“ಪಾರ್ಟರ್” ಚಿತ್ರದ ಲವಲವಿಕೆ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ

ಮಳೆ, ಧೈರ್ಯಂ, ದಿಲ್ ಪಸಂದ್ ಖ್ಯಾತಿಯ ಶಿವತೇಜಸ್ ಅವರ ಸಾರಥ್ಯದ ಮತ್ತೊಂದು ಲವ್, ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು, ಚಿತ್ರದ ಅಮೋರಾ ಹಾಡು ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹಾಡು ಲವಲವಿಕೆ ಬಿಡುಗಡೆಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ನಟಿ ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ, ಈಗಿನ ಜಂಝಿಗಳ ಲೈಫ್ ಸ್ಟೈಲ್, ಲವ್, ಬ್ರೇಕಪ್, ಲಿವಿಂಗ್ ರಿಲೇಶನ್ ಶಿಪ್ ಸುತ್ತ ಸಾಗುವ ಕಥೆಯನ್ನು ಸುಂದರ ಮೆಸೇಜ್ ನೊಂದಿಗೆ ನಿರ್ದೇಶಕ ಶಿವತೇಜಸ್ ಹೇಳಹೊರಟಿದ್ದಾರೆ.

ಕವಿರಾಜ್ ರಚನೆಯ ಲವಲವಿಕೆ ಹಾಡಿಗೆ ಮುರಳಿ ಮಾಸ್ಟರ್ ಕೊರಿಯಾಗ್ರಾಫ್ ಮಾಡಿದ್ದು, ಕಾರ್ತೀಕ್, ರಮ್ಯ ಅಭ್ಯಂಕರ್ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆಯಲ್ಲಿ, ಸುಜ್ಞಾನ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ನಿರ್ದೇಶಕ ಶಿವತೇಜಸ್ ಮಾತನಾಡಿ ಸಿನಮಾ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಬಂದಿದೆ. ಇದು ಚಿತ್ರದ ಎರಡನೇ ಸಾಂಗ್, ಕಲರ್ ಫುಲ್ ಆಗಿದೆ. ಪ್ರತಿ ಹಾಡನ್ನೂ ಒಂದೊಂದು ಕಲರ್ ಪ್ಯಾಟ್ರನ್ ನಲ್ಲಿ ಮಾಡಿದ್ದೇವೆ. ಲಕ್ಷ್ಮಿ ಕೃಷ್ಣ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಪಾಂಡಿಚೇರಿ, ಬೆಂಗಳೂರಲ್ಲಿ ಶೂಟಿಂಗ್ ಮಾಡಿದ್ದು, ರಂಗಾಯಣ ರಘು, ಚಿತ್ಕಲಾ ಅಭಿನಯಿಸಿದ್ದಾರೆ. ಈಗಾಗಲೇ ಪ್ರೇಮದ ಊರಲಿ ಚಿತ್ರರಂಗಕ್ಕೆ ನವಚೇತನ ನೀಡಿದೆ. ನಮ್ಮದೂ ಫ್ಯಾಮಿಲಿ ಸಬ್ಜೆಕ್ಟ್. ಅದೇಥರ ಹಿಟ್ ಆಗುತ್ತೆ ಎಂಬ ನಂಬಿಕೆಯಿದೆ ಎಂದರು.

ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ ಸಿನಿಮಾ ವಿತರಣೆ, ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದೆ, ಯಾವುದೇ ಮುಜುಗರ ಇಲ್ಲದೆ ಇಡೀ ಕುಟುಂಬ ಸಮೇತ ಕೂತು ನೋಡಬಹುದಾದ ಚಿತ್ರವಿದು. ಬ್ಯಸಿನೆಸ್ ದೃಷ್ಟಿ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ಯಾವ ರೀತಿ ಜನರಿಗೆ ತಲುಪಿಸಬೇಕೆಂದು ಪ್ಲಾನ್ ಮಾಡುತ್ತಿದ್ದೇವೆ ಎಂದರು.

ನಟ ಅಜಯ್ ರಾವ್ ಮಾತನಾಡಿ ನಿರ್ದೇಶಕರು ಹೇಳಿದ ಕಂಟೆಂಟ್ ನನಗೆ ತುಂಬಾ ಇಷ್ಟವಾಯ್ತು. ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ಹಾಡುಗಳ ಹಾಗೇ ಸೀನ್ಸ್ ಕೂಡ ಕಲರ್ ಫುಲ್ ಆಗಿವೆ. ಚಿತ್ರದಲ್ಲಿ ಹ್ಯೂಮನ್ ವ್ಯಾಲ್ಯೂಸ್, ಎಮೋಷನ್ಸ್ ತುಂಬಾ ಚೆನ್ನಾಗಿ ಹೇಳಿದ್ದಾರೆ. ನಿರ್ದೇಶಕರ ಜತೆ ನನಗೆ 25 ವರ್ಷಗಳ ಸ್ನೇಹ, ಚಿತ್ರದ ಟೈಟಲ್ ಹಾಗೇ ಒಳ್ಳೆಯ ಪಾರ್ಟ್ನರ್ ನಿರ್ಮಾಪಕರು ಸಿಕ್ಕಿದ್ದಾರೆ. ಈ ಚಿತ್ರದ ಮೇಲೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ ಎಂದರು.

ನಾಯಕಿ ಬೃಂದಾ ಆಚಾರ್ಯ ಮಾತನಾಡಿ ಸಿನಿಮಾ ಮಾಡಬೇಕಾದರೆ ನಮ್ಮೆಲ್ಲರಲ್ಲೂ ಒಳ್ಳೇ ಬಾಂಡಿಂಗ್ ಇತ್ತು. ಅದು ಬಹಳ ಮುಖ್ಯ. ಆರಂಭದಲ್ಲಿ ಅಜಯ್ ಅಯಾರನ್ನೂ ಮಾತಾಡಿಸ್ತಿದ್ದಿಲ್ಲ, ಸಿಡುಕ್ಮೂತಿ ಸಿದ್ದಪ್ಪನ್ ಥರ ಇದ್ದರು, ಹೋಗ್ತಾ ಹೋಗ್ತಾ ಸ್ವೀಟ್ ಸಿದ್ದಪ್ಪ ಆಗಿ ಹೋದರು. ಹಾಡುಗಳ ಟೈಮಲ್ಲಿ ನನಗೆ ತುಂಬಾ ಹೇಳಿಕೊಟ್ಟರು ಎಂದು ನಾಯಕನನ್ನು ಹೊಗಳಿದರು.

ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

Related Posts

ಹಾರರ್ – ಥ್ರಿಲ್ಲರ್ ‘418’ ಚಿತ್ರ ಅಕ್ಟೋಬರ್ 23 ರಂದು ತೆರೆಗೆ ; ನಿರ್ದೇಶಕ ಪ್ರಶಾಂತ್ ನೀಲ್ ಬೆಂಬಲ

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ” 418″ ಚಿತ್ರ ಹಾರರ್- ಥ್ರಿಲ್ಲರ್ ಕಥೆ ಒಳಗೊಂಡಿದ್ದು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಅಕ್ಟೋಬರ್ 23 ರಂದು ತೆರೆಗೆ ಬರಲು ಸಜ್ಜಾಗಿದೆ. ‘ಉಗ್ರಂ’ ಚಿತ್ರದಿಂದಲೂ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿರುವ ಕೀರ್ತನ್ ನಡಗೌಡ…

ಎ ಐ ಸಿನಿಮಾ ನಿರ್ಮಾಣಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಹಯೋಗ

ಮುಂದಿನ ಪೀಳಿಗೆಯ ಚಿತ್ರಣ ಮತ್ತು ಎಐ ತಂತ್ರಜ್ಞಾನ. ಎಂಐಪಿಕಾಮ್ ಕೇನ್ಸ್ 12 ಹಾಗು ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಗ್ರೂಪ್‍ನಿಂದ ಬೆಂಬಲಿತ ಅಸ್ಟ್ರಾ ಸ್ಟುಡಿಯೋಸ್ ಮತ್ತು ವರ್ಸೆ ಇನ್ನೋವೇಶನ್ ಅಸ್ಟ್ರಾ-ಸ್ಪಾರ್ಕ್ ಅಲೈಯನ್ಸ್ ರಚಿಸಲು ಮುಂದಾಗಿವೆ. ಈ ಘೋಷಣೆಯು ಅಸ್ಟ್ರಾ ಸ್ಟುಡಿಯೋಸ್‍ತಂತ್ರಜ್ಞಾನ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581