ಕ್ಲಾಸ್, ಮಾಸ್ ಆಡಿಯೆನ್ಸ್ ಮೆಚ್ಚಿದ “ಬ್ರಾಟ್” – ನಿರ್ದೇಶಕ ಶಶಾಂಕ್
ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಕಥಾಹಂದರ ಹೊಂದಿರುವ “ಬ್ರಾಟ್” ಚಿತ್ರ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತದೆ ಅಂದುಕೊಂಡಿದ್ದೆ. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಯುವಕರ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚು ಬರುತ್ತಿದ್ದಾರೆ. ಕ್ಲಾಸ್ ಅಥವಾ ಮಾಸ್ ಆಡಿಯನ್ಸ್ ಎಂಬ ಭೇದವಿಲ್ಲದೆ ಚಿತ್ರವನ್ನು ಇಷ್ಟಪಡುತ್ತಿದ್ದಾರೆ ಎಂದರು ನಿರ್ದೇಶಕ ಶಶಾಂಕ್.

ಬ್ರಾಟ್ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ಉತ್ತಮ ಬೆಂಬಲ ಪ್ರಕ್ರಿಯೆ ಹಿನ್ನೆಲೆಯಲ್ಲಿ ಚಿತ್ರತಂಡದೊಂದಿಗೆ ಸಂತಸ ಹಂಚಿಕೊಂಡ ನಿರ್ದೇಶಕ ಶಶಾಂಕ್., ಚಿತ್ರತಂಡ ಚಿತ್ರ ಬಿಡುಗಡೆಯಾದ ದಿನದಿಂದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದೆ. ಹೋದ ಕಡೆ ಎಲ್ಲಾ ಜನರು ಚಿತ್ರದ ಪ್ರತಿ ಸನ್ನಿವೇಶವನ್ನು ಎಂಜಾಯ್ ಮಾಡುತ್ತಿದ್ದಾರೆ. ಕೃಷ್ಣ ಅವರ ಕ್ರಿಸ್ಟಿ ಪಾತ್ರಕ್ಕೆ ಜನ ಫಿದಾ ಆಗಿದ್ದಾರೆ. ಸಹ ಕಲಾವಿದರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ ಎಂದರು
ಚಿತ್ರಕ್ಕೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಇನ್ನೂ ಚಿತ್ರ ನೋಡದವರು ಕುಟುಂಬ ಸಮೇತ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ನೋಡಿ. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲೂ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಆ ಪೈಕಿ ಮೊದಲಿಗೆ ತೆಲುಗಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ ಸಾಮಾನ್ಯವಾಗಿ ಪತ್ನಿ ಇಲ್ಲಿಯವರೆಗೂ ನನ್ನ ಯಾವ ಸಿನಿಮಾ ಲುಕ್ ನ ಬಗ್ಗೆ ಕೂಡ ಮಾತನಾಡಿರಲಿಲ್ಲ. ಚಿತ್ರ ನೋಡಿ ತುಂಬಾ ಚೆನ್ನಾಗಿ ಕಾಣುತ್ತೀರಾ ಅಂತ ಹೇಳಿದರು. ಅಕ್ಕನ ಮಕ್ಕಳು, ಸ್ನೇಹಿತರು ಹಾಗೂ ಅಭಿಮಾನಿಗಳು ಎಲ್ಲರೂ ಕೂಡ ಚಿತ್ರದ ಹೊಸ ಲುಕ್ ಗೆ ಹಾಗೂ ಕ್ರಿಸ್ಟಿ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿದರು. ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಧನ್ಯವಾದ ಎಂದರು.

ನಾಯಕಿ ಮನಿಶಾ ಕಂದಕೂರ್ ಮಾತನಾಡಿ ಸಹ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿದರು.
ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ ಉತ್ತಮ ಚಿತ್ರ ಕೊಟ್ಟ ಶಶಾಂಕ್ಗೆ, ನಾಯಕ ಕೃಷ್ಣ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಎಲ್ಲರ ಸಹಕಾರಕ್ಕೆ ಎಷ್ಟು ಹೇಳಿದರು ಕಡಿಮೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತೇವೆ ತಿಳಿಸಿದರು.

ಕಲಾವಿದ ಡ್ರ್ಯಾಗನ್ ಮಂಜು ಅವರು ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಗೆ ಖುಷಿಪಟ್ಟರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ, ಸಾಹಸ ನಿರ್ದೇಶಕ ಮಾಸ್ ಮಾದ ಹಾಗೂ ಕಲಾವಿದರಾದ ಶ್ರೀವತ್ಸ, ಸಂಚಿತ್, ಗಿರಿರಾಜ್ ಹಾಗೂ ಶಿವಪ್ರಸಾದ್ ಮುಂತಾದವರು ಚಿತ್ರದ ಯಶಸ್ಸಿನ ಸಂತೋಷವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.

