Munikrishna's `Muruga Son of Kaanunu to hit screens on August 29th

ಮುನಿಕೃಷ್ಣ ನಟನೆಯ `ಮುರುಗ ಸನ್ ಆಫ್ ಕಾನೂನು’ ಚಿತ್ರ ಆಗಸ್ಟ್ 29ಕ್ಕೆ ತೆರೆಗೆ - CineNewsKannada.com

ಮುನಿಕೃಷ್ಣ ನಟನೆಯ `ಮುರುಗ ಸನ್ ಆಫ್ ಕಾನೂನು’ ಚಿತ್ರ ಆಗಸ್ಟ್ 29ಕ್ಕೆ ತೆರೆಗೆ

ಕಿರುತೆರೆಯ ಮುರುಗ ಖ್ಯಾತಿಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ಕೊಡೆಮುರುಗ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಇದೀಗ ಮುನಿಕೃಷ್ಣ ನಟನೆ, ನಿರ್ಮಾಣದ ಚಿತ್ರ `ಮುರುಗ ಸನ್ ಆಫ್ ಕಾನೂನು’ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಮುನಿಕೃಷ್ಣ ನಿರ್ಮಾಣದ, ವಿಜಯ್‍ಪ್ರವೀಣ್ ನಿರ್ದೇಶನದ, ಮುನಿಕೃಷ್ಣ, ಮಮತ ರಾವುತ್, ಚಿರಶ್ರೀಅಂಚನ್, ಶೋಭ್ ರಾಜ್, ಥ್ರಿಲರ್ ಮಂಜು, ಉಮೇಶ್, ವಿನಯ ಪ್ರಸಾದ್, ಹುಲಿ ಕಾರ್ತಿಕ್, ಚಂದ್ರ ಪ್ರಭ ಮುಂತಾದವರು ಅಭಿನಯಿಸಿರುವ `ಮುರುಗ ಸನ್ ಆಫ್ ಕಾನೂನು’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ

ನಿರ್ಮಾಪಕರೂ ಆಗಿರುವ ಮುನಿ ಕೃಷ್ಣ, ಮಾತನಾಡಿ ದಿವಂಗತ ನಟ ಪುನೀತ್‍ರಾಜ್‍ಕುಮಾರ್ ಕಡೆಯದಾಗಿ ಶುಭಕೋರಿದ್ದ ಚಿತ್ರ `ಮುರುಗ ಸನ್ ಆಫ್ ಕಾನೂನು’ ಜಾಗ ಕೇಳಿಕೊಂಡು ಊರಿಗೆ ಬರುವ ಖಳನಾಯಕ ನಂತರ ಇಡೀ ಊರನ್ನೇ ತನ್ನ ಕಬ್ಜ ಮಾಡಿಕೊಳ್ಳುತ್ತಾನೆ. ಮುರುಗನ ತಂದೆಯನ್ನೂ ಕೊಲೆ ಮಾಡಿಸುತ್ತಾನೆ. ನಂತರ ಎಲ್.ಎಲ್.ಬಿ.ಓದಿಕೊಂಡಿದ್ದ ಮುರುಗ ಹೇಗೆ ಕಾನೂನಾತ್ಮಕವಾಗಿ ತನ್ನ ಜಾಗದ ಜೊತೆಗೆ ಊರನ್ನೂ ಉಳಿಸಿಕೊಳ್ಳುತ್ತಾನೆ ಎಂಬುದೇ ಮುರುಗ ಸನ್ ಆಫ್ ಕಾನೂನು ಚಿತ್ರದ ಕಥಾಹಂದರ. ಆನೇಕಲ್, ಮಲ್ಪೆ, ಬೆಂಗಳೂರು ಸುತ್ತಮುತ್ತ 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು.

ನಾಯಕಿ ಮಮತಾ ರಾವುತ್ ಮಾತನಾಡಿ ಮದುವೆಯಾದ 15 ದಿನಗಳಲ್ಲಿ ಚಿತ್ರದ ಆಫರ್ ಬಂತು. ವೇಳೆ ಒಂದು ಹಂತದಲ್ಲಿ ಶೂಟಿಂಗ್ ಬಿಟ್ಟು ಹೊರಡುವ ನಿರ್ಧಾರ ಮಾಡಿದ್ದೆ ಆದರೆ ಕಡೆಗೂ ಚಿತ್ರೀಕರಣ ಮುಗಿಸಿದ್ದು ಪಾತ್ರ ನನಗೆ ಖುಷಿ ತಂದಿದೆ. ತುಂಬಾ ವರ್ಷಗಳಿಂದ ಹಳ್ಳಿ ಹುಡುಗಿಯ ಪಾತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದಿಂದ ಈಡೇರಿದೆ’ ಎಂದರು.

ಹಿರಿಯ ನಟ ಉಮೇಶ್ ಮಾತನಾಡಿ ಹಿರಿಯ ಕಲಾವಿದನಿಗೆ ಚಿತ್ರದಲ್ಲಿ ಅವಕಾಶ ಕೊಟ್ಟಿರುವುದಕ್ಕೆ ಮುನಿಕೃಷ್ಣ ಅವರಿಗೆ ಧನ್ಯವಾದ ಹೇಳಿದರು.

ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತು ಇನ್ನೋರ್ವ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಚಿತ್ರದ ಹಾಡುಗಳು ಹಾಗೂ ಸಂಗೀತ ಉತ್ತಮ ಆಗಿ ಮೂಡಿ ಬಂದಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುವುದರಲ್ಲಿ ಅನುಮಾನ ಇಲ್ಲ. ಚಿತ್ರ ಆಗಸ್ಟ್ 29ಕ್ಕೆ ಬಿಡುಗಡೆ ಆಗುತ್ತಿದೆ ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಿ ಎಂದು ಮನವಿ ಮಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin