Chandanavan stars support "Halka Don": A smile on the face of the film crew

” ಹಲ್ಕಾ ಡಾನ್ ” ಗೆ ಚಂದನವನದ ತಾರೆಯರ ಬೆಂಬಲ: ಚಿತ್ರತಂಡದ ಮುಖದಲ್ಲಿ ಮಂದಹಾಸ - CineNewsKannada.com

” ಹಲ್ಕಾ ಡಾನ್ ” ಗೆ ಚಂದನವನದ ತಾರೆಯರ ಬೆಂಬಲ: ಚಿತ್ರತಂಡದ ಮುಖದಲ್ಲಿ ಮಂದಹಾಸ

ಟಗರು’, ‘ಸಲಗ’ ಹಾಗೂ ‘ಯುಐ’ ಚಿತ್ರ ನಿರ್ಮಿಸಿರುವ ಕೆಪಿ ಶ್ರೀಕಾಂತ್ ಇದೀಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದುವೇ ” ಹಲ್ಕಾ ಡಾನ್

ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಈ ವೇಳೆ ಶಿವಣ್ಣ-ಗೀತಾ ದಂಪತಿ, ಸುದೀಪ್, ರಚಿತಾ ರಾಮ್, ದುನಿಯಾ ವಿಜಯ್, ವಿನಯ್ ರಾಜ್ ಕುಮಾರ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಆಗಮಿಸಿ ಶುಭ ಹಾರೈಸಿದರು

ಕನ್ನಡ ಚಿತ್ರರಂಗದಲ್ಲಿ ‌ಇತ್ತೀಚೆಗೆ ಸಿನಿಮಾ ಕಾರ್ಯಕ್ರಮ ,ಅಥವಾ ಧ್ವನಿ ಸುರುಳಿ ಬಿಡುಗಡೆ ಇಲ್ಲ ಟ್ರೈಲರ್ ಬಿಡುಗಡೆಗೆ ಒಬ್ಬರು ಒಬ್ಬರು ನಾಯಕ, ನಾಯಕಿಯರು ಭಾಗವಹಿಸಿದರೆ ಹೆಚ್ಚು ಅಂತಹುದರಲ್ಲಿ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಚಂದನದನದ ಪ್ರಮುಖ ತಾರೆಯನ್ನೇ ಒಟ್ಟು ಗೂಡಿಸಿದ್ದು ಒಳ್ಳೆಯ ಬೆಳವಣಿಗೆ ಕೂಡ.

ಹಲ್ಕಾ ಡಾನ್ ಚಿತ್ರಕ್ಕೆ ಕಿಚ್ಚ ಸುದೀಪ್‌ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಗೀತಾಕ್ಕ ಹಾಗೂ ರಚಿತಾ ರಾಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ಶಿವಣ್ಣ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ ಮತ್ತಿತರರು ತಾರಾಬಳಗದಲ್ಲಿದ್ದಾರೆ.

ಮಹೂರ್ತದ ಬಳಿಕ ತಂಡ ಮಾತಿಗಿಳಿಯಿತು. ಈ ವೇಳೆ
ದುನಿಯಾ ವಿಜಯ್ ಮಾತನಾಡಿ, ಶ್ರೀಕಾಂತ್ ಅವರ ಮೇಲೆ ಪ್ರೀತಿ, ಕೋಪ ಎರಡು ಇದೆ. ಸಿನಿಮಾ ಮಾಡದೇ ಇದ್ದಾಗ ಕೋಪ, ಮಾಡಿದಾಗ ಖುಷಿ ಇರುತ್ತದೆ. ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಶ್ರೀಕಾಂತ್ ಸ ಬ್ಯಾನರ್ ಕಾರಣ. ಸಲಗ ಸಿನಿಮಾ ಬಳಿಕ ಭೀಮ ಸಿನಿಮಾ. ಮತ್ತೊಂದು ಜನ್ಮ ಕೊಟ್ಟ ಪ್ರೊಡಕ್ಷನ್ ಹೌಸ್. ಹಲ್ಕಾ ಡಾನ್ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಶುಭ ಹಾರೈಸಿದರು.

ಹಲ್ಕಾ ಡಾನ್ ಚಿತ್ರದ ಕಾಂಬಿನೇಷನ್ ಸೂಪರ್ ಆಗಿದೆ. ಸತ್ಯ ಹೆಗ್ಡೆ ಹಾಗೂ ಸೂರಿ ಅವರನ್ನು ಯಾವತ್ತೂ ಮರೆಯುವ ಆಗಿಲ್ಲ. ಹರಿಕೃಷ್ಣ ಸೂಪರ್ ಹಿಟ್ ಹಾಡು ಕೊಟ್ಟವರು. ಗಾಂಧಿ ನಗರದಲ್ಲಿ ರೇಸ್ ಕುದುರೆಗಳ ಕರೆಕ್ಟ್ ಕುನ್ನಿಸ್ ಬಾಯಿ ಹಿಡಿಯುವವರು ಅಂದರೆ ಶ್ರೀಕಾಂತ್.. ರತ್ನನ್ ಪ್ರಪಂಚದಲ್ಲಿ ಪ್ರಮೋದ್ ಅಭಿನಯ ಚೆನ್ನಾಗಿ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು.

ಶಿವಣ್ಣ- ದುನಿಯಾ ವಿಜಯ್ ಗೆ ಸಿನಿಮಾ: ಕೆಪಿ ಶ್ರೀಕಾಂತ್

ನಿರ್ಮಾಪಕರಾದ ಶ್ರೀಕಾಂತ್ ಮಾತನಾಡಿ, ” ಶಿವಣ್ಣ ಹಾಗೂ ದುನಿಯಾ ವಿಜಯ್ ಜೊತೆ ಸಿನಿಮಾ ಮಾಡುತ್ತೇನೆ. ಅವರಿಬ್ಬರ ಜೊತೆ ಹರಿಕೃಷ್ಣ ಮ್ಯೂಸಿಕ್ ಇರಲಿದೆ. ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಸಿನಿಮಾ ನೋಡಬಹುದು.. ಎಂದರು

ಹಲ್ಕಾ ಡಾನ್ ಸಿನಿಮಾದ ಮುಹೂರ್ತ ನೋಡಿದರೆ ಎಂಥ ಎನರ್ಜಿ ಬಂದಿದೆ.ನಮ್ಮ ಸಂಸ್ಥೆಗೆ ಎನರ್ಜಿ ಇರಲು ಕಾರಣರಲ್ಲಿ ಒಬ್ಬರು ದುನಿಯಾ ವಿಜಯ್.‌. ನನ್ನ ಹಿಂದೆ ಒಳ್ಳೆ ತಂಡ ಇದೆ. ಎಲ್ಲರ ಆಶೀರ್ವಾದದಿಂದ ಸಿನಿಮಾ ಚೆನ್ನಾಗಿ ಆಗಲಿದೆ. ಹಲ್ಕಾ ಡಾನ್ ಎಂಬುದು ಆಡು ಭಾಷೆ. ಚಿತ್ರದಲ್ಲಿ ಪ್ರಮೋದ್ ಹಿರಿಯ ನಟ ಸಾಯಿ ಕುಮಾರ್ ಅವರ ಅಭಿಮಾನಿ ಎಂದು ಹೇಳಿದರು.

ನಾಯಕ ಪ್ರಮೋದ್ ಮಾತನಾಡಿ, ಮೊದಲ ಸಿನಿಮಾಗೆ ಇಷ್ಟು ಟೆನ್ಷನ್ ಮಾಡಿಕೊಂಡಿರಲಿಲ್ಲ. ಆದರೆ ಸಿನಿಮಾದಲ್ಲಿ ಟೆನ್ಷನ್ ಜೊತೆಗೆ ಒಂದೊಳ್ಳೆ ವೈಬ್ರೇಷನ್ ಸಿಕ್ಕಿದೆ. ಶಿವಣ್ಣ ಜೊತೆ ಶ್ರೀಕಾಂತ್ ಸರ್ ಸಿನಿಮಾ ಮಾಡಿದಾಗ ನನ್ನ ಹಾಕಿಕೊಳ್ಳಿ. ಶಿವಣ್ಣ ಬಳಿಕ ಏಟು ತಿನ್ನಬೇಕು. ಅಂದರೆ ಅವರ ಜೊತೆ ನಟಿಸಬೇಕು ಎಂಬ ಆಸೆ ಇದೆ. ಸುದೀಪ್ ಸರ್ ನನ್ನ ಆಕ್ಟಿಂಗ್ ಬಗ್ಗೆ ಹೊಗಳಿದಕ್ಕೆ ನನಗೆ ಸಾರ್ಥಕತೆ. ವಿಜಿ ಸರ್, ಗಣೇಶ್ ಸರ್ ನಮಗೆಲ್ಲಾ ಕಾನ್ಫಿಡೆನ್ಸ್ ನೀಡುತ್ತಾರೆ. ಐದಾರು ಬಾರಿ ಈ ಸಿನಿಮಾದ ಕಥೆ ಕೇಳಿದ್ದೇನೆ. ಡೈರೆಕ್ಟರ್ ತುಂಬಾ ಚೆನ್ನಾಗಿ ಕಥೆ ಬರೆದಿದ್ದಾರೆ. ನನ್ನ ಈ ಜರ್ನಿಗೆ ಈ ಸಿನಿಮಾ ಸಪೋರ್ಟ್ ಆಗಲಿದೆ ಎಂಬ ನಂಬಿಕೆ ಇದೆ ಎಂದರು.

ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ‘ಹಲ್ಕಾ ಡಾನ್’ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಚಲಾ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ‘ಹಲ್ಕಾ ಡಾನ್’ ಚಿತ್ರಕ್ಕಿದೆ.

ಜ್ಯೋತಿ ರೈ ಮರಳಿ ಆಗಮನ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವಚಿತ್ರಗಳ‌ ಮೂಲಕ್ಕೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಕನ್ನಡದವೇ ಆದ ಸದ್ಯ ತೆಲುಗು ಚಿತ್ರರಂಗ‌ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ನಟಿ ಜ್ಯೋತಿ ರೈ ಹಲ್ಕಾ ಡಾನ್ ಚಿತ್ರದ ಮೂಲಕ ಮರಳಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.ಇದು ಅವರ ಎರಡನೇ ಇನ್ಸಿಂಗ್ಸ್.

50 ವರ್ಷ ಪೂರ್ಣಗೊಳಿಸಿ ಸಾಯಿ ಕುಮಾರ್

ಬಣ್ಣದ ಬದುಕು ಪ್ರವೇಶಿಸಿ 50 ವರ್ಷ ಪೂರ್ಣ ಗೊಳಿಸಿದ ಹಿರಿಯ ನಟ ಸಾಯಿ ಕುಮಾರ್ ಅವರನ್ನು ಚಿತ್ರತಂಡದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕನ್ನಡ ಚಿತ್ರರಂಗದಲ್ಲಿ ಎಲ್ಲರ ಅಣ್ಣಾ ಎಂದೇ ಖ್ಯಾತಿ ಪಡೆದಿರುವ ಶಿವಣ್ಣ ಅವರು ಸಾಯಿ ಕುಮಾರ್ ಅವನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin