"Martin" will release in 6 languages ​​including Kannada on October 11 in 3 thousand theaters

ಕನ್ನಡ ಸೇರಿ 6 ಭಾಷೆಗಳಲ್ಲಿ “ಮಾರ್ಟಿನ್ ” ಅಕ್ಟೋಬರ್ 11 ರಂದು 3 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ - CineNewsKannada.com

ಕನ್ನಡ ಸೇರಿ 6 ಭಾಷೆಗಳಲ್ಲಿ “ಮಾರ್ಟಿನ್ ” ಅಕ್ಟೋಬರ್ 11 ರಂದು 3 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ “ಮಾರ್ಟಿನ್” ಚಿತ್ರ ಅಕ್ಟೋಬರ್ 11 ರಂದು ತೆರೆಗೆ ಕನ್ನಡ ಸೇರಿ 6 ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ‌

ಅಕ್ಟೋಬರ್ 11 ರಂದು ಬಿಡುಗಡೆಯಾಗುತ್ತಿತುವ ಹೊತ್ತಲೇ ವಿವಿದ ನಗರಗಳಲ್ಲಿ ಬಿಡುಗಡೆ ಪೂರ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಚಿತ್ರತಂಡ.

ಎ ಪಿ ಅರ್ಜುನ್ ನಿರ್ದೇಶನದಲ್ಲಿ ಉದಯ್ ಕೆ ಮೆಹ್ತಾ ನಿರ್ಮಾಣದ, “ಮಾರ್ಟಿನ್” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಮಾರ್ಟಿನ್ ಬಿಡುಗಡೆ ಕುರಿತು ಮಾಹಿತಿ ನೀಡಲು ಚಿತ್ರತಂಡ ಉಪಸ್ಥಿತರಿತ್ತು. ನಿರ್ದೇಶಕ ಎಪಿ ಅರ್ಜುನ್ ಹೊರತು ಪಡಿಸಿ ನಾಯಕ ದೃವ ಸರ್ಜಾ, ನಟಿ ವೈಭವಿ ಶಾಂಡಿಲ್ಯ, ನಿರ್ಮಾಪಕ ಉದಯ್ ಮೆಹ್ತಾ ,ನಟ ಚಿಕ್ಕಣ್ಣ.ಮತ್ತಿತರಿದ್ದರು.

ಈ ವೇಳೆ ಮಾತಿಗಿಳಿದ ನಟ ದೃವ ಸರ್ಜಾ, “ಮಾರ್ಟಿನ್”, ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆಯಿಟ್ಟು ಇಷ್ಟು ದುಡ್ಡನ್ನು ಹಾಕಿದ್ದಾರೆ. ನಮ್ಮ ಮಾವ ಅರ್ಜುನ್ ಸರ್ಜಾ ಉತ್ತಮ ಕಥೆ ಮಾಡಿ ಕೊಟ್ಟಿದ್ದಾರೆ. ಪ್ರತಿಯೊಬ್ಬ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ “ಮಾರ್ಟಿನ್” ಉತ್ತಮವಾಗಿ ಮೂಡಿಬಂದಿದೆ. ಮೂರು ವರ್ಷಗಳ ನಂತರ ಅಕ್ಟೋಬರ್ 11ರಂದು ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.

ಬಿಡುಗಡೆಗೂ ಮುನ್ನ ಅಕ್ಟೋಬರ್ 4ರಂದು ಹೈದರಾಬಾದ್ ನಲ್ಲಿ ಹಾಡೊಂದರ ಬಿಡುಗಡೆಯಾಗಲಿದೆ. ಅಕ್ಟೋಬರ್ 5 ರಂದು ನನ್ನ ಚಿತ್ರ ಪ್ರೀತಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಭೇಟಿ ನೀಡಲಿದ್ದೇವೆ. ಅಕ್ಟೋಬರ್ 6ರಂದು ನನ್ನ ಹುಟ್ಟುಹಬ್ದಂದು ದಾವಣಗೆರೆಯಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಅಕ್ಟೋಬರ್ 8 ರಂದು ಮುಂಬೈನಲ್ಲಿ ಮತ್ತೊಂದು ಹಾಡು ರಿಲೀಸ್ ಆಗಲಿದೆ‌. ಈ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಧ್ರುವ ಸರ್ಜಾ ತಿಳಿಸಿದರು.

ನಿರ್ಮಾಪಕ ಉದಯ್ ಕೆ ಮೆಹ್ತಾ ಮಾತನಾಡಿ “ಮಾರ್ಟಿನ್” ಚಿತ್ರ ಅಕ್ಟೋಬರ್ 11 ರಂದು ಭಾರತದಾದ್ಯಂತ ಸುಮಾರು 3000 ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ . ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ನಟಿ ವೈಭವಿ ಶಾಂಡಿಲ್ಯ ಅವರು “ಮಾರ್ಟಿನ್” ಚಿತ್ರವನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು.

ನಟ ಚಿಕ್ಕಣ್ಣ ಮಾತನಾಡಿ ಮಾರ್ಟಿನ್” ಚಿತ್ರದ ನನ್ನ ಪಾತ್ರ ಚೆನ್ನಾಗಿದೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೊದಲ ಸಿನಿಮಾ ಕೂಡ ಇದು ಎಂದರು

ಛಾಯಾಗ್ರಾಹಕ ಸತ್ಯ ಹೆಗ್ಡೆ, ನೃತ್ಯ ನಿರ್ದೇಶಕರಾದ ಮುರಳಿ, ಇಮ್ರಾನ್ ಸರ್ದಾರಿಯಾ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಣಿ ಶರ್ಮ ಸಂಗೀತ ನಿರ್ದೇಶನ, ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin