Director Kapil started Cinema Career Academy

ಸಿನಿಮಾ ಕೆರಿಯರ್ ಅಕಾಡೆಮಿ ಆರಂಭಿಸಿದ ನಿರ್ದೇಶಕ ಕಪಿಲ್ - CineNewsKannada.com

ಸಿನಿಮಾ ಕೆರಿಯರ್ ಅಕಾಡೆಮಿ ಆರಂಭಿಸಿದ ನಿರ್ದೇಶಕ ಕಪಿಲ್

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನೃತ್ಯನಿರ್ದೇಶಕನಾಗಿ, ಚಲನಚಿತ್ರ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿರುವ ಕಪಿಲ್ ಎಂ.ಆರ್. ಈಗ 100 ದಿನಗಳ ಸಿನಿಮಾ ತರಬೇತಿ ಶಿಬಿರವನ್ನು ಪ್ರಾರಂಭಿಸುತ್ತಿದ್ದಾರೆ.

‘ಕಪಿಲ್ ಸಿನಿಮಾ ಕೆರಿಯರ್ ಅಕಾಡೆಮಿ’ ಬೆಂಗಳೂರಿನ ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಲ್ಲಿನ ನಾಗ್ ಆಟ್ರ್ಸ್ ಕಚೇರಿಯಲ್ಲಿ ಇದೇ 16 ರಂದು ತರಬೇತಿ ಶಾಲೆಯು ಪ್ರಾರಂಭವಾಗುತ್ತಿದೆ. ನೂರು ದಿನಗಳ ಕಾಲ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಿನಿಮಾ ಅಭಿನಯ, ನೃತ್ಯ, ಮತ್ತು ಸಾಹಸ ಇತ್ಯಾದಿಗಳನ್ನು ಕಲಿಸಿ, ಮುಂದಿನ ಹೊಸ ಚಿತ್ರದಲ್ಲಿ ನಟಿಸಲು ನೇರ ಪ್ರವೇಶ ನೀಡಲಾಗುತ್ತದೆ.

ಚಲನಚಿತ್ರ ನಿರ್ದೇಶಕರಾದ ವಿ.ನಾಗಪ್ಪ ಅವರು ಈ ಶಾಲೆಯ ಪ್ರಾಂಶುಪಾಲರಾಗಿದ್ದು, ಸಂಗೀತ ನಿರ್ದೇಶಕರಾದ ಗೋಪಿ ಕಲಾಕಾರ್ ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಥಳ :ನಂ ಸಿ.56 , ಕನ್ನಡ ಶಾಶ್ವತ ಸಾಮ್ರಾಜ್ಯ
ದೇವರಾಜ ಅರಸ್ ಟ್ರಕ್ ಟರ್ಮಿನಲ್, ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆ ,ಬೆಂಗಳೂರು ಮೊಬೈಲ್ ನಂ. 9902854165, ಜಿಮೇಲ್: kapilmaster56@gmail.com ಸಂಪರ್ಕಿಸಬಹುದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin