KVN Productions enters Malayalam film industry

ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ಕೆ.ವಿ.ಎನ್ ಪ್ರೊಡಕ್ಷನ್ಸ್


ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ಕೆ.ವಿ.ಎನ್ ಪ್ರೊಡಕ್ಷನ್ಸ್

ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಯುವ ಸಮುದಾಯದ ಮನ ಗೆದ್ದಿರುವ ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೋಡಿಯ ನಿರ್ದೇಶನ ಮಾಡುತ್ತಿರುವುದು ವಿಶೇಷ

ತೆಸ್ಪಿಯನ್ ಫಿಲ್ಮ್ಸ್‍ನ ಶೈಲಜಾ ದೇಸಾಯಿ ಜೊತೆಗೆ ಕೆವಿಎನ್ ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಕಾಂಬಿನೇಶನ್ ಬಗ್ಗೆ ವೆಂಕಟ್ ಕೆ ನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಜುಮ್ಮಲ್ ಬಾಯ್ಸ್ ನಿರ್ದೇಶಿಸಿದ್ದ ಚಿದಂಬರಂ ಜೊತೆಗೆ, ಇತ್ತೀಚೆಗೆ ಎಲ್ಲರ ಮನಗೆದ್ದಿದ್ದ ‘ಆವೇಶಮ್’ ಖ್ಯಾತಿಯ ನಿರ್ದೇಶಕ ಜಿತು ಮಾಧವನ್ ಹೊಸ ಯೋಜನೆಗೆ ಜೊತೆಯಾಗಲಿದ್ದಾರೆ.

ಅಷ್ಟೇ ಅಲ್ಲ ಚಿತ್ರದಲ್ಲಿ ನುರಿತ ತಂತ್ರಜ್ಞರ ದೊಡ್ಡ ಪಡೆಯೇ ಇರಲಿದೆ.ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.

ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ ಕೆ ನಾರಾಯಣ ಮಾತನಾಡಿ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ಕೊಡುವ ದೃಷ್ಟಿಯಿಂದ ಕೆಲಸ ಮಾಡ್ತೇವೆ. ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರನ್ನು ಮನರಂಜಿಸುವ ಕೆಲಸಕ್ಕೆ ಕೈ ಹಾಕಿರೋದೆ ಮೈನವಿರೇಳಿಸುವ ಪ್ರಯತ್ನ.ತಂಡದ ಜೊತೆಗೆ ಸಿನಿಮಾ ಮಾಡುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡ್ತಿರೋದು ಹೆಮ್ಮೆ ತಂದಿದೆ ಎಂದರು

ನಿರ್ದೇಶಕ ಚಿದಂಬರಂ ಮಾತನಾಡಿ ಕಥೆಯನ್ನ ತೆರೆಮೇಲೆ ತರುವ ಪ್ರಕ್ರಿಯೆ ರೋಮಾಂಚಕ. ನನ್ನಂತೆಯೇ ಒಳ್ಳೆ ಕಥೆಗೆ, ಸ್ಕ್ರಿಪ್ಟ್ ಗೆ ಒತ್ತು ಕೊಡೊ ತಂಡದ ಜೊತೆ ಕೆಲಸ ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದಿದ್ದಾರೆ

ಮತ್ತೊಬ್ಬ ನಿರ್ದೇಶಕ ನಿರ್ದೇಶಕ ಜೀತು ಮಾಧವನ್ ‘ನನ್ನ ಹೃದಯಕ್ಕೆ ಹತ್ತಿರವಾದ ಕಥೆ.. ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜೊತೆ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ‘ ಎಂದಿದ್ದಾರೆ

ಕೆವಿಎನ್ ಪ್ರೊಡಕ್ಷನ್ಸ್ ಪಾಲಿಗೆ 2025 ಸುವರ್ಣ ಸಮಯವಾಗಲಿದೆ. ಈಗಾಗ್ಲೆ ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ತಮಿಳಿನ ದಳಪತಿ ಜೊತೆ ‘ತಳಪತಿ 69’, ಹಿಂದಿಯಲ್ಲಿ ಪ್ರಿಯದರ್ಶನ್ ಜೊತೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೆ ಧೃವ ಸರ್ಜಾ ಪ್ರೇಮ್ಸ್ ಕಾಂಬೋದ ‘ಕೆಡಿ’ ರಿಲೀಸ್ ಗೆ ರೆಡಿಯಾಗಿ ನಿಂತಿದೆ.

ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೀಗೆ ನುರಿತರೊಂದಿಗೆ ಕಾಲಿಡ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನ ಹಾಕಿಕೊಂಡಿರೋ ಸೂಚನೆ ಕೆವಿಎನ್ ಸಂಸ್ಥೆ ಕೊಡ್ತಿದೆ.



Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin

Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581