ನಟಿ ಶರ್ಮಿಳಾ ಮಾಂಡ್ರೆ – ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥ
ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಆಪ್ತ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಸರಳ ಹಾಗೂ ಅತ್ಯಂತ ಸುಂದರ ಸಮಾರಂಭದಲ್ಲಿ ಉಭಯ ಕುಶಲೋಪರಿಗಳೊಂದಿಗೆ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಸಿನಿಮಾ ಹಾಗೂ ಸಾಂಪ್ರದಾಯಿಕ ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿರುವ ಜೋಡಿಯ ನಿಶ್ಚಿತಾರ್ಥದ ವೇದಿಕೆ ಬಿಳಿ ಹೂವುಗಳ ಅಲಂಕಾರ ಹಾಗೂ ಅತ್ಯಾಧುನಿಕ ಶೈಲಿಯ ವಿನ್ಯಾಸದಿಂದ ಕಂಗೊಳಿಸುತ್ತಿತ್ತು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಈ ಇಬ್ಬರು ಪ್ರಭಾವಿ ವ್ಯಕ್ತಿಗಳು ಬಾಳ ಬಂಧನಕ್ಕೆ ಬಲಗಾಲಿಡಲು ಅಣಿಯಾಗುತ್ತಿದ್ದಾರೆ.
ಸ್ಯಾಂಡಲ್ವುಡ್ ಬ್ಯೂಟಿ ಶರ್ಮಿಳಾ ಮಾಂಡ್ರೆ
ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಶರ್ಮಿಳಾ ಮಾಂಡ್ರೆ ಅವರು 2007ರಲ್ಲಿ ಬಿಡುಗಡೆಯಾದ ಸಜನಿ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆನಂತರಕೃಷ್ಣ’, ನವಗ್ರಹ',ಸ್ವಯಂವರ’, ಆಕೆ',ಗಾಳಿಪಟ 2′, ಪೌಡರ್' ಹಾಗೂ ಇತ್ತೀಚಿನ ಡೆವಿಲ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಟನೆಯ ಜೊತೆಗೆ `ಶರ್ಮಿಳಾ ಮಾಂಡ್ರೆ ಪೆÇ್ರಡಕ್ಷನ್ಸ್’ ಸಂಸ್ಥೆಯ ಮೂಲಕ ಯಶಸ್ವಿ ಚಿತ್ರ ನಿರ್ಮಿಸುತ್ತಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಸದಾ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದಾರೆ.

ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ
ದಕ್ಷಿಣ ಭಾರತದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ “ಪ್ಯಾಶನ್ ಸ್ಟುಡಿಯೋಸ್” ನ ಸಂಸ್ಥಾಪಕರು ಹಾಗೂ ನಿರ್ಮಾಪಕರಾದ ಸುಧನ್ ಸುಂದರಂ ಚಿತ್ರರಂಗಕ್ಕೆ ಹಲವು ಗುಣಮಟ್ಟದ ಸಿನಿಮಾ ನೀಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿಬಂದ ಕಪ್ಪಲ್',ನಿಬುಣನ್’, ಸೀತಕಾತಿ',ಅನಬೆಲ್ ಸೇತುಪತಿ’ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಪಾರ್ಕಿಂಗ್' ಮತ್ತು ವಿಜಯ್ ಸೇತುಪತಿ ಅಭಿನಯದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಮಹಾರಾಜ’ ಸೇರಿದಂತೆ ಹಲವು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳನ್ನು ಇವರು ನಿರ್ಮಿಸಿದ್ದಾರೆ.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷವಾದ ಅಧ್ಯಾಯ. ನಮ್ಮ ಮೇಲೆ ಪ್ರೀತಿ ಮತ್ತು ಆಶೀರ್ವಾದ ಮಳೆಗರೆದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ಈ ಹೊಸ ಜೀವನದ ಪಯಣವನ್ನು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ದಾರೆ
ನಿರ್ಮಾಪಕ ಸುಧನ್ ಸುಂದರಂ ಪ್ರತಿಕ್ರಿಯಿಸಿ “ನಮ್ಮ ಬೆಂಬಲಕ್ಕೆ ನಿಂತಿರುವ ನಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳ ಪ್ರೀತಿ ಮತ್ತು ಸಹಕಾರಕ್ಕೆ ನಾವು ಎಂದಿಗೂ ಚಿರಋಣಿ.” ಎಂದಿದ್ಧಾರೆ


