"Fraud Rishi" movie release: Expectations rise

ಫ್ರಾಡ್ ಋಷಿ” ಚಿತ್ರದ ಬಿಡುಗಡೆ : ನಿರೀಕ್ಷೆ ಹೆಚ್ಚಳ - CineNewsKannada.com

ಫ್ರಾಡ್ ಋಷಿ” ಚಿತ್ರದ ಬಿಡುಗಡೆ : ನಿರೀಕ್ಷೆ ಹೆಚ್ಚಳ

“ಫ್ರಾಡ್ ಋಷಿ” ಚಿತ್ರದ “ನೀ ಹೆಜ್ಜೆ ಇಟ್ಟ ಕಡೆಯಲ್ಲೆಲ್ಲ ಗೆಜ್ಜೆನಾದ” ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಡಾ. ವಿ.ನಾಗೇಂದ್ರಪ್ರಸಾದ್ “ನಮ್ ಋಷಿ” ಚಿತ್ರಕ್ಕೆ ಬರೆದಿರುವ ರಾಜೇಶ್ ಕೃಷ್ಣನ್ ಹಾಡಿರುವ ಹಾಡನ್ನು ಬಿಡುಗಡೆ ಆಗಿದೆ

ಡಾ. ವಿ.ನಾಗೇಂದ್ರ ಪ್ರಸಾದ್ ಮಾತನಾಡಿ ಹಲವು ವರ್ಷಗಳಿಂದ ಋಷಿ ಅವರನ್ನು ಬಲ್ಲೆ. ಅವರ “ಒಳಿತು ಮಾಡು ಮನುಸ” ಹಾಡು ಯಾವ ರೀತಿ ಸೂಪರ್ ಹಿಟ್ ಆಗಿದೆ ಎಂದು ಎಲ್ಲರಿಗೂ ತಿಳಿದ ಸಂಗತಿ. ನಾನು ಕೂಡ ಆ ಹಾಡಿಗೆ ಅಭಿಮಾನಿ. ಗೀತರಚನೆಕಾರ ಋಷಿ ಈಗ ನಾಯಕನಾಗಿದ್ದಾರೆ ಎಂದರು

ನಟ ನಮ್ ಋಷಿ ಮಾತನಾಡಿ ಚಿತ್ರದಲ್ಲಿ ಐದು ಹಾಡುಗಳಿದೆ. ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿದೆ. ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರೀಕರಣಕ್ಕೂ ಮೊದಲು ಹಾಡುಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶ ನನ್ನದು. ಅದರಂತೆ ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಈ ತಿಂಗಳ ಕೊನೆಗೆ ಶೂಟಿಂಗ್ ಶುರುವಾಗಲಿದೆ. ನಾನು ಸೇರಿದಂತೆ ಅನೇಕ ಸ್ನೇಹಿತರು ಸೇರಿ ನಮ್ ಋಷಿ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಕೊನೆಗೆ ಉತ್ತಮ ಸಂದೇಶ ಕೂಡ ಇದೆ ಎಂದರು.

ನಿರ್ಮಾಪಕರಾದ ಸೋಮಶೇಖರ್, ಮಂಜು ಭದ್ರಾವತಿ, ಹರಿಕೃಷ್ಣ ಬಿ, ಮಧು ಬಿ, ಲೋಕಿ ಹಾಗೂ ನಾಯಕಿಯರಾದ ಚೈತ್ರ, ಸ್ವಾತಿ, ರಾಜೇಶ್ವರಿ, ಚೈತ್ರಾರಾಮ್ ಮುಂತಾದವರು “ಫ್ರಾಡ್ ಋಷಿ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin