ಮ್ಯಾರೇಜ್ ಪಾರ್ಟಿ ಚಿತ್ರ ಡಿಸೆಂಬರ್ 4ರಂದು ಬಿಡುಗಡೆ

ಮನೋರಂಜನಾತ್ಮಕ ಚಿತ್ರದೊಂದಿಗೆ ಪ್ರೇಕ್ಷಕರಿಗೆ ರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದ್ದಾರೆ. ಸಂತೋಷ್ ವಿ ನಿರ್ಮಾಣ ಮಾಡಿರುವ ಚಿತ್ರದ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದು ಚಿತ್ರವನ್ನು ಡಿಸೆಂಬರ್ 4 ರಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ

ನಿರ್ದೆಶಕ ಚಯನ್ ಶೆಟ್ಟಿ, ಮ್ಯಾರೇಜ್ ಪಾರ್ಟಿಯ ಮೂಲಕ ಕರಾವಳಿ ತೀರದಲ್ಲಿ ಘಟಿಸುವ ಹಾಸ್ಯಪ್ರಧಾನ ಕಥನವನ್ನು ದೃಶ್ಯ ರೂಪಕ್ಕಿಳಿಸಿದ್ದಾರೆ. ಕರಾವಳಿ ತೀರ ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ ಮ್ಯಾರೇಜ್ ಪಾರ್ಟಿ ಚಿತ್ರ ಚಿತ್ರೀಕರಣದ ನಂತರದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದೆ

ಮ್ಯಾರೇಜ್ ಪಾರ್ಟಿ ಗಟ್ಟಿ ಕಥೆ, ಭರಪೂರ ಮನೋರಂಜನೆ ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ಎನ್ನುವುದನ್ನು ನಿರ್ದೆಶಕರು ಬಹಿರಂಗಗೊಳಿಸಿದ್ದಾರೆ.

ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‍ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ

Related Posts

ಹಾರರ್ – ಥ್ರಿಲ್ಲರ್ ‘418’ ಚಿತ್ರ ಅಕ್ಟೋಬರ್ 23 ರಂದು ತೆರೆಗೆ ; ನಿರ್ದೇಶಕ ಪ್ರಶಾಂತ್ ನೀಲ್ ಬೆಂಬಲ

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ” 418″ ಚಿತ್ರ ಹಾರರ್- ಥ್ರಿಲ್ಲರ್ ಕಥೆ ಒಳಗೊಂಡಿದ್ದು ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಅಕ್ಟೋಬರ್ 23 ರಂದು ತೆರೆಗೆ ಬರಲು ಸಜ್ಜಾಗಿದೆ. ‘ಉಗ್ರಂ’ ಚಿತ್ರದಿಂದಲೂ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿರುವ ಕೀರ್ತನ್ ನಡಗೌಡ…

ಎ ಐ ಸಿನಿಮಾ ನಿರ್ಮಾಣಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಹಯೋಗ

ಮುಂದಿನ ಪೀಳಿಗೆಯ ಚಿತ್ರಣ ಮತ್ತು ಎಐ ತಂತ್ರಜ್ಞಾನ. ಎಂಐಪಿಕಾಮ್ ಕೇನ್ಸ್ 12 ಹಾಗು ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಗ್ರೂಪ್‍ನಿಂದ ಬೆಂಬಲಿತ ಅಸ್ಟ್ರಾ ಸ್ಟುಡಿಯೋಸ್ ಮತ್ತು ವರ್ಸೆ ಇನ್ನೋವೇಶನ್ ಅಸ್ಟ್ರಾ-ಸ್ಪಾರ್ಕ್ ಅಲೈಯನ್ಸ್ ರಚಿಸಲು ಮುಂದಾಗಿವೆ. ಈ ಘೋಷಣೆಯು ಅಸ್ಟ್ರಾ ಸ್ಟುಡಿಯೋಸ್‍ತಂತ್ರಜ್ಞಾನ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581