"Bhavatheerayana" completes 25 successful days: A sense of joy in the film crew

ಯಶಸ್ವಿ 25 ದಿನ ಪೂರೈಸಿದ “ಭಾವತೀರಯಾನ” : ಚಿತ್ರತಂಡದಲ್ಲಿ ಹರ್ಷದ ಹೊನಲು - CineNewsKannada.com

ಯಶಸ್ವಿ 25 ದಿನ ಪೂರೈಸಿದ “ಭಾವತೀರಯಾನ” : ಚಿತ್ರತಂಡದಲ್ಲಿ ಹರ್ಷದ ಹೊನಲು

ಭಾವನೆಗಳ ಬೆಸದ ಸುಂದರ ಪ್ರೇಮಕಥೆಯ ” ಭಾವ ತೀರ ಯಾನ” ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 25 ದಿನ ಪೂರ್ಣಗೊಂಡಿದೆ. ಹೊಸಬರ ಹೊಸ ಕಂಟೆಂಟು ಆಧಸಿದ ಚಿತ್ರಗಳು 25 ದಿನಗಳ ಪ್ರದರ್ಶನ ಕಾಣುತ್ತಿದ್ದು ಸದ್ಯದ ಮಟ್ಟಿಗೆ ದಾಖಲೆಯೇ ಸರಿ. 6ರಿಂದ 60 ವರ್ಷ ವಯೋಮಾನದ ಎಲ್ಲ ಮಂದಿಗೆ ಆಪ್ತ ಎನಿಸುವ ಚಿತ್ರ ಇದು. 25 ದಿನ ಪೂರ್ಣಗೊಳಿಸಿದ್ದು 50ನೇ ದಿನದತ್ತ ಕಾಲಿಟ್ಟಿದೆ.

ಮಯೂರ್ ಅಂಬೆಕಲ್ಲು ಮತ್ತು ತೇಢಜಸ್ ಕಿರಣ್ ಆಕ್ಷನ್ ಕಟ್ ಹೇಳಿರುವ ” ಭಾವತೀರಯಾನ” ಚಿತ್ರ ನಿರ್ದೇಶಕ ಜೋಡಿಯ ನಿರೀಕ್ಷೆಯನ್ನೂ ಮೀರಿ ಮುನ್ನೆಡೆದಿದೆ. ಇದು ಸಹಜವಾಗಿ ನಿರ್ದೇಶಕರು ಮಾತ್ರವಲ್ಲದೆ ಇಡೀ ಚಿತ್ರತಂಡದ ಮುಖದಲ್ಲಿ ನಗುವಿನ ಮಂದಹಾಸ ಮೂಡಿಸಿದೆ.

ನಿರ್ದೇಶನದ ಜೊತೆಗೆ ಕಿರಣ್ ತೇಜಸ್ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಆರೋಹಿ ನೈನಾ ಮತ್ತು ಅನೂಷಾ ಕೃಷ್ಣ ನಾಯಕಿಯರಾಗಿ ತೆರೆಯ ಮೇಲೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯೂ ವ್ಯಕ್ತವಾಗಿದೆ, ಸಂದೀಪ್ ರಾಜಗೋಪಾಲ್,ಸಿತಾರಾ, ಶ್ರೀನಿವಾಸ ಕೆಮ್ತೂರು, ಶಮಾತ್ಮಿಕ ವಿಭಾ ಡೊಂಗ್ರೆ ಮತ್ತಿತರಿದ್ದಾರೆ

ಹಿರಿಯ ಕಲಾವಿದ ರಮೇಶ್ ಭಟ್ ಅವರು ಇದುವರೆಗೂ ಅವರ ಚಿತ್ರಜೀವನದಲ್ಲಿ ಇಲ್ಲಿಯವರೆಗೂ ಮಾಡದ ಅಪರೂಪದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅಭಿಮಾನಿಗಳಿಗೆ ಇಷ್ಟವಾಗಿದೆ. ಜೊತೆಗೆ ಚಂದನಾ ಅನಂತ ಕೃಷ್ಣ,ಮ ಹಿರಿಯ ಕಲಾವಿದರಾದ ವಿದ್ಯಾಮೂರ್ತಿ ಸೇರಿದಂತೆ ಒಂದಷ್ಟು ಹಿರಿ ಕಿರಿಯ ಕಲಾವಿದರು ಹೊಸ ಜೋಡಿಗೆ ಸಾಥ್ ನೀಡಿದ್ದಾರೆ.

ಚಿತ್ರ 25 ದಿನ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಸಂತಸ ಹಂಚಿಕೊಂಡ ನಿರ್ದೇಶಕರಲ್ಲಿ ಒಬ್ಬರಾದ ಮಯೂರ್ ಅಂಬೆಕಲ್ಲು, ಫೆಬ್ರವರಿ 21 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಯಿತು., ಮೊದಲ ದಿನ ಹಾಗು ಎರಡನೇ ದಿನ ಚಿತ್ರದ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ, ಚಿತ್ರ ನೋಡಿದ ಎಲ್ಲರೂ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳುತ್ತಿದ್ದರು., ಆದರೆ ಯಾವ ರೀತಿ ಅದನ್ನು ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿರಲಿಲ್ಲ. ಶನಿವಾರ ಮತ್ತು ಭಾನುವಾರ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ತಂಡದಲ್ಲಿ ಮತ್ತಷ್ಟು ಹುರುಪು ಮತ್ತು ವಿಶ್ವಾಸ ಮೂಡಿಸಿತು ಎಂದರು.

ಆ ಬಳಿಕ ಚಿತ್ರಕ್ಕೆರ ಜನರಿಂದ ಉತ್ತಮ ಪ್ರತಿಕ್ರಿಯೆ ಮತ್ತಷ್ಟು ಹೆಚ್ಚಾಯಿತು, ಸಿನಿಮಾ ನೋಡಿದವರು, ವಿಮರ್ಶಕರು, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆರಂಭದಲ್ಲಿ ಜನರಿಗೆ ಇಷ್ಟವಾಗಬಹುದು ಎನ್ನುವ ಸಣ್ಣ ಅಂದಾಜಿತ್ತು.ಅದು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಕ್ಕಿದೆ, ಇಡೀ ತಂಡ ಖುಷಿಯಲ್ಲಿದ್ದೇವೆ ಎಂದು ಹೇಳಿಕೊಂಡರು.

ಚಿತ್ರಕ್ಕೆ ಶಿವಶಂಕರ ನೂರಬಂಡ ಛಾಯಾಗ್ರಾಹಣ , ನಿರ್ದೇಶಕರಲ್ಲಿ ಒಬ್ಬರಾದ ಮಯೂರ್ ಅಂಬೆಕಲ್ಲು ಸಂಗೀತ, ಸುಪ್ರೀತ್ ಸಂಕಲನ, ವಿಶಾಕ್ ಭಾನುಪ್ರಕಾಶ್ ಜೋಯ್ಸ್ ಸಾಹಿತ್ಯ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin