Eltu Mutta', a film with a different storyline, will hit the screens on August 1st.

ವಿಭಿನ್ನ ಕಥಾಹಂದರ ಹೊಂದಿರುವ” ಎಲ್ಟು ಮುತ್ತಾ” ಚಿತ್ರ ಆಗಸ್ಟ್ 1 ಕ್ಕೆ ತೆರೆಗೆ - CineNewsKannada.com

ವಿಭಿನ್ನ ಕಥಾಹಂದರ ಹೊಂದಿರುವ” ಎಲ್ಟು ಮುತ್ತಾ” ಚಿತ್ರ ಆಗಸ್ಟ್ 1 ಕ್ಕೆ ತೆರೆಗೆ

ಸತ್ಯ ಎಸ್ ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ ಹಾಗೂ ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ `ಎಲ್ಟು ಮುತ್ತಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ, ಇದೇ ಖುಷಿಯಲ್ಲಿ ಚಿತ್ ಆಗಸ್ಟ್ 1ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಟ್ರೇಲರ್ ಬಿಡುಗಡೆ ಮಾಡಿದರು. ಈ ವೇಳೆ ನಟರಾದ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್, ಜಿ.ಬಿ.ವಿನಯ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿ ರಾಜೇಶ್ ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾದರು.

ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ ಚಿತ್ರದ ಎರಡು ಹಾಡುಗಳು ಹಾಗೂ ಟೀಸರ್‍ಗೆ ದೊರಕಿರುವ ಪ್ರಶಂಸೆಗೆ ಬಹಳ ಖುಷಿಯಾಗಿದೆ. ಅದರಲ್ಲೂ ಕೊಡವ ಭಾಷೆಯ ಹಾಡಂತೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಪ್ರಚಾರಕ್ಕಾಗಿ “ಎಲ್ಟು ಮುತ್ತಾ” ನ ಸಂಚಾರ ಆರಂಭವಾಗಿದ್ದು, ರಾಜ್ಯದ ವಿವಿಧ ಊರುಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ. ಆಗಸ್ಟ್ 1 ರಂದು `ಎಲ್ಟು ಮುತ್ತಾ ರಾಜ್ಯದಂತ ಬಿಡುಗಡೆಯಾಗುತ್ತಿದೆ ಎಂದರು.

ನಿರ್ದೇಶಕ ರಾ ಸೂರ್ಯ ಮಾತನಾಡಿ “ಎಲ್ಟು ಮುತ್ತಾ” ಎರಡು ಪಾತ್ರಗಳ ಹೆಸರು. ಸಾವಿಗೆ ಡೋಲು ಬಡೆಯುವವರ ಸುತ್ತ ಹೆಣೆದಿರುವ ಕಥೆ. ಕೊಡಗು ಪ್ರಾಂತ್ಯದಲ್ಲಿ ನಡೆಯುವ ಕಥೆಯೂ ಹೌದು. ಚಿಕ್ಕವಯಸ್ಸಿನಿಂದ ಕಂಡ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತರುತ್ತಿದ್ದೇನೆ. ಚಿತ್ರ ಎಲ್ಲರಿಗೂ ಹಿಡಸಲಿದೆ ಎಂಬ ಭರವಸೆ ಇದೆ.ನಿರ್ದೇಶನದ ಜೊತೆಗೆ ಎಲ್ಟು ಪಾತ್ರದಲ್ಲೂ ಅಭಿನಯಿಸಿದ್ದೇನೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಾಯಕ ಶೌರ್ಯ ಪ್ರತಾಪ್ ಮಾತನಾಡಿ,ಮುತ್ತಾ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಬರವಣಿಗೆ ಹಂತದಿಂದಲೂ ಚಿತ್ರತಂಡದ ಜೊತೆಗಿದ್ದೇನೆ. ಮೊದಲ ಚಿತ್ರ. ಚಿತ್ರದ ಟೀಸರ್, ಹಾಡು, ಟ್ರೇಲರ್ ಗೆ ಸಿಗುತ್ತಿರುವ ಪ್ರಶಂಸೆ ನೋಡಿದರೆ ಚಿತ್ರ ಗೆದ್ದೆ ಗೆಲ್ಲುವ ನಿರೀಕ್ಷೆ ಇದೆ ಎಂದರು

ರುಹಾನ್ ಆರ್ಯ ನಟನೆಯ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿ ಕೂಡ ಕೆಲಸ ಮಾಡಿದ್ದಾರೆ.

ಹಾಡುಗಳು ಹಿಟ್ ಆಗಿರುವುದಕ್ಕೆ ಸಂಗೀತ ನಿರ್ದೇಶಕ ಮತ್ತು ಗಾಯಕ “ಪ್ರಸನ್ನ ಕೇಶವ”ಸಂತಸಪಟ್ಟರು. ನಾಯಕಿ ಪ್ರಿಯಾಂಕ ಮಳಲಿ ಹಾಗೂ ನಟ ಕಾಕ್ರೋಜ್ ಸುಧೀ , ನವೀನ್ ಡಿ ಪಡೀಲ್ ಮತ್ತು ಯಮುನಾ ಶ್ರೀನಿಧಿ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಹ ನಿರ್ಮಾಪಕ ಪವೀಂದ್ರ ಪೆÇನ್ನಪ್ಪ,ಹಾಗೂ ವಿತರಕ ಶ್ರೀಧರ್ ಮತ್ತಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin