New actor Hemanth Kumar's arrival in Kannada film industry; hopes are high

ಕನ್ನಡ ಚಿತ್ರರಂಗಕ್ಕೆ ನವ ನಟ ಹೇಮಂತ್ ಕುಮಾರ್ ಆಗಮನ ; ಭರವಸೆ ಹೆಚ್ಚಳ - CineNewsKannada.com

ಕನ್ನಡ ಚಿತ್ರರಂಗಕ್ಕೆ ನವ ನಟ ಹೇಮಂತ್ ಕುಮಾರ್ ಆಗಮನ ; ಭರವಸೆ ಹೆಚ್ಚಳ

ಕನ್ನಡ ಚಿತ್ರರಂಗಕ್ಕೆ ಅಲ್ಫಾ ಚಿತ್ರದ ಮೂಲಕ ನವ ನಟ ಹೇಮಂತ್ ಕುಮಾರ್ ಆಗಮನವಾಗಿದೆ. ಈ ಮೂಲಕ ಚಿತ್ರರಂಗದಲ್ಲಿ ತೀವ್ರ ಕುತೂಹಲ ಹೆಚ್ಚು ಮಾಡಿದ್ದು ಭವಿಷ್ಯದಲ್ಲಿ ಸಾಂಡಲ್ ವುಡ್ ನಲ್ಲಿ ನೆಲೆ ನಿಲ್ಲುವ ಎಲ್ಲಾ ಲಕ್ಷಣ ತೋರಿದ್ದಾರೆ‌

ಆಲ್ಫಾ ಅಂದರೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್. ಅಲ್ಫಾ ಮೂಲಕ ಅಬ್ಬರದ ಎಂಟ್ರಿ ನೀಡಿದ್ದಾರೆ. ಈ ಎಂಟ್ರಿ ನೋಡಿದರೆ ಮುಂದೊಮ್ಮೆ ಚಿತ್ರರಂಗದಲ್ಲಿ ಡಾಮಿನೇಟ್ ಮಾಡಬಲ್ಲ ಆಲ್ಫಾ ಪ್ರತಿಭೆಯಾಗಿ ಕಾಣಿಸುತ್ತಾರೆ.
.
ಚಿಕ್ಕ ವಯಸ್ಸಿನಿಂದಲೇ ಸಿನಿಮಾ‌ ನಾಯಕನಾಗಬೇಕು ಎಂದು ಕನಸು ಕಂಡವರು. ಅದಕ್ಕಾಗಿ ಏನೆಲ್ಲ ಹಾರ್ಡ್ ವರ್ಕ್ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ಹಾಗಾಗಿಯೇ ಆಲ್ಫಾ‌ ಚಿತ್ರ ನೋಡುವಾಗ ಫೈಟ್ , ಡಾನ್ಸ್ ಎಲ್ಲವೂ ತುಂಬಿದ ಕಂಪ್ಲೀಟ್ ಪ್ಯಾಕೇಜ್ ಆಗಿ ಹೊರ ಬಂದಿದೆ.

ಎಲ್ಲವನ್ನೂ ಕಲಿತು, ಗಮನ ಸೆಳೆಯಲೇಬೇಕು ಅಂತ ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಆ್ಯಕ್ಷನ್ ಹೀರೋ ಆಗಬೇಕಾದರೆ ಫಿಟ್ ಆ್ಯಂಡ್ ಫೈನ್ ಆಗಿರಲೇಬೇಕು ಎಂದು ದೇಹ ದಂಡಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮೊದಲ ನೋಟಕ್ಕೆ ಮೈಕಟ್ಟಿನಿಂದಲೇ ಗಮನ ಸೆಳೆಯುತ್ತಿದ್ದಾರೆ.

ತೆಲುಗಿನ‌ ಖ್ಯಾತ ಸಾಹಸ ನಿರ್ದೇಶಕ ವಿಜಯ್ ಮಾಸ್ಟರ್ ಫೈಟ್ ಗಳು ಅದ್ಭುತವಾಗಿ ಮೂಡಿ‌ಬಂದಿದೆ. ಕೈ ಮೇಲೆ ನಿಜವಾಗಿಯೂ ಬೆಂಕಿ ಹಚ್ಚಿ ನಟಿಸಿದ್ದಾರೆ. ಆದರೆ ಇಷ್ಟೆಲ್ಲ‌ ಕಷ್ಟಪಟ್ಟಿದ್ದರೂ ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ತಾನೊಬ್ಬನೇ ಕಾರಣವಲ್ಲ ಎಂದು ವಿನಯ ಪ್ರದರ್ಶಿಸುತ್ತಾರೆ ಹೇಮಂತ್.

ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಖಳನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಮಾತ್ರವಲ್ಲ, ಕೆ.ಜಿ.ಎಫ್ , ಕಾಂತಾರದಂಥ ಪ್ಯಾನ್ ಇಂಡಿಯಾ‌ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರ ದಂಡೇ ಇಲ್ಲಿದೆ.‌ ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಅವಿನಾಶ್, ರಾಘು ಶಿವಮೊಗ್ಗ, ರಮೇಶ್ ಇಂದಿರಾ ಮೊದಲಾದ ಕಲಾವಿದರ ಭರ್ಜರಿ ತಾರಾಗಣದ ಜತೆಗೆ ಕಥೆ ಕೂಡ ಗಮನ ಸೆಳೆದಿದೆ

ತೆಲುಗು ಡಬ್ಬಿಂಗ್ ರೈಟ್ಸ್ ಕೇಳಿ ಕರೆ ಮಾಡಿದ್ದರು. ಒಟ್ಟಿನಲ್ಲಿ ಕನ್ನಡ ಇಂಡಸ್ಟ್ರಿಗೆ ಒಬ್ಬ ಹೊಸ ಹೀರೋ ಎಂಟ್ರಿಯಾಗಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin