದೇಶನದ ಸಿನಿಮಾದ ಟ್ರೇಲರ್ ಅವರಿಂದ ಅನಾವರಣವಾಗಿದ್ದು ಖುಷಿಯಾಗಿದೆ. “ರಾಜು ಜೇಮ್ಸ್ ಬಾಂಡ್” ಚಿತ್ರ ಚೆನ್ನಾಗಿ ಬಂದಿದೆಯಾದರೆ ಅದು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರದಿಂದ ಮಾತ್ರ ಎಂದರು.

ನಾಯ ಗುರು ನಂದನ್ ಮಾತನಾಡಿ ಅಣ್ಣವ್ರು ಹಾಗೂ ಅಪ್ಪು ಅವರ ಅಭಿಮಾನಿ. ನನಗೆ ಆದಶ ಶ್ರೀಮುರಳಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ. ಇಲ್ಲಿಯವರೆಗೆ ನೀವು ನೋಡಿರದ ಗುರುನಂದನ್ ನನ್ನು ಚಿತ್ರದಲ್ಲಿ ನೋಡಬಹುದು. ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ತಿಳಿಸಿರು.

ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ಮಾತನಾಡಿ ಆರಂಭದಿಂದಲೂ ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಪರಿಶುದ್ಧ ಹಾಸ್ಯ ಚಿತ್ರ ಬಂದು ಬಹಳ ದಿನಗಳಾಗಿದೆ. ಒಂದೊಳ್ಳೆ ಉತ್ತಮ ಕಾಮಿಡಿ ಜನರ್‍ನ ಈ ಚಿತ್ರ ಇದೇ ಫೆಬ್ರವರಿ 14 ರಂದು ತೆರೆಗೆ ಬರಲಿದೆ. ಸತ್ಯ ಪಿಕ್ಚರ್ಸ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾಯಕಿ ಮೃಧುಲ ಮಾತನಾಡಿ ಇದು ನನ್ನ ಮೊದಲ ಚಿತ್ರ. ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ಚಿತ್ರದಲ್ಲಿ ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್,ಸಂಹಿತಾ ವಿನ್ಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin