Audio rights of the film "Landlord" sold for a record amount: curiosity increases

” ಲ್ಯಾಂಡ್ ಲಾರ್ಡ್”ಚಿತ್ರದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ : ಕುತೂಹಲ ಹೆಚ್ಚಳ - CineNewsKannada.com

” ಲ್ಯಾಂಡ್ ಲಾರ್ಡ್”ಚಿತ್ರದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ : ಕುತೂಹಲ ಹೆಚ್ಚಳ

ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅಭಿನಯದ “ಲ್ಯಾಂಡ್ ಲಾರ್ಡ್ ” ಚಿತ್ರದ ಬಹುತೀಕ ಚಿತ್ರೀಕರಣ ಕೆಲಸ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೀತಿದೆ

ಸಾರಥಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ ಸತ್ಯಪ್ರಕಾಶ್ ನಿರ್ಮಾಣದ ಜಡೇಶ ಕೆ ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಸೆಟ್ಟೇರಿದಾಗ್ಲೇ ಭಾರಿ ಸದ್ದು ಸುದ್ದಿ ಮಾಡುತ್ತಿದೆ.

ಆನಂದ್ ಆಡಿಯೋ ಕಂಪನಿ ಲ್ಯಾಂಡ್ ಲಾರ್ಡ್ ಚಿತ್ರದ ಆಡಿಯೋ ಹಕ್ಕುಗಳನ್ನ ದಾಖಲೆಯ ಬೆಲೆಗೆ ಖರೀದಿಸಿದೆ. ಆ ವಿಚಾರವನ್ನ ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶೇಷವಾಗಿ ಹಂಚಿಕೊಂಡಿದೆ.. ಆನಂದ್ ಆಡಿಯೋ ಪಾಲಿಗಿದು ಲಕ್ಕಿ ಮತ್ತು ಹಿಟ್ ಕಾಂಬಿನೇಷಶನ್ .

ವಿಜಯ್ ಕುಮಾರ್ ಅವರ ಸಾಲು ಸಾಲು ಸಿನಿಮಾಗಳು ಆನಂದ್ ಆಡಿಯೋ ಕಂಪನಿಗೆ ಒಳ್ಳೆಯ ವ್ಯಾಪಾರವನ್ನ ಮಾಡಿಕೊಟ್ಟಿವೆ. ಅದೇ ರೀತಿ ಅಜನೀಶ್ ಲೋಕನಾಥ್ ಹಾಗೂ ಜಡೇಶ ಕೆ. ಹಂಪಿ ಅವ್ರ ಕಾಂಬಿನೇಶನ್ ಸಿನಿಮಾಗಳು ಆನಂದ್ ಆಡಿಯೋ ಆಯ್ಕೆಯ ಸಕ್ಸಸ್ ಫುಲ್ ಸಿನಿಮಾಗಳಾಗಿವೆ.. ಇನ್ನೂ ಈ ಮೂವರು ಕಾಂಬಿನೇಷಶ್ ನ ಸಿನಿಮಾ ಅಂದ್ರೆ ಸುಮ್ನೆನಾ.. ಬಿಡೋ ಮಾತೇ ಇಲ್ಲ ಅಂತ, ಆನಂದ್ ಆಡಿಯೋ ಕಂಪನಿ ಲ್ಯಾಂಡ್ ಲಾರ್ಡ್ ಆಡಿಯೋ ಹಕ್ಕನ್ನ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ.

ಆಲ್ಬಂ ತುಂಬಾ ವಿಶೇಷತೆಗಳಿಂದ ಕೂಡಿದ್ದು, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿರಲಿದೆಯಂತೆ. ಲ್ಯಾಂಡಲ್ ಲಾರ್ಡ್ ಚಿತ್ರದಲ್ಲಿ ವಿಜಯ್ ಹಿರಿಯ ಮಗಳು ರಿತನ್ಯ ವಿಜಯ್ ಅಭಿನಯಿಸ್ತಿರೋದು ವಿಶೇಷ. ರಚಿತಾರಾಮ್ ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಿವೀಲ್ ಮಾಡದ ಸಿಕ್ಕಾಪಟ್ಟೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆಯಂತೆ. ಅಂದಹಾಗೆ ಲ್ಯಾಂಡ್ ಲಾರ್ಡ್ ಸಿನಿಮಾ ಎಲ್ಲಾ ಅಂದುಕೊಂಡಂತೆಯೇ ಆದರೆ ದಸರಾ ಅಥವಾ ದೀಪಾವಳಿಗೆ ಪ್ರೇಕ್ಷಕರೆದುರಿಗೆ ಬರುವ ಸಾದ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin