"Boss", the first look teaser of the crime thriller film "Boss" released

“ಬಾಸ್”, ಕ್ರೈಮ್ ಥ್ರಿಲ್ಲರ್ ಕಥೆಯ “ಬಾಸ್” ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ - CineNewsKannada.com

“ಬಾಸ್”, ಕ್ರೈಮ್ ಥ್ರಿಲ್ಲರ್ ಕಥೆಯ “ಬಾಸ್” ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ

“ಬಾಸ್”, ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ “ಬಾಸ್” ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಸಾಧ್ಯತೆಗಳಿವೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ವಿ.ಲವ ನಿರ್ದೇಶನ ಮಾಡಿದ್ದು ತನುಷ್ ಶಿವಣ್ಣ ನಾಯಕನಾಗಿ ಕಾಣಿಸಿಕೊಂಡಿದ್ದಾರೆ

ನಿರ್ದೇಶಕ ವಿ.ಲವ ಮಾತನಾಡಿ “ಬಾಸ್”, ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಕೆಲವೇ ದಿನಗಳಲ್ಲಿ ಟ್ರೇಲರ್ ಸಹ ಅನಾವರಣವಾಗಲಿದೆ. ಮುಂದಿನ ತಿಂಗಳು ಚಿತ್ರ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ತನುಷ್ ಶಿವಣ್ಣ ಚಿತ್ರದ ನಾಯಕನಾಗಿ ನಟಿಸಿದ್ದು, ಮೋನಿಕಾ ಗೌಡ ಹಾಗೂ ಪಾಯಲ್ ಚಂಗಪ್ಪ ನಾಯಕಿಯರಾಗಿ ಅಭಿನಯಿಸಿದ್ದಾರೆ. “ಬಾಸ್” ಚಿತ್ರಕ್ಕೆ “ಸತ್ಯಮೇವ ಜಯತೇ” ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್ ಆರ್ ಪುರ ಛಾಯಾಗ್ರಹಣ ಹಾಗೂ ಮಹೇಶ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ ಎಂದು ತಿಳಿಸಿದರು.

ನಾಯಕ ತನುಷ್ ಶಿವಣ್ಣ ಮಾತನಾಡಿ ಬಾಸ್ ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣವಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಸಮಾಜಕ್ಕೆ ಬೇಕಾಗಿರುವ ವ್ಯಕ್ತಿಯ ಪಾತ್ರ. ಚಿತ್ರದಲ್ಲಿ ಎರಡು ಹಾಡುಗಳಿದೆ. ಅನಿಲ್ ಪಿ ಅವರು ಚಿತ್ರ ನಿರ್ಮಿಸಿದ್ದಾರೆ. ವಿ.ಲವ ನಿರ್ದೇಶಿಸಿದ್ದಾರೆ. ಎಂದರು.

ಚಿತ್ರದಲ್ಲಿ ನಟಿಸಿರುವ ಡಾ.ವಿಜಯೇಶ್, ವೀರೇನ್ ಕೇಶವ್, ಭೀಷ್ಮ ರಾಮಯ್ಯ, ಲಕ್ಷ್ಮಣ್ ಪೂಜಾರಿ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಶರತ್ ಎನ್ ಆರ್ ಪುರ ಸೇರಿದಂತೆ ಅನೇಕ ತಂತ್ರಜ್ಞರು “ಬಾಸ್” ಚಿತ್ರದ ಕುರಿತು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin