Director Gururaj Kulkarni to narrate the story of “Love cum Crime-Thriller”

“ಲವ್ ಕಮ್ ಕ್ರೈಂ-ಥ್ರಿಲ್ಲರ್” ಕಥೆ ಹೇಳಲು ಮುಂದಾದ ನಿರ್ದೇಶಕ ಗುರುರಾಜ ಕುಲಕರ್ಣಿ - CineNewsKannada.com

“ಲವ್ ಕಮ್ ಕ್ರೈಂ-ಥ್ರಿಲ್ಲರ್” ಕಥೆ ಹೇಳಲು ಮುಂದಾದ ನಿರ್ದೇಶಕ ಗುರುರಾಜ ಕುಲಕರ್ಣಿ

ಕನ್ನಡದಲ್ಲಿ ಹಲವು ಸದಭಿರುಚಿತ್ರಗಳನ್ನು ನೀಡಿದ ಹಿರಿಮೆಗೆ ಪಾತ್ರವಾಗಿರುವ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಇದೀಗ ಹೊಸ ವಿಷಯ ಮತ್ತು ಕಂಟೆಂಟುನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ “ಲವ್ ಕಮ್ ಕ್ರೈಂ-ಥ್ರಿಲ್ಲರ್” ಕಥೆ ಹೇಳಲು ಸಿದ್ದತೆ ನಡೆಸಿದ್ದಾರೆ.

ಹೊಸ ಚಿತ್ರದಲ್ಲಿ ಸೂರಜ್ ಗೌಡ , ಯುವ ನಟ ಪ್ರವೀಣ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು ಭರವಸೆಯ ನಟಿ ಶರಣ್ಯ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಸುಗ್ಗಿಯ ಹಬ್ಬ ಸಂಕ್ರಾಂತಿ ವೇಳೆಗೆ ಕಿಚ್ಚ ಸುದೀಪ್ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಿದ್ದಾರೆ. ಇದು ಚಿತ್ರತಂಡದಲ್ಲಿ ಹೊಸ ಹುರುಪು ಹೆಚ್ಚುವಂತೆ ಮಾಡಿದೆ. ಜೊತೆಗೆ ಚಿತ್ರದ ಹಲವು ನಟ ನಟಿಯರು ಚಿತ್ರದಲ್ಲಿದ್ದಾರೆ

ಜಯರಾಮ್ ಕಾರ್ತಿಕ್ ಮತ್ತು ಅದ್ವಿತಿ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದ ಐರಾವನ್ ಚಿತ್ರ ನಿರ್ಮಿಸಿದ್ದ ಡಾ. ನಿರಂತರ ಗಣೇಶ್ ಹೊಸ ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ಅವರಿಗೆ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ವೀರ್ ಸಮರ್ಥ್ ಸಂಗೀತ, ಪ್ರಮೋದ ಮರವಂತೆ ಸಾಹಿತ್ಯ ಚಿತ್ರಕ್ಕಿರಲಿದೆ. ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಸಂಕಲನ ಕಾರ್ಯ, ರಘು ನಿಡುವಳ್ಳಿ ಸಂಭಾಷಣೆ ಇರಲಿದೆ.

ಚಿತ್ರವನ್ನು ಬೆಂಗಳೂರು, ಗೋವಾ ಮತ್ತು ಕರ್ನಾಟಕದ ಹಲವು ತಾಣಗಳಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.ಈಗಾಗಲೇ ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ.

ಲಾಸ್ಟ್ ಬಸ್, ಅಮೃತ್ ಅಪಾರ್ಟ್ಮೆಂಟ್, ದಿ ಜಡ್ಜ್ ಮೆಂಟ್ ಸಿನಿಮಾಗಳ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ ಕುಲಕರ್ಣಿ (ನಾಡಗೌಡ) ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಬಹುತೇಕ ತೆರೆಯ ಹಿಂದಿನ ಕೆಲಸಗಳು ಪೂರ್ಣಗೊಂಡಿವೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin